ಕ್ರಿಕೆಟಿಗ ಮುತ್ತಯ್ಯ ಮುರುಳಿಧರ್ ಫ್ಕಾಕ್ಟರಿಗೆ ಪರಿಸರವಾದಿಗಳ ವಿರೋಧ!

By Kannadaprabha News  |  First Published Aug 17, 2023, 2:40 PM IST

ಮಾಜಿ ಕ್ರಿಕೆಟಿಗ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಅವರು ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಕಾರ್ಖಾನೆಗೆ ಕುಡಿಯುವ ನೀರಿನ ಕಂಟಕ ಎದುರಾಗಿದೆ.


ಧಾರವಾಡ (ಆ.17) :  ಮಾಜಿ ಕ್ರಿಕೆಟಿಗ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಅವರು ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಕಾರ್ಖಾನೆಗೆ ಕುಡಿಯುವ ನೀರಿನ ಕಂಟಕ ಎದುರಾಗಿದೆ.

ಈಗಾಗಲೇ ಹು-ಧಾ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ವಾರಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಇಂತಹ ಸಮಯದಲ್ಲಿ ಮುತ್ತಯ್ಯ ಅವರ ಕಂಪನಿಗೆ ನಿತ್ಯ ಎರಡು ಲಕ್ಷ ಲೀಟರ್‌ ಕೊಡುವುದು ಸರಿಯೇ ಎಂದು ಪರಿಸರವಾದಿ ಸುರೇಶ ಹೆಬ್ಳೀಕರ್‌ ಪ್ರಶ್ನಿಸಿದ್ದಾರೆ. ಜತೆಗೆ ಒಂದೇ ಕಂಪನಿಗೆ ನಿತ್ಯ 2 ಲಕ್ಷ ಲೀಟರ್‌ ನೀಡುವುದನ್ನು ಸರ್ಕಾರ ಮರು ಪರಿಶೀಲಿಸಬೇಕು. ಕಂಪನಿ ಸಮರ್ಪಕ ನೀರು ಇರುವ ಜಿಲ್ಲೆಗೆ ಹೋಗಬಹುದು ಎಂದು ಅವರು ಹೇಳಿದ್ದಾರೆ.

Tap to resize

Latest Videos

ಈಗಾಗಲೇ ಧಾರವಾಡದಲ್ಲಿ ಪೆಪ್ಸಿ ಕಂಪನಿ ಇದ್ದು, ಈ ಕಂಪನಿಗೆ ನಿತ್ಯ ಲಕ್ಷಾಂತರ ಲೀಟರ್‌ ನೀರು ನೀಡಲಾಗುತ್ತಿದೆ. ಜೊತೆಗೆ ನೀರನ್ನೇ ಹೆಚ್ಚು ಅವಲಂಬಿಸಿರುವ ಮತ್ತೊಂದು ಕಂಪನಿಗೆ ನೀರು ನೀಡಿದರೆ, ಅವಳಿ ನಗರದ ಜನತೆಗೆ ಮತ್ತಷ್ಟುಕುಡಿಯುವ ನೀರಿನ ಕೊರತೆ ಎದುರಾಗುತ್ತದೆ ಎಂಬ ಕೂಗು ಕೇಳಿ ಬರುತ್ತಿದೆ.

ಧಾರವಾಡದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಕಾರ್ಖಾನೆ: 500 ಜನರಿಗೆ ಉದ್ಯೋಗ

ಮೆ.ಸಿಲೋನ್‌ ಬಿವರೇಜ್‌ ಕ್ಯಾನ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಅಲ್ಯುಮಿನಿಯಂ ಕ್ಯಾನ್‌ ತಯಾರಿಕೆ ಮತ್ತು ಪಾನೀಯಗಳನ್ನು ತುಂಬುವ ಉದ್ದಿಮೆ ಸ್ಥಾಪಿಸಲು ಮುತ್ತಯ್ಯ ಸಿದ್ಧರಾಗಿದ್ದಾರೆ. ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್‌ನ ಸುಮಾರು 26 ಎಕರೆ ಪ್ರದೇಶದಲ್ಲಿ .446 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಅನುಮತಿ ಸಹ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೂರು ತಿಂಗಳಲ್ಲಿ ಕಂಪನಿ ಸ್ಥಾಪನೆ ಕಾರ್ಯ ಶುರುವಾಗುತ್ತಿತ್ತು.ಆದರೆ, ನಿತ್ಯ 2 ಲಕ್ಷ ಲೀಟರ್‌ ನೀರು ಅಗತ್ಯವಿರುವುದೇ ಇದೀಗ ಕಂಪನಿ ಆರಂಭಕ್ಕೆ ಕಂಟಕ ಎದುರಾಗಿದೆ. ಕಂಪನಿಯೊಂದಕ್ಕೆ ಇಷ್ಟೊಂದು ಪ್ರಮಾಣದ ನೀರು ನೀಡುವುದು ಸರಿಯಲ್ಲ. ಈಗಾಗಲೇ ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇದೆ. ವಾರಕ್ಕೊಮ್ಮೆ ಕುಡಿಯುವ ನೀರು ಬರಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಸುಮಾರು 500 ಜನರಿಗೆ ಉದ್ಯೋಗ ಒದಗಿಸಬಹುದಾದ ಕಂಪನಿ ಇದಾಗಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂಬುದು ಕೆಲವರ ವಾದವಾದರೆ,

ಚಾಮರಾಜನಗರದಲ್ಲೂ ಕ್ರಿಕೆಟಿಗ ಮುತ್ತಯ್ಯ ಕಾರ್ಖಾನೆ ಸ್ಥಾಪನೆ

ಚಾಮರಾಜನಗರ: ಖ್ಯಾತ ಕ್ರಿಕೆಟಿಗ, ಶ್ರೀಲಂಕಾ ತಂಡದ ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ ಅವರು ಧಾರವಾಡದ ಬೆನ್ನಲ್ಲೇ ಇದೀಗ ಚಾಮರಾಜನಗರದಲ್ಲೂ ಸಾಫ್‌್ಟಡ್ರಿಂಕ್‌ ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದಾರೆ.

ಗಡಿ ಜಿಲ್ಲೆ ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಆರಂಭಿಸುತ್ತಿದ್ದು, ಇದಕ್ಕಾಗಿ 46 ಎಕರೆ ಜಾಗ ಖರೀದಿಸಿ, ಆಡಳಿತಾತ್ಮಕವಾದ ಎಲ್ಲಾ ಹಂತಗಳನ್ನೂ ಮುಗಿಸಿದ್ದಾರೆ. ಕಾರ್ಖಾನೆ ನಿರ್ಮಾಣ ಕಾರ್ಯವನ್ನೂ ಈಗಾಗಲೇ ಆರಂಭಿಸಿದ್ದಾರೆ. ಮುತ್ತಯ್ಯ ಬೆವರೇಜಸ್‌ ಹೆಸರಿನಲ್ಲಿ ಪಾನೀಯಗಳನ್ನು, ಸುವಾಸಿತ ಹಾಲನ್ನು ಕ್ಯಾನ್‌ಗಳಲ್ಲಿ ಮಾರಾಟ ಮಾಡುವ ಉದ್ದೇಶವಿದ್ದು, ಚಾಮರಾಜನಗರದಲ್ಲಿ ಸಾಫ್‌್ಟಡ್ರಿಂಕ್‌ ಹಾಗೂ ನಾನ್‌ ಆಲ್ಕೋಹಾಲಿಕ್‌ ಡ್ರಿಂಕ್‌ಗಳು ತಯಾರಾಗಲಿದೆ ಎಂದು ತಿಳಿದುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಧಾರವಾಡ ಜಿಲ್ಲಾಸ್ಪತ್ರೆ ಪರಿಶೀಲನೆ: ಟೆಲಿಮನಸ್‌ ಸೇವೆಗೆ ಫುಲ್‌ ಖುಷ್‌

ಈ ಕಾರ್ಖಾನೆಯಿಂದಾಗಿ ಚಾಮರಾಜನಗರದಲ್ಲಿ ಸ್ಥಳೀಯವಾಗಿ 800-1000 ಮಂದಿಗೆ ನೌಕರಿ ಸಿಗಲಿದೆ ಮತ್ತು ಪರೋಕ್ಷವಾಗಿ ನೂರಾರು ಮಂದಿಗೆ ಸಹಾಯವಾಗಲಿದೆ ಎಂದು ಕೈಗಾರಿಕೆ ಇಲಾಖೆ ಉಪನಿರ್ದೇಶಕ ರಾಜೇಂದ್ರಪ್ರಸಾದ್‌ ಅವರು ತಿಳಿಸಿದ್ದಾರೆ.

ಈಗಾಗಲೇ ಬಿರ್ಲಾ ಗ್ರೂಪ್‌ನಿಂದ ಪರಿಸರಸ್ನೇಹಿ ಬಣ್ಣದ ಕಾರ್ಖಾನೆ ಕೂಡ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದ್ದು, ಅದು ಅಂತಿಮ ಹಂತದಲ್ಲಿದೆ. ಅಲ್ಲದೆ, ಮತ್ತೊಬ್ಬ ಕ್ರಿಕೆಟಿಗ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಗುಂಡ್ಲುಪೇಟೆಯಲ್ಲಿ ಭೂಮಿ ಖರೀದಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

click me!