ಸಚಿವ ಸಿ.ಎಸ್. ಶಿವಳ್ಳಿ ನಿಧನದ ಹಿನ್ನಲೆಯಲ್ಲಿ ಕುಂದಗೋಳ ವಿಧಾನಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ಬೆಂಗಳೂರು, (ಏ09): ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.
ತಂದೆಯ ಸಾವಿನ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ
ಇದೇ ಮೇ 19ರಂದು ಮತದಾನ ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ನಡೆಯಲಿದೆ. ಮಾರ್ಚ್ 22ರಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ(57) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು.
ಈ ಕುರಿತು ಇಂದು (ಮಂಗಳವಾರ) ಅಧಿಸೂಚನೆ ಹೊರಡಿಸಿರುವ ಕೇಂದ್ರ ಚುನಾವಣಾ ಆಯೋಗ, ತಮಿಳುನಾಡಿನ ಸೂಲೂರು, ಅರ್ವಾಕುರಿಚ್ಚಿ, ತಿರುಪರಾನ್ಕುಂದರಂ ಮತ್ತು ಒಟ್ಟಾಪಿದರಂ ಕ್ಷೇತ್ರಗಳಿಗೆ ಕೂಡ ಉಪಚುನಾವಣೆಗೆ ದಿನಾಂಕ ಪ್ರಕಟಿಸಿದೆ.
ಈ ಐದು ಕ್ಷೇತ್ರಗಳ ಉಪಚುನಾವಣೆಗೆ ಏ.22ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ಏ.29 ಕೊನೇ ದಿನವಾಗಿದೆ. ಏ.30ಕ್ಕೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 2 ಕೊನೇ ದಿನವಾಗಿರುತ್ತದೆ ಎಂದು ಆಯೋಗ ತಿಳಿಸಿದೆ.
ಲೋಕಸಭಾ ಎಲೆಕ್ಷನ್ ಅಬ್ಬರದ ನಡುವೆಯೇ ಇದೀಗ ಕುಂದಗೋಳು ವಿಧಾನಸಭಾ ಉಪಚುನಾವಣೆಯ ಕಾವು ಏರಲಿದೆ.
ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ತೀವ್ರ ಹೃದಯಾಘಾತದಿಂದ ನಿಧನ
ಇನ್ನು ಲೋಕಸಭಾ ಚುನಾವಣೆಯ ಮತ ಎಣಿಕೆ (ಮೇ 23) ದಿನದಂದೇ ಕುಂದಗೋಳು ವಿಧಾನಸಭಾ ಉಪಚುನಾವಣೆಯ ಮತ ಕಾರ್ಯ ನಡೆಯಲಿದೆ.