ಚಿಕ್ಕೋಡಿಯಲ್ಲಿ ಬರೋಬ್ಬರಿ 1 ಲಕ್ಷ 80 ಸಾವಿರ ರೂ.ಗೆ ಮಾರಾಟವಾದ ಮೇಕೆ!

By Ravi Janekal  |  First Published Jun 16, 2024, 10:01 PM IST

ನಾಳೆ ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದ ಬಕ್ರಿದ್ ಆಚರಣೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮೇಕೆಯೊಂದ ಬರೊಬ್ಬರಿ 1 ಲಕ್ಷ 80 ಸಾವಿರ ರೂಪಾಯಿ ಮಾರಾಟವಾಗಿ ದಾಖಲೆ ಮಾಡಿದೆ. ಘಟನೆ ವಿಡಿಯೋ ವೈರಲ್ ಆಗಿದ್ದು ಒಂದೇ ಒಂದು ಮೇಕೆ ಈ ಬೆಲೆಗೆ ಮಾರಾಟವಾಗಿದ್ದು ಕಂಡು ಹುಬ್ಬೇರಿಸಿದ ಜನರು


ಚಿಕ್ಕೋಡಿ (ಜೂ.16): ನಾಳೆ ಮುಸಲ್ಮಾನರ ಪವಿತ್ರ ಹಬ್ಬಗಳಲ್ಲೊಂದಾದ ಈದ್-ಅಲ್-ಅಧಾ ಅಥವಾ ಬಕ್ರೀದ್ ಆಚರಣೆ ಹಿನ್ನೆಲೆ ಮೇಕೆಗಳ ಮಾರಾಟ ಜೋರಾಗಿದೆ. ಮೇಕೆಗಳ ಮಾರಾಟವೇ ಹಬ್ಬದ ವಿಶೇಷತೆಗಳಲ್ಲೊಂದು.  ಕೆಲವು ಕಡೆ 1 ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ ಮೇಕೆ ಮಾರಾಟವಾಗಿ ದಾಖಲೆ ಮಾಡುತ್ತವೆ. ಅದೇ ರೀತಿ ಚಿಕ್ಕೋಡಿಯಲ್ಲಿ ಒಂದು ಮೇಕೆ ಬರೋಬ್ಬರಿ 1 ಲಕ್ಷ 80 ಸಾವಿರ ರೂಪಾಯಿಗೆ ಮಾರಾಟವಾಗಿ ಹುಬ್ಬೇರಿಸುವಂತೆ ಮಾಡಿದೆ. 

ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಟ್ನಾಳ್ ಗ್ರಾಮದ ರೈತ ಶಿವಪ್ಪ ಎಂಬುವವರಿಗೆ ಸೇರಿದ ಮೇಕೆ ಬರೋಬ್ಬರಿ 1 ಲಕ್ಷ 80 ಸಾವಿರ ರೂಪಾಯಿ ಮಾರಾಟವಾಗಿದೆ. ಮಾರಾಟದ ವೇಳೆ ನೆರೆದಿದ್ದ ನೂರಾರು ಜನರ ನಡುವೆ ಮೇಕೆ ಖರೀದಿಗೆ ಸವಾಲು ಹಾಕಲಾಗಿತ್ತು. ಸವಾಲು ಸ್ವೀಕರಿಸಿ ಖರೀದಿ ಮಾಡಿದ ವ್ಯಕ್ತಿ. 

Latest Videos

undefined

ತ್ಯಾಗ, ಬಲಿದಾನವನ್ನು ಸ್ಮರಿಸುವ ಮುಸಲ್ಮಾನರ ಪವಿತ್ರ ಹಬ್ಬ ಈದುಲ್ ಅಝ್ಹಾ 

ಮೇಕೆ ಖರೀದಿಗೆ ಸವಾಲು ಹಾಕಲಾಗಿತ್ತು. ಕೆಲವರು ದುಬಾರಿ ಬೆಲೆಗೆ ಖರೀದಿಸಲು ಹಿಂದೇಟು ಹಾಕಿದರು. ಆದರೆ ಸವಾಲು ಸ್ವೀಕರಿಸಿದ ಹಾಸನ ಮೂಲದ ವ್ಯಕ್ತಿಯೊಬ್ಬ 1 ಲಕ್ಷ 80 ಸಾವಿರ ರೂಪಾಯಿಗೆ ಮೇಕೆ ಖರೀದಿಸಿ ನೆರೆದಿದ್ದ ನೂರಾರು ಜನರ ಹುಬ್ಬೇರಿಸುವಂತೆ ಮಾಡಿದ್ದಾನೆ.

ಬಕ್ರೀದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ರಸ್ತೆಗಳು, ಫ್ಲೈ ಓವರ್‌ಗಳಲ್ಲಿ ವಾಹನ ಸಂಚಾರ ನಿಷೇಧ

ಮುಸ್ಲಿಮರು ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ ಹಬ್ಬವು ಒಂದು. ಇದು ಬಹಳ ವಿಶೇಷತೆಯನ್ನು ಹೊಂದಿದೆ. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬದ ಹಿಂದಿನ ದಿನ ಮೇಕೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ 

click me!