ಸಿಎಂ ಬದಲಾವಣೆ, ಡಿಸಿಎಂ ಸ್ಥಾನ ಹೆಚ್ಚಳ: ಲಿಂಗಾಯತ ಸಮುದಾಯ ಕಡೆಗಣಿಸದಂತೆ ಸರ್ಕಾರಕ್ಕೆ ಶ್ರೀಶೈಲ ಜಗದ್ಗುರುಗಳು ಎಚ್ಚರಿಕೆ!

Published : Jul 04, 2024, 04:00 PM IST
ಸಿಎಂ ಬದಲಾವಣೆ, ಡಿಸಿಎಂ ಸ್ಥಾನ ಹೆಚ್ಚಳ:  ಲಿಂಗಾಯತ ಸಮುದಾಯ ಕಡೆಗಣಿಸದಂತೆ ಸರ್ಕಾರಕ್ಕೆ ಶ್ರೀಶೈಲ ಜಗದ್ಗುರುಗಳು ಎಚ್ಚರಿಕೆ!

ಸಾರಾಂಶ

ರಾಜ್ಯದಲ್ಲಿ ಸರಣಿ ಕೊಲೆ, ಅತ್ಯಾಚಾರ ನಡೆದಿರುವುದು ಬಹಳ ಆಘಾತಕಾರಿ ಬೆಳವಣಿಗೆ ಇದು. ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳದಿರುವುದೇ ಇಂತಹ ಕೃತ್ಯಗಳು ಹೆಚ್ಚಲು ಕಾರಣ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯಶ್ರೀಗಳು ತಿಳಿಸಿದರು.

ರಾಯಚೂರು (ಜು.4): ರಾಜ್ಯದಲ್ಲಿ ಸರಣಿ ಕೊಲೆ, ಅತ್ಯಾಚಾರ ನಡೆದಿರುವುದು ಬಹಳ ಆಘಾತಕಾರಿ ಬೆಳವಣಿಗೆ ಇದು. ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳದಿರುವುದೇ ಇಂತಹ ಕೃತ್ಯಗಳು ಹೆಚ್ಚಲು ಕಾರಣ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯಶ್ರೀಗಳು ತಿಳಿಸಿದರು.

ಇಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಕೃತ್ಯಗಳಲ್ಲಿ ತೊಡಗಿದವರು ಎಷ್ಟೇ ಪ್ರತಿಷ್ಠಿತ ವ್ಯಕ್ತಿಯಾಗಿದ್ರೂ ಕೂಡಲೇ ಕ್ರಮ ಕೈಗೊಳ್ಳಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂದು ನಾವು ಸೆಲೆಬ್ರಿಟಿಗಳು ಅಂತಾ ಏನು ಕರಿತೀವಿ ಬಹಳಷ್ಟು ಪ್ರಚಾರದಲ್ಲಿರುವ ಇಂತವರೇ ದುಷ್ಕೃತ್ಯಕ್ಕೆ ಕೈಹಾಕಿರೋದು ಸಾಮಾನ್ಯ ಜನರಿಗೂ ಇಂತಹ ಕೃತ್ಯಗಳಿಗೆ ಪ್ರೇರಣೆ ನೀಡಿದಂತಾಗಿದೆ. ಹೀಗಾಗಿ ಸಾಮಾನ್ಯ ಜನರ ಜೊತೆಗೆ ಹೆಚ್ಚು ಸುದ್ದಿಯಲ್ಲಿರೋರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.

 

'ನೀವು ಯಾರನ್ನಾದ್ರೂ ಸಿಎಂ, ಡಿಸಿಎಂ ಮಾಡಿಕೊಳ್ಳಿ; ನಮಗೆ ಮೀಸಲಾತಿ ಕೊಡಿ': ಜಯಮೃತ್ಯುಂಜಯಶ್ರೀ

ಇನ್ನು ಸಿಎಂ ಬದಲಾವಣೆ ವಿಚಾರ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ವಿಚಾರವಾಗಿ ಮಾತನಾಡಿದ ಶ್ರೀಗಳು, ಲಿಂಗಾಯತ ಸಮುದಾಯ ಕಡೆಗಣಿಸಬಾರದು. ಈಗಾಗಲೇ ನಮ್ಮ ಸ್ಪಷ್ಟವಾದ ಅಭಿಪ್ರಾಯ ತಿಳಿಸಿದ್ದೇವೆ. ಕರ್ನಾಕಟದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರೋದ್ರಿಂದ ಪ್ರತಿಯೊಂದು ಪಕ್ಷಗಳು ಸ್ಥಾನಮಾನ ನೀಡುವ ಸಂದರ್ಭದಲ್ಲಿ ನಮ್ಮ ಸಮುದಾಯಕ್ಕೆ ಆದ್ಯತೆ ಕೊಡಬೇಕು, ಕಡೆಗಣಿಸಬಾರದು ಎಂದು ಪುನರುಚ್ಚರಿಸಿದರು.

ಎಲ್ಲಾ ಪಕ್ಷದಲ್ಲೂ ತಮ್ಮ ಸಮುದಾಯದ ಸಮರ್ಥ ನಾಯಕರು ಇದ್ದಾರೆ. ಸದ್ಯ ಆಡಳಿತ ಪಕ್ಷದಲ್ಲಿ ಶಾಮನೂರು ಶಿವಶಂಕ್ರಪ್ಪನವರು,ಎಸ್ ಎಸ್ ಮಲ್ಲಿಕಾರ್ಜುನ ಇದ್ದಾರೆ. ಈಶ್ವರ್ ಖಂಡ್ರೆ,ಎಂ.ಬಿ. ಪಾಟೀಲ್, ಈ ಭಾಗದಲ್ಲಿ ಶರಣಬಸಪ್ಪ ದರ್ಶನಾಪುರ ಇದ್ದಾರೆ. ಸಾಕಷ್ಟು ಜನ ಸಮಾಜದ ಹಿರಿಯರಿದ್ದಾರೆ. ಅವರನ್ನ ಪರಿಗಣಿಸಬೇಕು ಎಂದು ಶ್ರೀಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚನ್ನಪಟ್ಟಣ ಉಪಚುನಾವಣೆ: ಯಾರೇ ಅಭ್ಯರ್ಥಿ ಇದ್ರೂ ನನ್ನ ಮುಖ ನೋಡಿ ಓಟು ಹಾಕಿ: ಡಿಕೆ ಶಿವಕುಮಾರ

ಉತ್ತರ ಪ್ರದೇಶದಲ್ಲಿ ಸತ್ಸಂಗದ ವೇಳೆ ಸಾವು-ನೋವು ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಸಂತ್ಸಂಗದಲ್ಲಿ ನೂರಾರು ಜನ ಮರಣ ಹೊಂದಿದ್ದಾರೆ. ಅದಕ್ಕೆ ನಾವು ಖೇದ ವ್ಯಕ್ತಪಡಿಸುತ್ತೇನೆ. ಧಾರ್ಮಿಕ ಕಾರ್ಯಕ್ರಗಳಿಗೆ ಜನರು ಭಕ್ತಿಯಿಂದ ಆಗಮಿಸಿರುತ್ತಾರೆ. ಭಕ್ತರ ಭಾವನೆಗಳಿಗೆ ಗೌರವ ಕೊಡುವಂಥದ್ದು. ಭಕ್ತರ ಸುರಕ್ಷತೆಯನ್ನ ವ್ಯವಸ್ಥೆ ಮಾಡೋದು ಕಾರ್ಯಕ್ರಮದ ಆಯೋಜಕರ ಜವಾಬ್ದಾರಿ. ಕಾರ್ಯಕ್ರಮವನ್ನ ಆಯೋಜಿಸಿದವರು, ಸಿಬ್ಬಂದಿ, ರಕ್ಷಣೆ ಕೊರತೆಯಿಂದ ಇಂತಹ ಘಟನೆ ನಡೆದಿದೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇಂತಹ ದುರ್ಘಟನೆ ಮರುಕಳಿಸದಂತೆ ಧಾರ್ಮಿಕ ಸಂಸ್ಥೆಗಳು ರಕ್ಷಣೆ ಜವಾಬ್ದಾರಿ ವಹಿಸಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ