ಶೂದ್ರರು ರಾಮಾಯಣದಂಥ ಮಹಾನ್ ಗ್ರಂಥ ಬರೆಯಬಲ್ಲರು ಎಂದು ತೋರಿಸಿಕೊಟ್ಟವರು ವಾಲ್ಮೀಕಿ ಋಷಿಗಳು: ಸಿದ್ದರಾಮಯ್ಯ

By Ravi Janekal  |  First Published Feb 9, 2024, 5:35 PM IST

ರಾಮಾಯಣದಂತಹ ಬೃಹತ್ ಗ್ರಂಥ ಬರೆದವರು ವಾಲ್ಮೀಕಿ ಋಷಿಗಳು. ಮಹಾನ್ ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾದುದಲ್ಲ, ಸಂವಿಧಾನ, ಕಾವ್ಯಶಕ್ತಿಯನ್ನು ಶೂದ್ರರು ಬರೆಯಬಹುದು ಎಂಬುದಕ್ಕೆ ಇವೆರೆಡು ಉದಾಹರಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


ದಾವಣಗೆರೆ (ಫೆ.9): ರಾಮಾಯಣದಂತಹ ಬೃಹತ್ ಗ್ರಂಥ ಬರೆದವರು ವಾಲ್ಮೀಕಿ ಋಷಿಗಳು. ಮಹಾನ್ ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾದುದಲ್ಲ, ಸಂವಿಧಾನ, ಕಾವ್ಯಶಕ್ತಿಯನ್ನು ಶೂದ್ರರು ಬರೆಯಬಹುದು ಎಂಬುದಕ್ಕೆ ಇವೆರೆಡು ಉದಾಹರಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇಂದು ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ  ಅಂದೇ ರಾಮಾಯಣ ಕಾಲದಲ್ಲಿ ಇತ್ತು. ಸರ್ವರಿಗೆ ಸಮಾನವಾದ ವ್ಯವಸ್ಥೆ ಇತ್ತು. ಸಮಾಜ ಸರ್ವ ಜನಾಂಗದ ಶಾಂತಿಯ ತೋಟದಂತೆ ಇರಬೇಕು. ಧರ್ಮ ನಮಗೋಸ್ಕರ ಇರಬೇಕೇ ಹೊರತು ನಾವು ಧರ್ಮಕ್ಕೊಸ್ಕರ ಇರಬಾರದು. ಆದರೆ ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಇಂದು ಧರ್ಮವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Tap to resize

Latest Videos

ನಮ್ಮ ಸರ್ಕಾರದಲ್ಲಿ 40% ಕಮಿಷನ್ ಇದ್ರೆ ಕೆಂಪಣ್ಣ ದಾಖಲೆ ನೀಡಲಿ: ಸಿಎಂ ಸಿದ್ದರಾಮಯ್ಯ

ನಾವೆಲ್ಲರೂ ಸಂವಿಧಾನವನ್ನು ಅರ್ಥಮಾಡಿಕೊಂಡು ಅದರ ಆಶಯದಂತೆ ನಡೆದುಕೊಳ್ಳಬೇಕು. ಸಂವಿಧಾನದ ಧೇಯೋದ್ದೇಶಗಳನ್ನು ಜಾರಿಗೊಳಿಸುವುದು ನಮ್ಮ ಉದ್ದೇಶ. ಅದಕ್ಕಾಗಿ ಸಂವಿಧಾನದಲ್ಲಿ ಸಹಿಷ್ಣುತೆ ಸಹಬಾಳ್ವೆಯನ್ನು ಕಾಣಿಸಿದ್ದಾರೆ. ಹಿಂದೆ ಎಲ್ಲಾ ಶೂದ್ರ ವರ್ಗ ಅವಕಾಶಗಳಿಂದ ವಂಚಿತವಾಗಿತ್ತು. ಅಕ್ಷರಶಃ ಸಂಸ್ಕೃತಿಯಿಂದ ಶೂದ್ರರು ವಂಚಿರಾಗಿದ್ರು. ಜಾತಿವ್ಯವಸ್ಥೆಯ ಪರಿಣಾಮದಿಂದಲೇ ನಾವು ಶೂದ್ರರಾಗಿದ್ದೇವೆ. ವಿದ್ಯೆಯಿಂದ ವಂಚಿತವಾದ ಕಾರಣ ನಾವೆಲ್ಲರು ಹಿಂದುಳಿಯಬೇಕಾಯಿತು. ಮುಂದೆ ನಿಮ್ಮ ಮಕ್ಕಳು ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ವಂಚಿತರಾಗಬಾರದು. ಬುದ್ಧಿ ಮತ್ತು ಜ್ಞಾನ ಪಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬಹುದು ಎಂದರು.

ಶೀಘ್ರವಾಗಿ ಎಸ್ಸಿ ಎಸ್ಟಿ ಬ್ಯಾಕ್ ಲಾಗ್ ಗಳನ್ನು ಹುದ್ದೆ ತುಂಬುವಂತೆ ನಾನು ಆದೇಶಿಸಿದ್ಧೇನೆ. ಜನಸಂಖ್ಯೆಗನುಗುಣವಾಗಿ ಎಲ್ಲ ಸವಲತ್ತುಗಳು ಸಿಗಬೇಕು ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಮೀಸಲಾತಿ ಭಿಕ್ಷೆ ಅಲ್ಲ ಅದು ನಿಮ್ಮ ಹಕ್ಕು. ಸ್ವಾಮೀಜಿಯವರ ಪ್ರತಿಭಟನೆಗೆ ಮಣಿದು ಮೀಸಲಾತಿಯನ್ನು ಹೆಚ್ಚಳ ಮಾಡಿದ್ರು. ಶೇ.7ರಷ್ಟು ಮೀಸಲಾತಿ ಸಿಕ್ಕುತ್ತಿದೆಯೆಂದರೆ ಅದು ನಿಮ್ಮ ಸ್ವಾಮೀಜಿ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್ ಕೆಂಪಣ್ಣ ಆರೋಪ; ಕೈ ನಾಯಕರ ವಿರುದ್ಧ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ಮೀಸಲಿಡಬೇಕು. ಅದನ್ನು ನಾವು ಕರ್ನಾಟಕದಲ್ಲಿ ಜಾರಿ ಮಾಡಿದ್ದೇವೆ. ಆದರೆ ಇದು ದೇಶಾದ್ಯಂತ ಜಾರಿಯಾಗಬೇಕು ಅದನ್ನು ನೀವು ಒತ್ತಾಯಿಸಬೇಕು ಎಂದು ಕರೆ ನೀಡಿದರು.

click me!