ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಯಾರೂ ಭಾಗವಹಿಸದೆ ಹಿನ್ನೆಲೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ದಲಿತ ಮಹಿಳೆ ಪಂಚಾಯ್ತಿಯಲ್ಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಹಾಸನ (ಫೆ.9): ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಯಾರೂ ಭಾಗವಹಿಸದೆ ಹಿನ್ನೆಲೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ದಲಿತ ಮಹಿಳೆ ಪಂಚಾಯ್ತಿಯಲ್ಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಘಟನೆ ನಡೆದಿದೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವನಜಾಕ್ಷಿ ಕಣ್ಣೀರಿಟ್ಟ ಮಹಿಳೆ. ಹೊಂಗಡಹಳ್ಳ ಗ್ರಾಮಪಂಚಾಯ್ತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ದಲಿತ ಮಹಿಳೆ
undefined
ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್ ಕೆಂಪಣ್ಣ ಆರೋಪ; ಕೈ ನಾಯಕರ ವಿರುದ್ಧ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ
6 ಮಂದಿ ಗ್ರಾಮ ಪಂಚಾಯತಿ ಸದಸ್ಯರನ್ನು ಹೊಂದಿರುವ ಹೊಂಗಡಹಳ್ಳ ಗ್ರಾಮ ಪಂಚಾಯತಿ. ಮುಂದಿನ ಎರಡುವರೆ ವರ್ಷ ಅವಧಿಗೆ ಅಧ್ಯಕ್ಷರ ಸ್ಥಾನ ಎಸ್ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಕ್ಯಾಟಗರಿಗೆ ಮೀಸಲಾಗಿತ್ತು. ಅಧ್ಯಕ್ಷೆ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಸಿದ್ದ ಗ್ರಾಪಂ ಸದಸ್ಯ ವನಜಾಕ್ಷಿ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಾದ ಒಟ್ಟು ಸದಸ್ಯರ ಪೈಕಿ ನಾಲ್ವರು ಸದಸ್ಯರು ಗೈರಾಗಿದ್ದರು. ಇದರಿಂದ ಕೋರಂ ಕೊರತೆಯಿಂದ ಅಧ್ಯಕ್ಷ ಸ್ಥಾನದ ಘೋಷಣೆ ಸಾಧ್ಯವಾಗದೆ ಫೆ.12ಕ್ಕೆ ಮುಂದೂಡಿದ ಚುನಾವಣಾಧಿಕಾರಿ. ಈ ವೇಳೆ ಗ್ರಾಮಪಂಚಾಯ್ತಿಯಲ್ಲೇ ಕುಳಿತು ಕಣ್ಣೀರು ಹಾಕಿದ ವನಜಾಕ್ಷಿ.
ದಲಿತ ಮಹಿಳೆ ಎಂಬ ಕಾರಣಕ್ಕೆ ಗೈರು ಆರೋಪ:
ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿಯಾಗಿ ಬಾಚಿಹಳ್ಳಿ ಗ್ರಾಮದಿಂದ ಸದಸ್ಯೆಯಾಗಿ ಆಯ್ಕೆಯಾಗಿದ್ದ ವನಜಾಕ್ಷಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಈ ಹಿಂದೆ ಬೇರೆ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಯಾಗುವಾಗ ನಾನು ಹಾಜರಿದ್ದು ಮತ ಚಲಾವಣೆ ಮಾಡಿದ್ದೇನೆ. ಆದರೆ ಈಗ ನಾನು ಎಸ್ಸಿ ಸಮುದಾಯಕ್ಕೆ ಸೇರಿರುವ ಮಹಿಳೆ ಎಂಬ ಕಾರಣಕ್ಕೆ ಅಧ್ಯಕ್ಷರಾಗಲು ಇತರೆ ಸದಸ್ಯರು ಸಹಿಸುತ್ತಿಲ್ಲ ಹೀಗಾಗಿ ನಾಲ್ವರು ಗ್ರಾಪಂ ಸದಸ್ಯರು ಗೈರಾಗಿದ್ದಾರೆಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವನಜಾಕ್ಷಿ ಗಂಭೀರ ಆರೋಪ ಮಾಡಿದ್ದಾರೆ.