ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಾಡುವ ವೇಳೆ ಕಿರಿಕ್, ನಿಮಗೊಂದು ಸ್ಕೀಂ ಮಾಡೋ ಚಿಂತನೆ ಇದೆ ಎಂದ ಕುಡುಕ!

By Ravi Janekal  |  First Published Oct 29, 2023, 4:51 PM IST

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಾಡುವ ವೇಳೆ ಕುಡುಕನೋರ್ವ ಕಿರಿಕ್ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.


ಹಾವೇರಿ (ಅ.29) ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಾಡುವ ವೇಳೆ ಕುಡುಕನೋರ್ವ ಕಿರಿಕ್ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಇಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದ ವೀರರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಚಿವೆ ಮಾತನಾಡುತ್ತಿದ್ದ ವೇಳೆ ನಡೆದಿರುವ ಘಟನೆ.  ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಹಲವು ಯೋಜನೆ ತಂದಿದ್ದೇ ಗಂಡು ಮಕ್ಕಳಿಗಾಗಿ, ಹೆಣ್ಣು ಮಕ್ಕಳಿಗಾಗಿ ಅಲ್ಲ. ಯಾಕಂದ್ರೆ ಗಂಡುಮಕ್ಕಳ ಜೇಬಿನಲ್ಲಿ ಸ್ವಲ್ಪವಾದರೂ ಹಣ ಉಳಿಯಲಿ, ಖಾಲಿಯಾಗದಿರಲಿ ಅನ್ನೋ ಉದ್ದೇಶಕ್ಕೆ ಜಾರಿ ಮಾಡಿದ್ದೇವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್.

Tap to resize

Latest Videos

undefined

ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಮತ್ತೆ ಗುಡುಗಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಈ ವೇಳೆ ಮಧ್ಯಪ್ರವೇಶ ಮಾಡಿ ಕುಡುಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೇ ನಿಮಗೂ ಒಂದು ಸ್ಕೀಂ ಮಾಡಬೇಕು ಅಂತಾ ಚಿಂತನೆ ಇದೆ ಎಂದ ಕುಡುಕ. ಕುಡುಕನ ಮಾತು ಕೇಳಿ ನೆಗೆಗಡಲಲ್ಲಿ ತೇಲಿ ಸಮಾರಂಭ. ಕುಡುಕನ ಮಾತಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಮುಸಿಮುಸಿ ನಗುವಂತಾಯಿತು.

2019ರ ಉಪಚುನಾವಣೆ ವೇಳೆ ಕಾಗವಾಡ ವಿಧಾನಸಬಾ ಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಮಾತಾಡುವಾಗ, ಇದೇ ರೀತಿ ಮಧ್ಯೆ ಬಾಯಿ ಹಾಕಿದ್ದ ಕುಡುಕ ಐನಾಪುರ ಗ್ರಾಮದ ಪೀರಪ್ಪ ಎಂಬಾತ ಸಿದ್ದರಾಮಯ್ಯನವರಿಗೆ 'ಹೌದು ಹುಲಿಯಾ..' ಅಂತಾ ಕೂಗಿ ಇಡೀ ಸಮಾರಂಭವನ್ನೇ ನೆಗೆಗಡಲಲ್ಲಿ ತೇಲಿಸಿದ್ದ. ಭಾಷಣದ ವೇಳೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಅವರು, ಏ ಯಾರೋ ಅದು...? ಇನ್ನೊಂದು ಸಲ ಹಾಗೆ ಕೂಗಿದರೆ ಹೊರಗೆ ಹಾಕುವೆ. ಬೆಳಬೆಳಗ್ಗೆ ಗುಂಡು ಹಾಕ್ಕೊಂಡು ಬಂದವ್ನೆ ಎನ್ನುತ್ತಾ ಭಾಷಣ ಮುಂದುವರಿಸಿದ್ದರು. ಈ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿ ರಾತ್ರೋರಾತ್ರಿ ಪೀರಪ್ಪ ಸೆಲೆಬ್ರಿಟಿ ಆಗಿಬಿಟ್ಟ. ಇದೀಗ ಅಂಥದೇ ಘಟನೆ ಮರುಕಳಿಸಿದೆ.

ಬಿಜೆಪಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ, ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ; ರಾಮಲಿಂಗಾರೆಡ್ಡಿ

click me!