ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮದ ಜನರು ಹೆಚ್ಚು ಮತ ಹಾಕಿದ್ದಾರೆ. ಇದರಿಂದಾಗಿ ಜೆಡಿಎಸ್ ಪಕ್ಷಕ್ಕೆ ಕಡಿಮೆ ಮತ ಬಂದಿದೆ ಎಂದು ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮದ ಜನರು ಡೈರಿಗೆ ತಂದ ಹಾಲನ್ನು ಸ್ವೀಕರಿಸದೆ ಡೈರಿಯವರು ವಾಪಸ್ ಕಳುಹಿಸಿದ್ದಾರೆ.
ಹಾಸನ (ಜೂ.06): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮದ ಜನರು ಹೆಚ್ಚು ಮತ ಹಾಕಿದ್ದಾರೆ. ಇದರಿಂದಾಗಿ ಜೆಡಿಎಸ್ ಪಕ್ಷಕ್ಕೆ ಕಡಿಮೆ ಮತ ಬಂದಿದೆ ಎಂದು ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮದ ಜನರು ಡೈರಿಗೆ ತಂದ ಹಾಲನ್ನು ಸ್ವೀಕರಿಸದೆ ಡೈರಿಯವರು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡೈರಿ ವಿರುದ್ಧ ಕ್ರಮ ಕೈಗೊಂಡು ಹಾಲನ್ನು ಹಾಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ತುಂಬಿದ ಹಾಲಿನ ಕ್ಯಾನನ್ನು ತಂದು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರು.
ವಕೀಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತವನ್ನು ಕೊಡಲಾಗಿದೆ ಎಂದು ಇದೇ ಗ್ರಾಮದಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆಡಿಎಸ್ ಬೆಂಬಲಿತ ನಾಗರಾಜು ದೌರ್ಜನ್ಯ ಎಸಗಿದ್ದಾರೆ. ಕಾಂಗ್ರೆಸ್ ಬೆಂಬಲಿಗರು ಬುಧವಾರ ಬೆಳಗ್ಗೆ ಗ್ರಾಮದ ಡೈರಿಗೆ ಹಾಲನ್ನು ಹಾಕಲು ಹೋದಾಗ ಡೈರಿಯಲ್ಲಿ ನಾಗರಾಜು ಕುಳಿತುಕೊಂಡು ಹಾಲನ್ನು ಕೊಡಬೇಡಿ ಎಂದು ಬೈದು, ಹೊಡೆದು ಕಳುಹಿಸಿದ್ದಾರೆ ಎಂದು ದೂರಿದರು.
undefined
ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ನಮಗೆ ಹೊಸ ಡೈರಿ ಮಾಡಿಕೊಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷಕ್ಕೆ ಪ್ರತ್ಯೇಕ ಡೈರಿ ಮಾಡಿಕೊಡಬೇಕು. ಹಾಲು ಸ್ವೀಕರಿಸಲು ತಿರಸ್ಕರಿಸಿರುವ ಡೈರಿಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರು ಡೈರಿಗೆ ಹಾಲು ಹಾಕಲು ಅವಕಾಶ ಮಾಡಿಕೊಡಬೇಕು ಎಂದು ರೈತರ ಪರವಾಗಿ ಆಗ್ರಹಿಸಿದರು.