Chamarajanagara: ಕಣ್ಣೆದುರೇ ಮಗಳನ್ನು ಎಳೆದೊಯ್ದ ಚಿರತೆ, ವೀರಾವೇಶದಿಂದ ಓಡಿಸಿ ರಕ್ಷಿಸಿದ ತಂದೆ!

By Gowthami KFirst Published Jun 28, 2023, 7:00 PM IST
Highlights

ಕೊಳ್ಳೇಗಾಲ ವನ್ಯಜೀವಿ ವಿಭಾಗದ ಕಗ್ಗಲಿಗುಂಡಿ ಪೋಡುವಿನ ಅರಣ್ಯಕ್ಕೆ ಚಿರತೆಯೊಂದು ತನ್ನ 6 ವರ್ಷದ ಮಗಳನ್ನು ಎಳೆದೊಯ್ಯಲು  ಮುಂದಾದಾಗ ಎಚ್ಚೆತ್ತ ತಂದೆ ಮಗಳನ್ನು ಚಿರತೆಯ ದವಡೆಯಿಂದ ರಕ್ಷಿಸಿ ಪ್ರಾಣ ಉಳಿಸಿದ ಸಾಹಸ ನಡೆದಿದೆ.

ಹನೂರು (ಜೂ.28):  ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ (BRT Tiger Reserve) ಕೊಳ್ಳೇಗಾಲ ವನ್ಯಜೀವಿ (wildlife sanctuary kollegal) ವಿಭಾಗದ ಕಗ್ಗಲಿಗುಂಡಿ ಪೋಡುವಿನ ಅರಣ್ಯಕ್ಕೆ ಚಿರತೆಯೊಂದು ತನ್ನ 6 ವರ್ಷದ ಮಗಳನ್ನು ಎಳೆದೊಯ್ಯಲು  ಮುಂದಾದಾಗ ಎಚ್ಚೆತ್ತ ತಂದೆ ಮಗಳನ್ನು ಚಿರತೆಯ ದವಡೆಯಿಂದ ರಕ್ಷಿಸಿದ ದಾರುಣ ಘಟನೆ ನಡೆದಿದೆ. ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ  ಈ ಘಟನೆ ನಡೆದಿದೆ. 

ಸೋಮವಾರ ರಾತ್ರಿ ಬಾಲಕಿ ಮೊಬೈಲ್ ನೋಡಿಕೊಂಡಿದ್ದಾಗ ಚಿರತೆ ಆಕೆಯ ಕತ್ತು ಹಿಡಿದು ಎಳೆದೊಯ್ಯಲು ಯತ್ನಿಸಿತ್ತು. ಬಾಲಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದರಿಂದ ಆಕೆಯ ತಂದೆ ಮತ್ತು ಇತರ ಗ್ರಾಮಸ್ಥರು ಚಿರತೆಯನ್ನು ಬೆನ್ನಟ್ಟಲು ಮುಂದಾದರು, 

Latest Videos

ರಾಮು ಅವರ ಓಡಾಟದಿಂದ ಬೆಚ್ಚಿಬಿದ್ದ ಚಿರತೆ ಬಾಲಕಿಯನ್ನು ಮನೆ ಸಮೀಪದ 10 ಅಡಿ ಆಳದ ಕಂದಕಕ್ಕೆ ಹಾಕಿ ಓಡಿದೆ. ಆ ಪ್ರದೇಶದಲ್ಲಿ ವಾಸಿಸುವ 45 ಕುಟುಂಬಗಳ ಮೇಲೆ ಕಾಡು ಪ್ರಾಣಿಗಳು, ವಿಶೇಷವಾಗಿ ಆನೆಗಳು ಮತ್ತು  ಚಿರತೆ, ಇತರ ಕಾಡು ಪ್ರಾಣಿಗಳು ಊರಿಗೆ ಬರದಂತೆ ತಡೆಯಲು ಕಂದಕವನ್ನು ನಿರ್ಮಿಸಲಾಗಿದೆ. ಬಾಲಕಿಯನ್ನು ರಕ್ಷಿಸಲಾಯಿತಾದರೂ ರಾಮು, ಆತನ ಪತ್ನಿ ಲಲಿತಾ ಮತ್ತು ಇತರ ಗ್ರಾಮಸ್ಥರು ಇನ್ನೂ ಆಘಾತದಿಂದ ಹೊರಬಂದಿಲ್ಲ.

2 ಕಿಮೀ ಜಾಮ್ ಆಗೋದಾದ್ರೆ ನಾವ್ಯಾಕೆ ನೈಸ್ ರೋಡ್ ಟೋಲ್ ಶುಲ್ಕ ಕಟ್ಟಬೇಕು, ಸವಾರರ ಪ್ರಶ್ನೆ

ಗಾಯಗೊಂಡ ಸುಶೀಲಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್‌ ಆಸ್ಪತ್ರೆಗೆ   ದಾಖಲಾಗಿದೆ. ತಡರಾತ್ರಿ ಮಾಹಿತಿ ಪಡೆದುಕೊಂಡ ಮಾಜಿ ಶಾಸಕ ಆರ್‌ ನರೇಂದ್ರ ಮಂಗಳವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡು ಚಿರತೆ ದಾಳಿ ನಡೆಸಿದ ಸ್ಥಳ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಹಾಗೂ ಗ್ರಾಮದವರಿಗೆ ಚಿರತೆ ಹಿಡಿಯುವವರೆಗೂ ಎಚ್ಚರದಿಂದ ಇರಬೇಕು ಎಂದು ಸೂಚಿಸಿದರು.

ಚಿರತೆ ದಾಳಿಯಿಂದ ಗಾಯಗೊಂಡಿರುವ ವಿದ್ಯಾರ್ಥಿನಿಗೆ ಸರ್ಕಾರದಿಂದ ಬರಬೇಕಾಗಿರುವ ಪರಿಹಾರ ಹಣವನ್ನು ಆದಷ್ಟುಬೇಗ ನೀಡುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ರವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್, ರಾಹುಲ್ ಗಾಂಧಿ ವಿರುದ್ಧ ತನಿಖೆಗೆ

ಇದೆ ವೇಳೆ ಬಿಆರ್‌ಟಿ ವಲಯದ ಉಪ ವಲಯ ಅರಣ್ಯಾಧಿಕಾರಿ ಸಚಿನ್‌ ಚೌಹಾಣ್‌ ಮಾತನಾಡಿ ಗ್ರಾಮದ ನಾಲ್ಕು ಕಡೆ ಬೋನ್‌ ಇರಿಸಲಾಗಿದೆ. ತಡರಾತ್ರಿಯಿಂದಲೇ ನಮ್ಮ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಇಂದು ಸುಮಾರು 30 ರಿಂದ 40 ಸಿಬ್ಬಂದಿಯನ್ನು ಬೆಳಗ್ಗೆ ಹಾಗೂ ರಾತ್ರಿ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಲಾಗಿದೆ. ಆದಷ್ಟುಬೇಗ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವುದಾಗಿ ಮಾಜಿ ಶಾಸಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್‌ ದೊರೆರಾಜ್‌, ಮುಖಂಡರಾದ ತಿಮ್ಮೇಗೌಡ, ನಾರಾಯಣಗೌಡ, ಷಣ್ಮುಖ ಹಾಜರಿದ್ದರು.

ಚಿರತೆ ದಾಳಿಯಿಂದ ಗಾಯಗೊಂಡಿರುವ ವಿದ್ಯಾರ್ಥಿನಿ ಸುಶೀಲ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಮನವಿ ಮಾಡಿದ ತಕ್ಷಣವೇ ಬಿಆರ್‌ಟಿ ವನ್ಯಜೀವಿ ವಲಯದ ದೂರವಾಣಿ ಮುಖಾಂತರ ಮಾತನಾಡಿ ಸೂಚನೆ ನೀಡಿದ್ದಾರೆ. ಇದಲ್ಲದೆ ಗಾಯಾಳುಗೆ ಸರ್ಕಾರದಿಂದ ನೀಡುವ ಪರಿಹಾರವನ್ನು ಆದಷ್ಟುಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ.
- ಆರ್‌.ನರೇಂದ್ರ, ಮಾಜಿ ಶಾಸಕ, ಹನೂರು ವಿಧಾನಸಭಾ ಕ್ಷೇತ್ರ

ಅರಣ್ಯ ಉಪ ಸಂರಕ್ಷಣಾಧಿಕಾರಿ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ದೀಪ್ ಜೆ, ಇದು ಗ್ರಾಮಸ್ಥರ ಮೇಲೆ ಕಾಡು ಪ್ರಾಣಿಯ ದಾಳಿ ಮಾಡಿರುವ ಮೊದಲ ಘಟನೆಯಾಗಿದೆ. 

ಬಾಲಿಕಿಯ ಕೆಳಗಿನ ದವಡೆ ಮುರಿದು ಮುಖ ಮತ್ತು ಕುತ್ತಿಗೆಗೆ ಗಾಯವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಬಾಲಕಿ ಸ್ಥಿರವಾಗಿದ್ದಾಳೆ ಮತ್ತು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಡಿಸಿಎಫ್ ತಿಳಿಸಿದ್ದಾರೆ.

ಘಟನಾ ಸ್ಥಳದ ಸುತ್ತಮುತ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸ್ಥಳದಲ್ಲಿ ಪ್ರಾಣಿಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಸಹಿತ ಬೋನುಗಳನ್ನು ಅಳವಡಿಸಿದ್ದಾರೆ. ಚಿರತೆಯ ಮೇಲೆ ಕಣ್ಣಿಡಲು ಅನೇಕ ಕಡೆಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸಹ ಇರಿಸಲಾಗಿದೆ.

ಮೈಸೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮಾತನಾಡಿ, ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.  ಮುಸ್ಸಂಜೆಯ ನಂತರ ತಮ್ಮ ಮನೆಗಳಿಂದ ಏಕಾಂಗಿಯಾಗಿ ಹೊರಬರದಂತೆ  ಸಲಹೆ ನೀಡಲಾಗಿದೆ ಎಂದಿದ್ದಾರೆ.

click me!