ಮೊಹರಂ ಕೊನೆಯ ದಿನ ದರ್ಶನ್ ಪೋಟೊ ಹೊತ್ತು ಕುಣಿದ ಯುವಕರು

By Kannadaprabha News  |  First Published Jul 19, 2024, 6:19 AM IST

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಪೋಟೋ ಎತ್ತಿಕೊಂಡು ಯುವಕರ ಗುಂಪೊಂದು ಮೊಹರಂ ಹಬ್ಬದಲ್ಲಿ ಕುಣಿದು ಸಂಭ್ರಮಿಸಿದೆ.


ಕನಕಗಿರಿ (ಜು.19): ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಪೋಟೋ ಎತ್ತಿಕೊಂಡು ಯುವಕರ ಗುಂಪೊಂದು ಮೊಹರಂ ಹಬ್ಬದಲ್ಲಿ ಕುಣಿದು ಸಂಭ್ರಮಿಸಿದೆ.

ತಾಲೂಕಿನ ಕಲಿಕೇರಿ ಗ್ರಾಮ(kalikeri village)ದಲ್ಲಿ ಮೊಹರಂ(Muharram) ಕೊನೆ ದಿನವಾದ ಬುಧವಾರ ಸಂಜೆ ವೇಳೆ ಅಲಾಯಿ ದೇವರ ವಿಸರ್ಜನಾ ಕಾರ್ಯಕ್ರಮದ ಮುನ್ನ ಗ್ರಾಮದ ಯುವಕರ ಗುಂಪೊಂದು ಹಲಗೆ ಬಾರಿಸುತ್ತಾ ಹೆಜ್ಜೆ ಹಾಕುವಾಗ ದರ್ಶನ್ ಪೋಟೋವನ್ನು ಹೊತ್ತು ಕುಣಿದಿದ್ದಾರೆ.

Tap to resize

Latest Videos

undefined

ಮಸೀದಿ ಮುಂದೆ ಕೊಂಡ ಹಾಯುವಾಗ ಮೊಹರಂ ಅಲಾಯಿ ಕುಣಿಗೆ ಬಿದ್ದು ವ್ಯಕ್ತಿ ಸಜೀವ ದಹನ

ಜೈಲು(parappana Agrahara jail) ಸೇರಿರುವ ದರ್ಶನ(kannada actor darshan thugudeepa) ಬೇಗ ಬಿಡುಗಡೆಯಾಗಲೆಂದು ಅಲಾಯಿ ದೇವರಲ್ಲಿ ಯುವಕರು ಪ್ರಾರ್ಥಿಸಿದ್ದಾರೆ.

 ಯಾದಗಿರಿ ಜಿಲ್ಲೆಯಲ್ಲೂ ಹರಕೆ ಹೊತ್ತಿದ್ದ ಅಭಿಮಾನಿಗಳು:

ಯಾದಗಿರಿ ಜಿಲ್ಲೆಯ ಅರಕೇರಾ(ಕೆ) ಗ್ರಾಮದಲ್ಲಿ ಅಭಿಮಾನಿಗಳು ಇಂತದ್ದೊಂದು ಹರಕೆ ಹೊತ್ತು ನಟ ದರ್ಶನ್ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದ್ದು ವೈರಲ್ ಆಗಿತ್ತು. ದರ್ಶನ್ ಬಿಡುಗಡೆಗೆ ದೇವರ ಬಳಿ ವಿಚಿತ್ರ ಹರಕೆ ಹೊತ್ತಿದ್ದ ಅಭಿಮಾನಿಗಳು. ನೆಚ್ಚಿನ ನಟ ದರ್ಶನ್ ಜೈಲಿನಿಂದ ಶೀಘ್ರ ಬಿಡುಗಡೆಯಾಗುವಂತೆ ಅಭಿಮಾನಿಗಳೂ ಮೊಹರಂ ಹಬ್ಬದ ಅಲಾಯಿ ದೇವರಿಗೆ ಹರಕೆ ಹೊತ್ತು ದರ್ಶನ್ ಫೋಟೊ ಎತ್ತಿ ಕುಣಿದಿದ್ದರು.

 

ದರ್ಶನ್ ಬಗ್ಗೆ ಒಂದಿಷ್ಟು ಹೇಳಿದ ಅನು ಪ್ರಭಾಕರ್, ಇನ್ನೊಂದಿಷ್ಟು ಹೇಳಲ್ಲ ಅಂದಿದ್ಯಾಕೆ?

 ಕಳೆದ ವಾರದ ಹಿಂದೆ ದರ್ಶನ್ ಅಭಿಮಾನಿಯೊಬ್ಬ ₹10 ನೋಟಿನಲ್ಲಿ ದರ್ಶನ್ ಬಿಡುಗಡೆಯಾಗಲೆಂದು ಬೇಡಿಕೊಂಡು ತಿರುಪತಿ ತಿಮ್ಮಪ್ಪ(Tirupati timmappa)ನಿಗೆ ಕಾಣಿಕೆ ಅರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

click me!