ಹಮಾಲಿ ಕೆಲಸಕ್ಕೆ ಹೋಗಿದ್ದ ತಂದೆ ನಾಪತ್ತೆ! ಅಪ್ಪನ ಹುಡುಕಿಕೊಡುವಂತೆ ಒಬ್ಬನೇ ಮಗ ಕಣ್ಣೀರು!

By Ravi Janekal  |  First Published Jul 4, 2024, 4:32 PM IST

ಕೆಲಸಕ್ಕೆ ಹೋಗಿಬರುವುದಾಗಿ ಮನೆಯಿಂದ ಹೋಗಿದ್ದ ತಂದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾಗಿ 50 ದಿನಗಳು ಕಳೆದರೂ ಇದುವರೆಗೂ ಸುಳಿವು ಸಿಗದ್ದಕ್ಕೆ ತಂದೆಯ ನೆನಪಲ್ಲಿ ಮಗ, ಕುಟುಂಬಸ್ಥರು ತಂದೆಯನ್ನ ಹುಡುಕಿಕೊಡುವಂತೆ ಪೊಲೀಸ್ ಠಾಣೆಯೆದುರು ಕಣ್ಣೀರು ಹಾಕುತ್ತಿದ್ದಾರೆ.


ಧಾರವಾಡ (ಜು.4): ಕೆಲಸಕ್ಕೆ ಹೋಗಿಬರುವುದಾಗಿ ಮನೆಯಿಂದ ಹೋಗಿದ್ದ ತಂದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾಗಿ 50 ದಿನಗಳು ಕಳೆದರೂ ಇದುವರೆಗೂ ಸುಳಿವು ಸಿಗದ್ದಕ್ಕೆ ತಂದೆಯ ನೆನಪಲ್ಲಿ ಮಗ, ಕುಟುಂಬಸ್ಥರು ತಂದೆಯನ್ನ ಹುಡುಕಿಕೊಡುವಂತೆ ಪೊಲೀಸ್ ಠಾಣೆಯೆದುರು ಕಣ್ಣೀರು ಹಾಕುತ್ತಿದ್ದಾರೆ.

ದ್ಯಾಮಣ್ಣ ಹಡಪದ(54), ಕಾಣೆಯಾದ ತಂದೆ, ಮಾರಡಗಿ ಗ್ರಾಮದವರಾದ ದ್ಯಾಮಣ್ಣ ಕೆಎಂಎಲ್‌ನಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಕಳೆದ ಮೇ.19,2024 ರಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದ ದ್ಯಾಮಣ್ಣ ಮನೆಗೆ ವಾಪಸ್ ಬಂದಿಲ್ಲ. ಸುತ್ತಮುತ್ತಲು ವಿಚಾರಿಸಿದರೂ ಸುಳಿವಿಲ್ಲ. ಮರುದಿನವೂ ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಕುಟುಂಬ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

Tap to resize

Latest Videos

ಕಾಣೆಯಾದ ತಂದೆಗಾಗಿ 2 ವರ್ಷ ಬಳಿಕ ಹೈಕೋರ್ಟ್‌ಗೆ ಹೋದ ಮಕ್ಕಳು!

ತಂದೆಯನ್ನ ಹುಡುಕಿಕೊಡುವಂತೆ ದೂರು ಕೊಟ್ಟು 50 ದಿನಗಳೇ ಕಳೆದರೂ ಇದುವರೆಗೆ ಪತ್ತೆ ಮಾಡದ ಪೊಲೀಸರು. ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಥಳೀಯ ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿರುವ ಮಗ. ತಂದೆಯನ್ನ ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.

ತಂದೆಯನ್ನ ಕಳೆದುಕೊಂಡು ಕಂಗಾಲಾಗಿರುವ ಮಗ ಏಷ್ಯಾನೆಟ್ ಸುವರ್ಣನ್ಯೂಸ್ ವರದಿಗಾರರೊಂದಿಗೆ ನೋವು ತೋಡಿಕೊಂಡಿದ್ದಾರೆ, 'ತಂದೆಗೆ ಏನಾಗಿದೆ ಅನ್ನೋದು ಗೊತ್ತಾಗುತ್ತಿಲ್ಲ, ಎಲ್ಲಿದ್ದಾರೆ, ಹೇಗಿದ್ದಾರೋ ಗೊತ್ತಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿದರೂ ಪತ್ತೆ ಮಾಡಿಲ್ಲ. ಹೀಗಾಗಿ ನಮಗೆ ಅಪ್ಪನ ಚಿಂತೆಯಾಗಿದೆ ಎಂದು ಅನ್ನ ನೀರು ಬಿಟ್ಟು ಹುಡುಕುತ್ತಿದ್ದಾನೆ. 'ಎಲ್ಲಾದ್ರೂ ಇರಲಿ ಆರಾಮಿರಲಿ' ಎಂದು ಮಗ ಕಣ್ಣೀರು ಹಾಕಿದ ಮಗ. ಧಾರವಾಡ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮಾಡದೇ ನಾಪತ್ತೆಯಾಗಿರುವ ದ್ಯಾಮಣ್ಣರನ್ನ ಪತ್ತೆಹಚ್ಚುವ ಕೆಲಸ ಮಾಡಲಿ. 

click me!