Poll expenditure limit : ಲೋಕಸಭೆ, ವಿಧಾನಸಭೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿ ಭರ್ಜರಿ ಏರಿಕೆ

By Kannadaprabha NewsFirst Published Jan 7, 2022, 8:14 AM IST
Highlights
  •   ಲೋಕಸಭೆ, ವಿಧಾನಸಭೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿ ಭರ್ಜರಿ ಏರಿಕೆ
  • ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 70 ಲಕ್ಷದಿಂದ 90 ಲಕ್ಷಕ್ಕೆ ಏರಿಕೆ

ನವದೆಹಲಿ (ಜ.07) : ಕೇಂದ್ರೀಯ ಚುನಾವಣಾ ಆಯೋಗವು (Election)  ಲೋಕಸಭೆ (Loksabha) ಹಾಗೂ ವಿಧಾನಸಭಾ ಚುನಾವಣೆಗೆ (Assembly Election) ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಗುರುವಾರ ಪರಿಷ್ಕರಿಸಿದೆ. ಲೋಕಸಭಾ ಚುನಾವಣೆಯಲ್ಲಿ (Election) ದೊಡ್ಡ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 70 ಲಕ್ಷದಿಂದ 90 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಹಾಗೂ ಸಣ್ಣ ರಾಜ್ಯಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 54 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲಾಗಿದೆ. 

ಅದೇ ರೀತಿ ದೊಡ್ಡರಾಜ್ಯಗಳಲ್ಲಿ ಸ್ಪರ್ಧಿಸುವ ವಿಧಾನಸಭಾ ಚುನಾವಣೆಯ  ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 28 ಲಕ್ಷದಿಂದ 40 ಲಕ್ಷಕ್ಕೆ ಹಾಗೂ ಸಣ್ಣ ರಾಜ್ಯಗಳ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 20 ರಿಂದ 28 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಚುನಾವಣಾ (Election)  ಆಯೋಗ ರಚಿಸಿದ ವಿಶೇಷ ಸಮಿತಿಯು ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಹಣದುಬ್ಬರ ಸೂಚ್ಯಾಂಕದಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ವೆಚ್ಚದ ಮಿತಿಯನ್ನು ಪರಿಷ್ಕರಿಸಿದೆ. ಮುಂಬರುವ ಉತ್ತರಪ್ರದೇಶ (Uttara Pradesh ), ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ಚುನಾವಣಾಯಲ್ಲಿ ಪರಿಷ್ಕೃತ ವೆಚ್ಚದ ಮಿತಿಯು ಅನ್ವಯವಾಗಲಿದೆ.

ಚುನಾವಣಾ ಆಯೋಗಕ್ಕೆ ಪತ್ರ ಬರೆದ ಕಾಂಗ್ರೆಸ್ :  ಮೂರು ದಿನಗಳ ಭೇಟಿಗೆ ಬಂದಿರುವ ಚುನಾವಣಾ ಆಯೋಗದ ಅಧಿಕಾರಿಗಳು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಚರ್ಚೆ ನಡೆಸಿದ್ದು, ಬಿಎಸ್‌ಪಿ-ಎಸ್‌ಪಿ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಬೆಂಬಲವನ್ನು ನೀಡಿದ್ದಾರೆ. ಇವೆಲ್ಲದರ ಬಳಿಕ ಇದೀಗ ಉತ್ತರ ಪ್ರದೇಶ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸರ್ಕಾರಿ ವೆಚ್ಚದಲ್ಲಿ ನಡೆಯುತ್ತಿರುವ ಪ್ರಧಾನಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರ ಸಮಾವೇಶಗಳನ್ನು ನಿಷೇಧಿಸುವಂತೆ ಆಗ್ರಹಿಸಿದೆ.

ಇದಲ್ಲದೆ, ಕೊರೋನಾದ ಮೂರನೇ ಅಲೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ದೊಡ್ಡ ಸಮಾವೇಶಗಳನ್ನು ನಿಲ್ಲಿಸಿ ಸಣ್ಣ ಸಭೆಗಳು, ಚೌಪಲ್‌ಗಳು, ವರ್ಚುವಲ್ ಸಭೆಗಳು ಮತ್ತು ಮನೆ ಮನೆಗೆ ಪ್ರಚಾರಗಳನ್ನು ಆಯೋಜಿಸುವ ಅಗತ್ಯವನ್ನು ಸಹ ತಿಳಿಸಲಾಗಿದೆ. ಗುರುವಾರ ಪಕ್ಷದ ಮುಖಂಡರಾದ ಪಿ.ಎಲ್.ಪುನಿಯಾ, ಪ್ರಮೋದ್ ತಿವಾರಿ, ಆರಾಧನಾ ಮಿಶ್ರಾ ಮೋನಾ ಮತ್ತು ನಸೀಮುದ್ದೀನ್ ಸಿದ್ದಿಕಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. 

ಸರ್ಕಾರಿ ವೆಚ್ಚದಲ್ಲಿ ಸಮಾವೇಶ, ಬಿಜೆಪಿಯಿಂದ ಅಧಿಕಾರ ದುರುಪಯೋಗ: ಕಾಂಗ್ರೆಸ್

ವಿಧಾನಪರಿಷತ್ ನಾಯಕ ಆರಾಧನಾ ಮಿಶ್ರಾ ಮಾತನಾಡಿ, ಬಿಜೆಪಿ ನಾಯಕರು ಸರ್ಕಾರಿ ವೆಚ್ಚದಲ್ಲಿ ರ್ಯಾಲಿ ನಡೆಸುವ ಜತೆಗೆ ಸಂವಿಧಾನ ಬಾಹಿರ ಭಾಷೆ ಬಳಸಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು. ಅಮೇಠಿಯಲ್ಲಿ ಪರಿಶಿಷ್ಟ ಜಾತಿಯ ಬಾಲಕಿಯ ಮೇಲಿನ ದೌರ್ಜನ್ಯ ಘಟನೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ ಸರಾಸರಿ 135 ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುತ್ತಿವೆ. ಬಿಜೆಪಿ ಸರಕಾರ ಶೇ.79ರಷ್ಟು ಮಹಿಳಾ ಭದ್ರತಾ ನಿಧಿಯನ್ನು ಮಹಿಳೆಯರ ಹಿತರಕ್ಷಣೆಗಾಗಿ ವಿನಿಯೋಗಿಸುವ ಬದಲು ಕೇವಲ ಸುಳ್ಳು ಪ್ರಚಾರದಲ್ಲಿ ವ್ಯರ್ಥ ಮಾಡಿದೆ. ಸಂತ್ರಸ್ತ ಬಾಲಕಿ ಹಾಗೂ ಕುಟುಂಬದವರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರನ್ನು ಬಂಧಿಸಿರುವುದು ಬಿಜೆಪಿ ಸರ್ಕಾರದ ಸರ್ವಾಧಿಕಾರ ಧೋರಣೆ ಎಂದು ಬಣ್ಣಿಸಿದರು.

ದಲಿತರು ಮತ್ತು ಮಹಿಳೆಯರು ಯುಪಿಯಲ್ಲಿ ಹೆಚ್ಚಿದ ಹಿಂಸೆ

ಇದೇ ವೇಳೆ, ಉತ್ತರಪ್ರದೇಶದಲ್ಲಿ ದಲಿತರು ಮತ್ತು ಮಹಿಳೆಯರ ಮೇಲೆ ಗರಿಷ್ಠ ದೌರ್ಜನ್ಯ ನಡೆಯುತ್ತಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಪಿಎಲ್ ಪುನಿಯಾ ಹೇಳಿದ್ದಾರೆ. ಅಪರಾಧಿಗಳಿಗೆ ಸರ್ಕಾರದ ರಕ್ಷಣೆ ಸಿಗುವುದೇ ಇದಕ್ಕೆ ಕಾರಣ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಮೇಥಿಯ ಸಂತ್ರಸ್ತ ಬಾಲಕಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ. ಮಾಜಿ ಸಂಸದ ಪ್ರಮೋದ್ ತಿವಾರಿ ಮಾತನಾಡಿ, ಆದಿತ್ಯನಾಥ್ ಸರ್ಕಾರ ಐದು ವರ್ಷಗಳಿಂದ ಸಂತ್ರಸ್ತರಿಗೆ ಬೆದರಿಕೆ ಹಾಕುವ ಮೂಲಕ ಅಪರಾಧಿಗಳನ್ನು ರಕ್ಷಿಸುತ್ತಿದೆ ಮತ್ತು ಘಟನೆಗಳನ್ನು ಮುಚ್ಚಿಹಾಕುತ್ತಲೇ ಇದೆ. ಅಮೇಠಿಯಲ್ಲಿ ನಡೆದ ಘಟನೆಯೂ ಅದರ ಪರಿಣಾಮವಾಗಿದೆ. ಹಾಗಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳು ಅಪರಾಧ ನಿಯಂತ್ರಣದ ಸರ್ಕಾರದ ಸುಳ್ಳು ಹೇಳಿಕೆಗಳನ್ನು ಬಹಿರಂಗಪಡಿಸುತ್ತಿವೆ ಎಂದು ಮಾಜಿ ಸಚಿವ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ನಸೀಮುದ್ದೀನ್ ಸಿದ್ದಿಕಿ ಹೇಳಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ.

click me!