ನಾಳೆ ಅರ್ಧ ಬೆಂಗಳೂರಿಗೆ ವಿದ್ಯುತ್ ಪೂರೈಕೆ ಸ್ಥಗಿತ

Published : Jul 20, 2022, 06:12 PM IST
ನಾಳೆ ಅರ್ಧ ಬೆಂಗಳೂರಿಗೆ ವಿದ್ಯುತ್ ಪೂರೈಕೆ ಸ್ಥಗಿತ

ಸಾರಾಂಶ

ವರುಣನ ಅಬ್ಬರ ಕಡಿಮೆಯಾಗ್ತಿದ್ದಂತೆ, ಬಿಸಿಲಿನ ಬೇಗೆ ಕಾವೇರಿದೆ.ಭಾರೀ ಮಳೆಗೆ ಕೆಲವು ಕಡೆ ಕರೆಂಟ್ ಇಲ್ಲದೆ ಪರದಾಡಿದ್ದಾಯ್ತು, ಈಗ ಪವರ್ ಕಟ್ ಸರದಿ.  ನಾಳೆ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಿದೆ.

ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು20); ವರುಣನ ಅಬ್ಬರ ಕಡಿಮೆಯಾಗ್ತಿದ್ದಂತೆ, ಬಿಸಿಲಿನ ಬೇಗೆ ಕಾವೇರಿದೆ. ಇದರ ಮಧ್ಯೆ ವಿದ್ಯುತ್ ಕಡಿತ ಮಾಡೋ ಮೂಲಕ ಬೆಸ್ಕಾಂ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡ್ತಿದೆ. ಈಗಾಗಲೆ ಮಳೆಯ ಅವಾಂತರಕ್ಕೆ ಸಿಲುಕಿ ರೋಸಿ ಹೋಗಿದ್ದ ಜನರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಮತ್ತೆ ಕರೆಂಟ್ ಶಾಕ್ ನೀಡಿದೆ.

ಭಾರೀ ಮಳೆಗೆ ಕೆಲವು ಕಡೆ ಕರೆಂಟ್ ಇಲ್ಲದೆ ಪರದಾಡಿದ್ದಾಯ್ತು, ಈಗ ಪವರ್ ಕಟ್ ಸರದಿ.  ನಾಳೆ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಿದೆ.  ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಮಳೆಯ ಆರ್ಭಟಕ್ಕೆ ಮರಗಳು ಧರೆಗುರುಳಿ ಕರೆಂಟ್ ಕಂಬಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳಿಗೂ ಹಾನಿಯಾಗಿದೆ. ಇವೆಲ್ಲವುಗಳ ದುರಸ್ಥಿ ಕಾರ್ಯವನ್ನು ಬೆಸ್ಕಾಂ ಕೈಗೆತ್ತಿಕೊಂಡಿದೆ.

ಗೆಳತಿಯ ಭೇಟಿಗಾಗಿ ಇಡೀ ಗ್ರಾಮಕ್ಕೆ ಪವರ್ ಕಟ್ ಮಾಡ್ತಿದ್ದ ಇಲೆಕ್ಟ್ರಿಷಿಯನ್‌

ಹೀಗಾಗಿ ಬೆಸ್ಕಾಂ ನಗರದ ಹಲವೆಡೆ ಒಂದು ದಿನ ವಿದ್ಯುತ್ ಕಡಿತಗೊಳಿಸಿ ದುರಸ್ಥಿ ಕಾರ್ಯ ಶುರುಮಾಡಲಿದೆ.  ಹೀಗಾಗಿ ಜನ ಕರೆಂಟ್ ಶಾಕ್ ಗೊಳಗಾಗೋದು ಖಂಡಿತ. ಎನ್ ಜಿಇಎಫ್ ಸ್ಟೇಷನ್ ಹಾಗೂ ಹೆಚ್ ಬಿಆರ್ ಲೇಔಟ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆ ಬೆಂಗಳೂರು ಪೂರ್ವ ಭಾಗದಲ್ಲಿ ಪೂರ್ತಿ ವಿದ್ಯುತ್ ಸ್ಥಗಿತವಾಗಲಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
ಎಸ್.ಎಮ್.ವಿ. ರೇಲ್ವೆ ನಿಲ್ದಾಣ(SMV Railway station), ಬಜಾರ್ ಸ್ವೀಟ್(Bazar Street) ಜೋಗುಪಾಳ್ಯ(Jogupalya) ಮುಖ್ಯ ರಸ್ತೆ, ವಂಶ ಕೋರ್ಟ್‌(Vamsha Court), ಆರ್ಟಿಲರಿ ರಸ್ತೆ, ಗೌತಮ್ , ಕೇಯ ರಾತ್ರಿ, ಆರ್.ಎಂ.ಎಸ್ ಮಿಲ್ಲೇನಿಯ, ಹಲಸೂರು, ಹಲಸೂರು ರಸ್ತೆ ಸುತ್ತಮುತ್ತ, ಕೆನರಾ ಬ್ಯಾಂಕ್, ಅಜಂತ ಸರ್ಕಲ್, ಇಂದಿರಾನಗರ 1ನೇ ಹಂತ, ಹೆಚ್.ಎ.ಎಲ್ 2ನೇ ಹಂತ ಹಲಸೂರು, ಹಳೆ ಮದ್ರಾಸ್ ರಸ್ತೆ, ಕುವೆಂಪು ಸ್ಟ್ರೀಟ್, ವಿವೇಕಾನಂದ ಸ್ಟ್ರೀಟ್,  ಕೊಂಡಪ್ಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್,  ಹೆಚ್ ಎಎಲ್  ಶಿವ ದೇವಸ್ತಾನದ ರಸ್ತೆ, ಅಯ್ಯಪ್ಪ ದೇವಸ್ಥಾನದ ರಸ್ತೆ, ಹೆಚ್ ಎಎಲ್ ಕ್ವಾಟ್ರಸ್ ಹಾಗೂ ಸುತ್ತಮುತ್ಯಲಿನ ಪ್ರದೇಶಗಳು  

ಊರನ್ನೇ ಕತ್ತಲೆಗೆ ದೂಡಿ ಗೆಳತಿಯೊಂದಿಗೆ ಕಷ್ಟ-ಸುಖ... ಪೆಟ್ಟು ಬಿದ್ರೂ ಮದುವೆಯಾಯ್ತು!

ಯಾಸಿನ್ ನಗರ, ಸುಭಾಷ್ ಲೇಔಟ್, ರಾಮ ದೇವರ ರಸ್ತೆ, ಕೃಷ್ಣ ರೆಡ್ಡಿ ಲೇಔಟ್, ವಿಜಿ‌ ಕಾಲೋನಿ 3ನೇ ಬ್ಲಾಕ್‌, ರಿಮಘ್ ರೋಡ್,  ಎಂ.ಆರ್.ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ ಉಮಯ್ಯ ಲೇಔಟ್, ಲಿಂಗರಾಜಪುರ, ಎಸ್‌.ಜಿ. ಗಾರ್ಮೆಂಟ್ಸ್, ಕುಪ್ಪುಸ್ವಾಮಿ ಲೇಔಟ್, ಹೆಚ್.ಕೆ.ಲೇಔಟ್, ಥಣಿಸಂದ್ರ, ಕೆಜಿ ಹಳ್ಳಿ, ಅರೇಬಿಕ್ ಕಾಲೇಜ್, ಗೋವಿಂದರಾಜಪುರ ಮುಖ್ಯ ರಸ್ತೆ, ಹೆಗಡೆ ನಗರ, ಕೆಕೆ ಹಳ್ಳಿ, ವಿದ್ಯಾಸಾಗರ,  ಕಮ್ಮನಹಳ್ಳಿ , ಬೆಥನಹಳ್ಳಿ, ಹೆಗಡೆನಗರ,  ಕೆಂಪೇಗೌಡ ಲೇಔ್, ನಾಗೇನಹಳ್ಳಿ, ಹಿದಾಯತ್ ನಗರ, ಭಾರತ್  ಮಾತಾ ಲೇಔಟ್ ಸೇರಿದಂತೆ 250ಕ್ಕೂ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ