ಮಗನ ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ತಾಯಿ ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸವದತ್ತಿ ತಾಲೂಕಿನ ಗೊರವನಕೊಳ್ಳದ ಮಲಪ್ರಭಾ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ.
ಬೆಳಗಾವಿ (ಆ.21) ಮಗನ ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ತಾಯಿ ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸವದತ್ತಿ ತಾಲೂಕಿನ ಗೊರವನಕೊಳ್ಳದ ಮಲಪ್ರಭಾ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ.
ಧಾರವಾಡ ಮೂಲದ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್(40) ಮೃತ ಮಹಿಳೆ. ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಆಗಿರುವ ಪ್ರಿಯದರ್ಶಿನಿ ಪತಿ ಲಿಂಗರಾಜ್. ಪ್ರಿಯದರ್ಶಿನಿಯ ಮುದ್ದಿನ ಮಗ ಅಮರ್ಥ್ಯ ಅನಾರೋಗ್ಯಕ್ಕೀಡಾಗಿದ್ದ. ಇದರಿಂದ ತಾಯಿ ಮಾನಸಿಕವಾಗಿ ನೊಂದಿದ್ದಳು. ಮಗನ ಅನಾರೋಗ್ಯವೇ ಪ್ರಿಯದರ್ಶಿನಿ ಆತ್ಮಹತ್ಯೆಗೆ ಕಾರಣ ಎಂದು ವರದಿಯಾಗಿದೆ.
ಜನ್ಮವಿತ್ತ ಮಗ ಕಣ್ಣೆದುರು ಸತ್ತನೆಂದು ತಾನೂ ಪ್ರಾಣಬಿಟ್ಟ ತಾಯಿ
ಕಳೆದ ಆಗಸ್ಟ್ 18 ರಂದು ಆಸ್ಟ್ರೇಲಿಯಾದ ಸಿಡ್ನಿಯಿಂದ ಕರ್ನಾಟಕಕ್ಕೆ ಮರಳಿದ್ದ ಪ್ರಿಯದರ್ಶಿನಿ. ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿ ಶವ ಹೊರ ತೆಗೆದ ಪೊಲೀಸರು. ಬಳಿಕ ಮರಣೋತ್ತರ ಪರೀಕ್ಷೆಗೆ ಶವ ರವಾನಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಅಪಘಾತದಲ್ಲಿ ಸ್ನೇಹಿತ ಸಾವು: ಸುದ್ದಿ ತಿಳಿದ ವ್ಯಕ್ತಿ ಹೃದಯಾಘಾತಕ್ಕೆ ಬಲಿ
ಶಿಕಾರಿಪುರ: ಅಪಘಾತದಲ್ಲಿ ಆತ್ಮೀಯ ಸ್ನೇಹಿತ ಮೃತಪಟ್ಟಸುದ್ದಿ ತಿಳಿದು ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ಘಟನೆ ತಾಲೂಕಿನ ಪುನೇದಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಆನಂದ್ (30) ಅಪಘಾತದಲ್ಲಿ ಮೃತಪಟ್ಟವ್ಯಕ್ತಿ. ಈ ವಿಚಾರ ತಿಳಿದು ಸ್ನೇಹಿತ ಸಾಗರ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಆನಂದ್ ಮತ್ತು ಯುವರಾಜ್ ಸ್ನೇಹಿತನ ಹುಟ್ಟುಹಬ್ಬದ ಕೇಕ್ ತೆಗೆದುಕೊಂಡು ಬೈಕಿನಲ್ಲಿ ಶಿಕಾರಿಪುರದಿಂದ ಪುನೇದಹಳ್ಳಿಗೆ ಹೊರಟಿದ್ದರು. ಪುನೇದಹಳ್ಳಿಯಲ್ಲಿ ಬಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಶಿಕಾರಿಪುರ ಕಡೆ ಹೋಗುತ್ತಿದ್ದ ಜಾವೇದ್ (30) ಎನ್ನುವವರ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜಾವೇದ್ (30) ಮಂಡಿ ಚಿಪ್ಪು ಕಿತ್ತುಬಂದಿದ್ದರೆ, ಮೊಹಮ್ಮದ್ ಮಲ್ಲಿಕ್ (19) ಎಂಬಾತ ಸಹ ಗಾಯಗೊಂಡಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ತಲೆ ಮತ್ತು ದವಡೆ ಭಾಗದಲ್ಲಿ ಹೊಡೆತ ಬಿದ್ದಿರುವ ಯುವರಾಜ್ ಮತ್ತು ಜಾವೀದ್ (30) ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನೀಟ್ ದುರಂತ: ಮಗನ ಆಗಲಿಕೆ ಸಹಿಸಲಾಗದೇ ಅಪ್ಪನೂ ಸಾವಿಗೆ ಶರಣು
ದುರಂತವೆಂದರೆ, ಈ ಘಟನೆಯಲ್ಲಿ ಆನಂದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಪುನೇದÜಹಳ್ಳಿಯ ಸಾಗರ್‌ಗೆ ಹೃದಯಘಾತ ಉಂಟಾಗಿ, ಅವರು ಸಹ ಮೃತಪಟ್ಟಿದ್ದಾರೆ. ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.