ಉದ್ಯೋಗಿಗಳ ರಾಜ್ಯ ವಿಮಾ ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

By Kannadaprabha News  |  First Published Oct 29, 2023, 5:36 PM IST

ಉದ್ಯೋಗಿಗಳ ರಾಜ್ಯ ವಿಮಾ ನಿಗಮ ವಿವಿಧ ರಾಜ್ಯಗಳ ವಿಭಾಗಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್‌ 30ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.


ಇಎಸ್‌ಐಸಿ (ಉದ್ಯೋಗಿಗಳ ರಾಜ್ಯ ವಿಮಾ ನಿಗಮ)‌ ಭಾರತದಾದ್ಯಂತ ವಿವಿಧ ರಾಜ್ಯಗಳ ವಿಭಾಗಗಳಲ್ಲಿ ಖಾಲಿ ಇರುವ ಇಸಿಜಿ ತಂತ್ರಜ್ಞ, ಜೂನಿಯರ್ ರೇಡಿಯೋಗ್ರಾಫರ್, ವೈದ್ಯಕೀಯ ದಾಖಲೆ ಸಹಾಯಕ, ಆಡಿಯೋಮೀಟರ್ ತಂತ್ರಜ್ಞ, ಓಟಿ ಸಹಾಯಕ, ಡೆಂಟಲ್ ಮೆಕ್ಯಾನಿಕ್ ಮತ್ತು ಇತರೆ ಖಾಲಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

Latest Videos

undefined

1 . ಬಿಹಾರ- 64 ಹುದ್ದೆ

2. ಚಂಡೀಗಢ ಮತ್ತು ಪಂಜಾಬ್- 32 ಹುದ್ದೆ

3. ಛತ್ತೀಸ್‌ಗಢ - 23 ಹುದ್ದೆ

4. ದೆಹಲಿ - 275 ಹುದ್ದೆ

5. ಗುಜರಾತ್- 72 ಹುದ್ದೆ

6. ಹಿಮಾಚಲ ಪ್ರದೇಶ- 06 ಹುದ್ದೆ

7. ಜಮ್ಮು ಮತ್ತು ಕಾಶ್ಮೀರ- 09 ಹುದ್ದೆ

8. ಜಾರ್ಖಂಡ್- 17 ಹುದ್ದೆ

9. ಕರ್ನಾಟಕ- 57 ಹುದ್ದೆ

10. ಕೇರಳ- 12 ಹುದ್ದೆ

11. ಮಧ್ಯಪ್ರದೇಶ- 13 ಹುದ್ದೆ

12. ಮಹಾರಾಷ್ಟ್ರ- 71 ಹುದ್ದೆ

13. ಅಸ್ಸಾಂ- 13 ಹುದ್ದೆ

14. ಒಡಿಶಾ- 28 ಹುದ್ದೆ

15. ರಾಜಸ್ಥಾನ- 125 ಹುದ್ದೆ

16. ತಮಿಳುನಾಡು- 56 ಹುದ್ದೆ

17. ತೆಲಂಗಾಣ- 70 ಹುದ್ದೆ

18. ಉತ್ತರ ಪ್ರದೇಶ- 44 ಹುದ್ದೆ

19. ಉತ್ತರಾಖಂಡ- 09‌ಹುದ್ದೆ

20. ಪಶ್ಚಿಮ ಬಂಗಾಳ- 42 ಹುದ್ಷೆ

ನಾಸಾದಲ್ಲಿ 1.85 ಕೋಟಿ ರೂ ಉದ್ಯೋಗ ಪಡೆದ ಯುವಕನ ಸುಳ್ಳಿನ ಕಥೆ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷರ ಸಹಿಯ ಐಡಿ ಕಾರ್ಡ್!

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-10-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-10-2023

ಅರ್ಜಿ ಶುಲ್ಕ

ಸಾಮಾನ್ಯ/ಓಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ : ರೂ. 500

ಎಸ್ ಸಿ/ ಎಸ್ ಟಿ / ಪಿಡಬ್ಲ್ಯೂಡಿ/ಇಎಸ್ ಎಮ್/ಸ್ತ್ರೀ/ ಇಲಾಖೆ ಅಭ್ಯರ್ಥಿಗಳಿಗೆ : ರೂ. 250

ವಯಸ್ಸಿನ ಮಿತಿ ( 30-10-2023 ರಂತೆ )

ಕನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ : 32 ವರ್ಷಗಳು

ವೇತನ ಶ್ರೇಣಿ

1. ಇಸಿಜಿ ತಂತ್ರಜ್ಞ : ಹಂತ- 4 ರೂ. 25500- 81100

2. ವೈದ್ಯಕೀಯ ದಾಖಲಾತಿ ಸಹಾಯಕ : ಹಂತ-2 ರೂ. 19,900- 63,200

3. ಜೂನಿಯರ್ ರೇಡಿಯೋಗ್ರಾಫರ್ : ಹಂತ-3 ರೂ. 21,700 - 69,100

4. ಸಾಮಾಜಿಕ ಮಾರ್ಗದರ್ಶಿ/ ಸಾಮಾಜಿಕ ಕೆಲಸಗಾರ : ಹಂತ-4 ರೂ.25500- 81100

5. ಫಾರ್ಮಾಸಿಸ್ಟ್ (ಅಲೋಪತಿಕ್) : ಹಂತ-5 ರೂ.29200- 92300

6. ಫಾರ್ಮಾಸಿಸ್ಟ್ (ಆಯುರ್ವೇದ): ಹಂತ-5 ರೂ. 29200- 92300

7.ರೇಡಿಯೋಗ್ರಾಫರ್ : ಹಂತ-5 ರೂ. 29200- 92300

8. ಜೂನಿಯರ್ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ : ಹಂತ-5 ರೂ.29200- 92300

10. ಡೆಂಟಲ್ ಮೆಕ್ಯಾನಿಕ್ : ಹಂತ-5 ರೂ.29200- 92300

ಬಿಇಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರೊಬೇಷನರಿ ಎಂಜಿನಿಯರ್‌, ಅಧಿಕಾರಿಗಳ ನೇಮಕಾತಿ, 12 ಲಕ್ಷ ವೇತನ!

ಶೈಕ್ಷಣಿಕ ವಿದ್ಯಾರ್ಹತೆ

1. ಇಸಿಜಿ ತಂತ್ರಜ್ಞ : ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ವಿಜ್ಞಾನ ವಿಷಯದಲ್ಲಿ ಎಸ್‌ ಎಸ್‌ ಎಲ್‌ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಹಾಗೂ ಎ ಐ ಸಿ ಟಿ ಇ ಸಂಸ್ಥೆಯಿಂದ ಇಸಿಜಿಯಲ್ಲಿ ಎರಡು ವರ್ಷಗಳ ಡಿಪ್ಲೊಮಾ ಪಡೆದಿರಬೇಕು.

2. ವೈದ್ಯಕೀಯ ದಾಖಲಾತಿ ಸಹಾಯಕ: ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗೂ ವೈದ್ಯಕೀಯ ದಾಖಲೆ ತಂತ್ರಜ್ಞರ ತರಬೇತಿ ಪ್ರಮಾಣಪತ್ರ ಪಡೆದಿರಬೇಕು. ಮತ್ತು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 35 ಪದಗಳ ಟೈಪಿಂಗ್ ವೇಗ ಹೊಂದಿರಬೇಕು.

3. ಜೂನಿಯರ್ ರೇಡಿಯೋಗ್ರಾಫರ್ : ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ರೇಡಿಯಾಗ್ರಫಿಯಲ್ಲಿ ಪ್ರಮಾಣಪತ್ರ ಪಡೆದಿರಬೇಕು.

4. ಸಾಮಾಜಿಕ ಮಾರ್ಗದರ್ಶಿ/ ಸಾಮಾಜಿಕ ಕೆಲಸಗಾರ : ಎ ಐ ಸಿ ಟಿ ಇ ಸಂಸ್ಥೆಯಿಂದ ಸಮಾಜಕಾರ್ಯದಲ್ಲಿ ಪದವಿ/ಡಿಪ್ಲೊಮಾ ಜೊತೆಗೆ ಕುಟುಂಬ ಯೋಜನೆ/ ಸಾಮಾಜಿಕ ಕೆಲಸ/ಆರೋಗ್ಯದಲ್ಲಿ ಶಿಕ್ಷಣ/ತರಬೇತಿಯಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.

5. ಫಾರ್ಮಾಸಿಸ್ಟ್ (ಅಲೋಪತಿಕ್) : ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿ ಕಾಯಿದೆ 1948 ರ ಅಡಿಯಲ್ಲಿ ಫಾರ್ಮಸಿ ಪದವಿ/ ಡಿಪ್ಲೊಮಾ ಹೊಂದಿರಬೇಕು.

6. ಫಾರ್ಮಾಸಿಸ್ಟ್ (ಆಯುರ್ವೇದ) : ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಆಯುರ್ವೇದದಲ್ಲಿ ಬ್ಯಾಚುಲರ್ ಆಫ್ ಫಾರ್ಮಸಿ ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಸಂಸ್ಥೆಯಲ್ಲಿ ಒಂದು ವರ್ಷ ಫಾರ್ಮಸಿಸ್ಟ್(ಆಯುರ್ವೇದ) ಆಗಿ ಅನುಭವ ಹೊಂದಿರಬೇಕು.

7.ರೇಡಿಯೋಗ್ರಾಫರ್ : ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ರೇಡಿಯಾಗ್ರಫಿಯಲ್ಲಿ ಡಿಪ್ಲೊಮಾ ಪ್ರಮಾಣಪತ್ರದ ಜೊತೆಗೆ ಆಸ್ಪತ್ರೆ ಅಥವಾ ವೈದ್ಯಕೀಯ ಸಂಸ್ಥೆಯಲ್ಲಿ ರೇಡಿಯಾಗ್ರಫಿಯಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.

8. ಜೂನಿಯರ್ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ : ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವೈದ್ಯಕೀಯ ಪ್ರಯೋಗಾಲಯದಲ್ಲಿ ಡಿಪ್ಲೊಮಾ / ಪದವಿ ಪಡೆದಿರಬೇಕು.

9. ಡೆಂಟಲ್ ಮೆಕ್ಯಾನಿಕ್ : ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಡೆಂಟಲ್‌ನಲ್ಲಿ ಡಿಪ್ಲೊಮಾ ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದಂತವೈದ್ಯರಾಗಿ ನೋಂದಾಯಿಸಿಕೊಂಡಿರಬೇಕು. ಹಾಗೂ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ ಹೇಗೆ?

ಲಿಖಿತ ಪರೀಕ್ಷೆ : ಇಲ್ಲಿ ತಾಂತ್ರಿಕ/ವೃತ್ತಿಪರ ಜ್ಞಾನ , ಸಾಮಾನ್ಯ ಜ್ಞಾನ, ಜನರಲ್ ಇಂಟೆಲಿಜೆನ್ಸ್, ಅಂಕಗಣಿತದ ಸಾಮರ್ಥ್ಯ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 100 ಪ್ರಶ್ನೆಗಳಿದ್ದು, 150 ಅಂಕಗಳಿಗೆ ಎರಡು ಗಂಟೆಗಳ ಅವಧಿಗೆ ಪರೀಕ್ಷೆ ನಡೆಸಲಾಗುತ್ತದೆ.

ಸೂಚನೆ: (1) ಪ್ರತಿ ತಪ್ಪು ಉತ್ತರಕ್ಕೆ 0.25 ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುವುದು.

(2) ಪರೀಕ್ಷೆಯ ಹೆಚ್ಚುವರಿ ಹಂತವನ್ನು ಪರಿಚಯಿಸುವ ಹಕ್ಕನ್ನು ಇ ಎಸ್ ಐ ಸಿ ಕಾಯ್ದಿರಿಸಿರುತ್ತದೆ.

ಅರ್ಹತಾ ಅಂಕಗಳು

1. ಲಿಖಿತ ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತಾ ಅಂಕಗಳು ಸಾಮಾನ್ಯ ವರ್ಗಕ್ಕೆ ಶೇಕಡಾ 45, ಓಬಿಸಿ ವರ್ಗಕ್ಕೆ 40 ಶೇಕಡಾ , ಇಡಬ್ಲ್ಯೂಎಸ್ ವರ್ಗ, ಎಸ್ ಸಿ, ಎಸ್ ಟಿ ಮತ್ತು ಮಾಜಿ ಸೈನಿಕರಿಗೆ 35 ಶೇಕಡಾ ಮತ್ತು ಪಿಡಬ್ಲ್ಯೂಡಿ ವರ್ಗಕ್ಕೆ 30 ಶೇಕಡಾ ಅಂಕಗಳನ್ನು ಪಡೆಯಬೇಕು. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಅಂತಿಮ ಆಯ್ಕೆಗಾಗಿ ಪರಿಗಣಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ವೀಕ್ಷಿಸಬಹುದು.

click me!