ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಬೆನ್ನಲ್ಲಿಯೇ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ 105 ಅಡಿಗೆ ಕುಸಿತವಾಗಿದೆ.
ಮಂಡ್ಯ (ಆ.21): ಮುಂಗಾರು ಮಳೆಯ ಅವಧಿ ಆಗಿದ್ದರೂ ಮಳೆ ಬಾರದೇ ಕೊಡಗು ಭಾಗದಲ್ಲಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ನೀರಿನ ಪ್ರಮಾಣ 105 ಅಡಿಗ ಇಳಿಕೆಯಾಗಿದೆ. ಆದರೂ, ಕಾನೂನಿಗೆ ತಲೆಬಾಗಬೇಕು ಎಂದು ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ 19 ಟಿಎಂಸಿ ನೀರಿ ನೀರು ಹರಿಸಲಾಗಿದೆ. ಆದರೂ, ನೀರು ಹರಿಸಲಾಗುತ್ತಿದೆ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು, ರೈತರು ಹಾಗೂ ಸಂಸದೆ ಸುಮಲತಾ ಅಂಬರೀಶ್ ಒಳಗೊಂಡಂತೆ ವಿವಿಧ ಸಂಘಟನೆಗಳೊಂದಿಗೆ ಕಾವೇರಿ ನಮ್ಮದು ಹೋರಾಟ ಆರಂಭವಾಗಿದೆ.
ಕನ್ನಡ ನಾಡಿನ ಜೀವನದಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಿಕೆ ಇನ್ನೂ ಮುಂದುವರೆದಿದೆ. ಆದ್ದರಿಂದ KRS ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಇಳಿಕೆಯಾಗಿದೆ. ಅಂದರೆ ಸದ್ಯಕ್ಕೆ ಕೆ.ಆರ್.ಎಸ್ ಡ್ಯಾಂ ನೀರನ ಮಟ್ಟ 105 ಅಡಿಗೆ ಕುಸಿತ ಕಂಡಿದೆ. ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ. ಇದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಕಾವೇರಿ ಒಡಲು ಬರಿದಾಗುವ ಆತಂಕ ಎದುರಾಗಿದೆ. ಅನ್ನದಾತರ ಮಾತಿಗೂ ರಾಜ್ಯ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.
undefined
Mandya news: ತಮಿಳನಾಡಿಗೆ ಕಾವೇರಿ ನೀರು : ಮಂಡ್ಯದಲ್ಲಿಂದು ಸುಮಲತಾ, ಬಿಜೆಪಿ ಪ್ರತಿಭಟನೆ
ಕಾವೇರಿ ಜಲಾಶಯದಲ್ಲಿ ಶೇ.50 ನೀರು: ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವಡೆ ಮುಂದುವರೆದಿರುವ ಪ್ರತಿಭಟನೆ ಮಾಡಲಾಗುತ್ತಿದೆ. ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹ ಮಾಡಲಾಗುತ್ತಿದೆ. ಆದರೂ, ಹೋರಾಟದ ನಡುವೆಯು ಇಂದು ಕೂಡ ತಮಿಳುನಾಡಿಗೆ 12,631 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದಿಂದ ಒಟ್ಟಾರೆ 15,247 ಕ್ಯೂಸೆಕ್ ಹೊರಹರಿವು ಹೋಗಿದೆ. ಆದರೆ, ಒಳಹರಿವು ಪ್ರಮಾಣ ತೀವ್ರ ಕುಸಿತವಾಗಿದೆ. ಇನ್ನು ಕೊಡಗು ಭಾಗದಲ್ಲಿ ಕಳೆದೆರಡು ದಿನಗಳಿಂದ ಸ್ವಲ್ಪ ಮಳೆ ಆಗುತ್ತಿದ್ದು, KRS ಡ್ಯಾಂಗೆ 4,983 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಇನ್ನು 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 105.70 ಅಡಿ ನೀರು ಸಂಗ್ರಹವಿದೆ. ಒಟ್ಟಾರೆ 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 27.617 ಟಿಎಂಸಿ ನೀರು ಮಾತ್ರ ಶೇಖರಣೆಯಿದೆ.
ರಾಜ್ಯ ಸರ್ಕಾರ ಕೇಂದ್ರದ ಮುಂದೆ ಸರಿಯಾಗಿ ವಾದ ಮಂಡಿಸಿಲ್ಲ:
ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆ ಇಲ್ಲ. ರಾಜ್ಯ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಕೇಂದ್ರದಲ್ಲಿ ರಾಜ್ಯ ಸರ್ಕಾರ ಸರಿಯಾದ ವಾದ ಮಂಡಿಸದಿರುವುದೇ ಇಷ್ಟಕ್ಕೆಲ್ಲ ಕಾರಣ. ಸಂಕಷ್ಟದ ಸಂದರ್ಭದಲ್ಲಿ ನಮ್ಮ ರೈತರ ಜೊತೆ ನಾವು ನಿಲ್ಲಬೇಕು ಅದಕ್ಕಾಗಿ ನಾನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಬಿಜೆಪಿಯ ಮಾಜಿ ಸಚಿವರು, ಸಂಸದರು, ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿರುವ ವಿಚಾರಕ್ಕೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಅದರ ಬಗ್ಗೆ ನಾನು ಏನೋ ಮಾತನಾಡಿ ಅದು ಕಾಂಟ್ರವರ್ಸಿ ಆಗುವುದು ಬೇಡ. ಅದನ್ನ ನೀವು ಲೋಕಸಭೆ ಚುನಾವಣೆ ವರೆಗೆ ಎಳೆಯುದು ಬೇಡ. ಸದ್ಯ ಆ ರೀತಿ ಏನೂ ಇಲ್ಲ. ಇಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ.
-ಸುಮಲತಾ ಅಂಬರೀಶ್, ಸಂಸದೆ
ರಸ್ತೆಗೆ ಹುರುಳಿ ಚೆಲ್ಲಿ ಪ್ರತಿಭಟನೆ: ಇನ್ನು ಕೆಆರ್‌ಎಸ್ ಜಲಾಶಯದಿಂದ ನೀರು ತಮಿಳುನಾಡಿಗೆ ಹರಿಸುತ್ತಿದ್ದಂತೆ ಮಂಡ್ಯದಲ್ಲಿ ಕಾವೇರಿ ನಮ್ಮದು ಪ್ರತಿಭಟನೆ ಆರಂಭವಾಗಿದೆ. ರಸ್ತೆಗೆ ಹುರುಳಿ ಚೆಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ವೇಳೆ ಟೈರ್‌ಗಳು ಹಾಗೂ ನೀರಾವರಿ ಸಚಿವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ಈ ವೇಳೆ ಬೆಂಕಿ ನಂದಿಸಿದ ಪೊಲೀಸರು ಪ್ರತಿಭಟನೆ ಶಾಂತಿಯುತವಾಗಿ ಮಾಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತಳ್ಳಾಟನೂಕಾಟ ಕೂಡ ನಡೆದಿದೆ.
70ರ ಅಜ್ಜ ಮದುವೆಯಾಗೋದಾಗಿ ಲವ್ ಮಾಡಿ ಕೈಕೊಟ್ಟ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಜ್ಜಿ
ಇಂಡಿಯಾ ಒಕ್ಕೂಟಕ್ಕೆ ಮಣಿದು ನೀರಿನ ಹರಿವು:
ತಮಿಳುನಾಡು ಕಾವೇರಿ ನೀರಿಗಾಗಿ ಸುಪ್ರೀಂ ಮೊರೆ ಹೋಗಿದೆ. ಆದರೆ ಕೋರ್ಟ್ ಆದೇಶಕ್ಕೂ ಮುನ್ನ ರಾಜ್ಯ ಸರ್ಕಾರ ನೀರು ಹರಿಸಿದೆ. ನೀರು ಬಿಡುವುದಕ್ಕೂ ಮುನ್ನ ಸರ್ವ ಪಕ್ಷ ಸಭೆ ಕರೆಯಬಹುದಿತ್ತು. I.N.D.I.A ಒಕ್ಕೂಟದ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನೀರು ಹರಿಸುತ್ತಿದೆ. ಕೇವಲ 4-5 ಎಂಪಿ ಸ್ಥಾನದ ಆಸೆಗೆ ನಮ್ಮ ರೈತರ ಹಿತ ಬಲಿ ಕೊಡ್ತಿದೆ.
- ಪಿ.ಸಿ. ಮೋಹನ್, ಸಂಸದ