ಬೆಂಗಳೂರಿನಲ್ಲಿ ಲಂಚ ಪಡೆಯುತ್ತಿದ್ದ ಐಟಿ ಅಧಿಕಾರಿ ಅರೆಸ್ಟ್

By Web DeskFirst Published Apr 3, 2019, 10:21 PM IST
Highlights

ಬೆಂಗಳೂರಿನಲ್ಲಿ CBI ಅಧಿಕಾರಿಗಳ ದಾಳಿ | CBI ಬಲೆಗೆ ಬಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಾಗೇಶ್ | ಜಯನಗರ ಕೆಫೆ ಕಾಫಿ ಡೇ ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿ ನಾಗೇಶ್ ನನ್ನು ಬಂಧಿಸಿದ ಸಿಬಿಐ. .

ಬೆಂಗಳೂರು, [ಏ.03] ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಯನ್ನು [ಐಟಿ] ಸಿಬಿಐ ಬಂಧಿಸಿದೆ. ನಾಗೇಶ್ ಬಂಧಿತ ಐಟಿ ಅಧಿಕಾರಿ ಎಂದು ತಿಳಿದುಬಂದಿದೆ.

ಬೆಂಗಳೂರಿನ ಜಯನಗರದ ಕೆಫೆ ಕಾಫಿಡೇನಲ್ಲಿ ಇಂದು [ಬುಧವಾರ] ಸಂಜೆ ಗುತ್ತಿಗೆದಾರನಿಂದ 14ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ನಾಗೇಶ್ ನನ್ನು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನಾಗೇಶ್ ಗುತ್ತಿಗೆದಾರನೊಬ್ಬನಿಂದ  40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದರ ಮುಂಗಡ 14 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗಷ್ಟೇ ಈ ಐಟಿ ಅಧಿಕಾರಿ ಗುತ್ತಿಗೆದಾರ ಶ್ರೀನಿವಾಸ್​ ಮನೆ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣದಿಂದ ಶ್ರೀನಿವಾಸ್​ ಅವರನ್ನು  ಖುಲಾಸೆಗೊಳಿಸುವ ಸಲುವಾಗಿ ಹಣದ ಬೇಡಿಕೆ ಇಟ್ಟಿದ್ದರು. ಆ ಹಣವನ್ನು ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮೊನ್ನೇ ಅಷ್ಟೇ ರಾಜ್ಯದ ಹಲವೆಡೆ ಏಕಾಕಾಲಕ್ಕೆ ಕೆಲ ರಾಜಕಾರಣಿಗಳು ಹಾಗೂ ಗುತ್ತಿಗೆದಾರರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದು ಲೋಕಸಭಾ ಚುನಾವಾಣೆ ಹೊಸ್ತಿಲಲ್ಲಿ ಈ ದಾಳಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

ಐಟಿ ದಾಳಿ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಮುಂದೆ ಧರಣಿ ನಡೆಸಿದ್ದರು.

ಇದರ ಮಧ್ಯೆ ಇದೀಗ ಐಟಿ ಅಧಿಕಾರಿಯೊಬ್ಬ ಲಂಚ ತೆಗೆದುಕೊಳ್ಳುತ್ತಿರುವಾಗ ಸಿಕ್ಕಿಬಿದ್ದಿದ್ದು, ಮುಂದೆ ಇದು ಹಲವು ರಾಜಕೀಯ ಆಯಾಮಗಳಿಗೆ ಎಡೆಮಾಡಿಕೊಟ್ಟರೂ ಅಚ್ಚರಿಯಿಲ್ಲ. 

click me!