RAW ಏಜೆಂಟ್ ಎಂದು ಹೇಳಿಕೊಂಡು ವಂಚನೆ: ಕೇರಳ ಮೂಲದ ಬೆನೆಡಿಕ್ಟ್ ಸಾಬು ಬಂಧನ

By Ravi Janekal  |  First Published Aug 21, 2023, 1:49 PM IST

ನಾನು RAW ಅಧಿಕಾರಿ ಎಂದು ಹೇಳಿ ವಂಚಿಸುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಮಂಗಳೂರಿನ ಉರ್ವಾ ಪೊಲೀಸರು ಬಂಧಿಸಿದ್ದಾರೆ.


ಮಂಗಳೂರು (ಆ.21): ನಾನು RAW ಅಧಿಕಾರಿ ಎಂದು ಹೇಳಿ ವಂಚಿಸುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಮಂಗಳೂರಿನ ಉರ್ವಾ ಪೊಲೀಸರು ಬಂಧಿಸಿದ್ದಾರೆ.

ಬೆನೆಡಿಕ್ಟ್ ಸಾಬು (24) ಬಂಧಿತ ವಿದ್ಯಾರ್ಥಿ ಕೇರಳದ ಇಡುಕ್ಕಿ ಮೂಲದವನಾಗಿದ್ದು, ಕಳೆದ 6 ತಿಂಗಳ ಹಿಂದೆ ಮಂಗಳೂರಿನ ಪ್ರತಿಷ್ಠಿತ ಯುನಿಟಿ ನರ್ಸಿಂಗ್ ಕಾಲೇಜಿನಲ್ಲಿ ಜಿಎನ್‌ಎಂ ಕೋರ್ಸ್ ಗೆ ಸೇರಿಕೊಂಡಿದ್ದ. ಈ ವೇಳೆ ಕಾಲೇಜಿನ ಪ್ರಾಂಶುಪಾಲರಿಗೆ ತಾನು ಕೇರಳ ಅಗ್ರಿಕಲ್ಚರ್ ಅಧಿಕಾರಿ ಎಂದು ತಿಳಿಸಿದ್ದ. ಅದರಂತೆ ನಕಲಿ ಐಡಿ ಮಾಡಿಕೊಂಡಿದ್ದ ಬೆನೆಡಿಕ್ಟ್ ಸಾಬು. ನಂತರ ಕೇರಳ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿ ಕೊಂಡಿದ್ದ ಸಾಬು. ಸದ್ಯ RAW ಫೀಲ್ಡ್  ಏಜೆಂಟ್ ಆಗಿ ಕರ್ತವ್ಯದಲ್ಲಿದ್ದು ಅಂಡರ್‌ಕವರ್ ಆಪರೇಷನ್ ನಲ್ಲಿದ್ದೇನೆ ಬೂಸಿ ಬಿಟ್ಟಿದ್ದ ಬೆನೆಡಿಕ್ಟ್ ಸಾಬು. 

Tap to resize

Latest Videos

'ಇನ್ಸ್ ಪೆಕ್ಟರ್ ಸಸ್ಪೆಂಡ್ ಮಾಡಿಸುತ್ತೇನೆ' ಎಂದ ಮಂಗಳೂರಿನ ಕಾಂಗ್ರೆಸ್ ಮುಖಂಡ ಅಂದರ್!

ಬಯಲಿಗೆ ಬಂದಿದ್ದು ಹೇಗೆ?

ಕಾಲೇಜಿನಲ್ಲಿ ರಾ ಏಟೆಂಟ್ ಎಂದು ಸುಳ್ಳು ಹೇಳಿದ್ದಲ್ಲದೆ ಕಾಲೇಜಿನಲ್ಲಿ ಮಂಗಳೂರು ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಡ್ರಗ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಪೊಲೀಸರಿಗೂ ತಾನೂ ರಾ ಏಜೆಂಟ್ ಎಂದು ಹೇಳಿದ್ದ ಭೂಪ. ಇಷ್ಟಲ್ಲದೇ ತಾನು ಹೊಲಿಸಿಕೊಂಡಿದ್ದ ಪೊಲೀಸ್ ಸಮವಸ್ತ್ರ ಧರಿಸಿಕೊಂಡೇ ತಿರುಗಾಡುತ್ತಿದ್ದ.ಇವನ ವರ್ತನೆಯಿಂದ ಅನುಮಾನಗೊಂಡ ಉರ್ವಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.ಸದ್ಯ ಬೆನೆಡಿಕ್ಟ್ ಸಾಬುನಿಂದ ನಕಲಿ ಐಡಿ ಕಾರ್ಡ್‌ಗಳು,ಪೊಲೀಸ್ ಸಮವಸ್ತ್ರ,ಮೊಬೈಲ್ ಲ್ಯಾಪ್‌ಟಾಪ್ ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಂಚನೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಬಿಜೆಪಿ ಶಾಸಕರ ಪ್ರತಿಭಟನೆಗೆ ಮಣಿದ ಸರ್ಕಾರ: ಅಮಾನತು ಆದೇಶ ವಾಪಾಸ್!

click me!