ಭಾರತೀಯ ಕೃಷಿಕ ಸಮಾಜ ಸಂಘಟನೆ ಗುರುತಿನ ಚೀಟಿ, ಸದಸ್ಯತ್ವ ಫೀ ಅಂತಾ ಗದಗ ಜಿಲ್ಲೆಯ ರೈತರಿಂದ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ.
ಗದಗ (ಫೆ.9) : ಭಾರತೀಯ ಕೃಷಿಕ ಸಮಾಜ ಸಂಘಟನೆ ಗುರುತಿನ ಚೀಟಿ, ಸದಸ್ಯತ್ವ ಫೀ ಅಂತಾ ಗದಗ ಜಿಲ್ಲೆಯ ರೈತರಿಂದ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ.
ಬೆಂಗಳೂರು ಮೂಲದ ರಘುರಾಮರೆಡ್ಡಿ ಎಂಬಾತ ರೈತ ಸಂಘಟನೆಯ ಅಧ್ಯಕ್ಷ ಅಂತಾ ಹೇಳಿ, ಒಬ್ಬ ರೈತರಿಂದ 1,100 ರೂಪಾಯಿ ಹಣ ವಸೂಲಿ ಮಾಡಿದ್ದು, ಹಣ ಪಡೆದ ರಘುರಾಮರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗದಗ ಎಸ್ ಪಿಗೆ ದೂರು ನೀಡಲಾಗಿದೆ.
undefined
ಕೊಡಗು: ಕಾಫಿ ಬೀಜ ರಕ್ಷಣೆಗೆ ಸಿಸಿ ಕ್ಯಾಮೆರಾ ಮೊರೆ ಹೋದ ರೈತರು..!
ಗದಗ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನ ನೇಮಿಸಿ ಅವರ ಮೂಲಕವೇ ಮೂವತ್ತಕ್ಕೂ ಹೆಚ್ಚು ರೈತರಿಂದ ಹಣ ವಸೂಲಿ ಮಾಡಲಾಗಿದೆ. ಈ ಬಗ್ಗೆ ಖುದ್ದು ಜಿಲ್ಲಾಧ್ಯಕ್ಷರಾಗಿರೋ ಬಸಯ್ಯ ಗುಡ್ಡಿಮಠ ಅವರು, ರಘುರಾಮರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಸದಸ್ಯತ್ವವೂ ನಕಲಿಯಾಗಿಯೋ ಬಗ್ಗೆ ಸಂಶಯ ಇದೆ. ಸದಸ್ಯತ್ವ ಅಂತಾ ಒಟ್ಟು ಒಂದು 1,40,800 ರೂಪಾಯಿ ಹಣವನ್ನ ಫೋನ್ ಪೇಯಿಂದ ನೀಡಿದ್ವಿ. ಐಡಿ ಕಾರ್ಡ್ ನವೀಕರಣ ಹೆಸರಲ್ಲಿ ಮತ್ತೆ 11 ನೂರು ರೂಪಾಯಿ ಹಣ ವಸೂಲಿ ಮಾಡೋದಕ್ಕೆ ಹೇಳಿದ್ರು. ಆಗ ಸಂಶಯ ಬಂದು ರಾಷ್ಟ್ರೀಯ ಅಧ್ಯಕ್ಷ ಡಾ. ಕೃಷ್ಣಬೀರ್ ಚೌಧರಿ ಅವರನ್ನು ಕೇಳಿದ್ವಿ. ಆದರೆ ಅವರು ಹೇಳುವಂತೆ ಇನ್ನೂ ರಾಜ್ಯ ಅಧ್ಯಕ್ಷರ ನೇಮಕವೇ ಆಗಿಲ್ಲ. ನೀವು ಕೊಟ್ಟ ಹಣ ಈ ವರೆಗೆ ರಾಷ್ಟ್ರೀಯ ಸಂಘಟನೆ ಗಮನಕ್ಕೆ ಬಂದಿಲ್ಲ. ನಿಮ್ಮ ಹಣವನ್ನ ನೀವೇ ಕೇಳಿ ಪಡೆಯಿರಿ ಅಂತಾ ಹೇಳ್ತಿದ್ದಾರೆ.
ಕೃಷ್ಣಬೀರ್ ಅವರ ಜೊತೆಗೆ ಮಾತ್ನಾಡಿರೋ ಆಡಿಯೋ ತುಣುಕನ್ನೂ ರಿಲೀಸ್ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೂ ಬಾರದೆ ಹಣ ಪಡೆದಿರೋ ನಕಲಿ ಅಧ್ಯಕ್ಷ ರಘುರಾಮ ರೆಡ್ಡಿ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಅಂತಾ ರೈತರು ಆಗ್ರಹಿಸಿದ್ದಾರೆ.
ರೈತರ ನಿರೀಕ್ಷೆ ಹುಸಿ; ಪಿಎಂ ಕಿಸಾನ್ ವಾರ್ಷಿಕ ಮೊತ್ತ 6 ಸಾವಿರಕ್ಕಿಂತ ಹೆಚ್ಚು ಮಾಡಲ್ಲ,ಕೇಂದ್ರ ಸ್ಪಷ್ಟನೆ
ರೈತ ಯುವ ಸಂಘಟನೆ ಕಟ್ಟಲು ರಘುರಾಮ ರೆಡ್ಡಿ ಅವರಿಗೆ ಸೂಚಿಸಲಾಗಿತ್ತು. ಆದ್ರೆ, ಅಧ್ಯಕ್ಷನಾಗಿ ಸಂಘಟನೆಯಿಂದ ನೇಮಕಗೊಳ್ಳದಿದ್ದರೂ ಅಧ್ಯಕ್ಷ ಅಂತಾ ಹೇಳಿಕೊಳ್ಳುವ ರಘುರಾಮರೆಡ್ಡಿ, ಐಡಿ ಕಾರ್ಡ್ ಇಲ್ಲದೆ ಕೆಲ ರೈತರಿಗೆ ಸಮಸ್ಯೆಯಾಗಿದೆ. ಸಹಾಯ ಮಾಡ್ಬೇಕು ಅಂತಾ ಹೇಳಿಕೊಂಡು ಹಣವಸೂಲಿ ಮಾಡಿದ್ದಾರೆ. ರಘುರಾಮ ರೆಡ್ಡಿ ವಿರುದ್ಧ ನಕಲಿ ಐಡಿ ಕಾರ್ಡ್ ನೀಡಿದ್ದಲ್ದೆ, ಪದಾಧಿಕಾರಿಗಳು ನೇಮಕ ಮಾಡಿರುವ ಆರೋಪವೂ ಇದೆ. ಗದಗ, ಹುಬ್ಬಳ್ಳಿ, ಧಾರವಾಡ ವ್ಯಾಪ್ತಿಯ ರೈತರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ. ಮೊದಲೇ ಸಂಕಷ್ಟದಲ್ಲಿರೋ ರೈತರಿಗೆ ಈ ರೀತಿ ಹಣ ವಸೂಲಿ ಮಾಡಿ ಮೋಸ ಮಾಡಿರೋ ವ್ಯಕ್ತಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.. ಈ ಮೂಲಕ ಅನ್ನದಾತರಿಗೆ ಮೋಸ ಮಾಡಿದವರಿಗೆ ತಕ್ಕಪಾಠ ಕಲಿಸಬೇಕಾಗಿದೆ.