ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಭೂಮಿಯಿಂದ ಬಂದ ಶಬ್ದಕ್ಕೆ ಮನೆಯಿಂದ ಹೊರಬಂದ ಜನ

By Govindaraj SFirst Published Dec 5, 2022, 1:00 AM IST
Highlights

ಜಿಲ್ಲೆಯಲ್ಲಿ ಭಾನುವಾರ ಸಂಜೆ ಭೂಕಂಪನ ಸಂಭವಿಸಿದ್ದು,ಯಾವುದೇ ಅಪಾಯ ಸಂಭವಿಸಿಲ್ಲ. ಭಾನುವಾರ ರಾತ್ರಿ 7-57ಕ್ಕೆ ಟಕ್ಕಳಕಿ ಗ್ರಾಮದಲ್ಲಿ 7 ಕಿ.ಮೀ. ಭೂಮಿಯ ಆಳದಲ್ಲಿ 2.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. 

ವಿಜಯಪುರ (ಡಿ.05): ಜಿಲ್ಲೆಯಲ್ಲಿ ಭಾನುವಾರ ಸಂಜೆ ಭೂಕಂಪನ ಸಂಭವಿಸಿದ್ದು,ಯಾವುದೇ ಅಪಾಯ ಸಂಭವಿಸಿಲ್ಲ. ಭಾನುವಾರ ರಾತ್ರಿ 7-57ಕ್ಕೆ ಟಕ್ಕಳಕಿ ಗ್ರಾಮದಲ್ಲಿ 7 ಕಿ.ಮೀ. ಭೂಮಿಯ ಆಳದಲ್ಲಿ 2.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ತಾಲ್ಲೂಕಿನ ಹುಬನೂರ, ಟಕ್ಕಳಕಿ, ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಜಾಲಗೇರಿ, ಇಟ್ಟಂಗಿಹಾಳ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ. 

ಭೂಮಿ ಕಂಪಿಸಿದ ಅನುಭವ ಆಗುತ್ತಲೇ ಜನರು ಆತಂಕದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಲಘು ಭೂಕಂಪನ ಆಗಿರುವುದನ್ನು ದೃಢಪಡಿಸಿದೆ. ಇನ್ನು ಭೂಕಂಪನ ಮಾಫನ ಆಫ್‌ಗಳಲ್ಲು ಕಂಪನ ದಾಖಲಾಗಿದ್ದು, 2.7 ತೀವ್ರತೆಯಲ್ಲಿ ಭೂಕಂಪನವಾಗಿದೆ. ಸದ್ಯ ಭೂಕಂಪನಗಳ ಬಗ್ಗೆ ಮಾಹಿತಿ ನೀಡುವ ಆಫ್‌ಗಳಲ್ಲು ಭೂಕಂಪನ ತೀವ್ರತೆ ದಾಖಲಾಗಿದೆ.

ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ

ವಿಜಯಪುರದಲ್ಲಿ ಸರಣಿ ಭೂಕಂಪನ: ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನ ಮುಂದುವರೆದಿದೆ‌. ಬೆಂಗಳೂರಿನಿಂದ ವಿಜಯಪುರಕ್ಕೆ ಇಬ್ಬರು ವಿಜ್ಞಾನಿಗಳು ಅಧ್ಯಯನಕ್ಕಾಗಮಿಸಿ ಭೂಕಂಪಿಸಿದ ಗ್ರಾಮಗಳಿಗೆ ಭೇಟಿ ನೀಡಿ ಜನ್ರಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದ್ರು.

ಭೂ ವಿಜ್ಞಾನಿಗಳ ಬಂದಾಗಲೇ ಕಂಪಿಸಿದ ಭೂಮಿ: ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಭೂಕಂಪನಗಳ ಬಗ್ಗೆ ಅಧ್ಯಯನ, ಮೂಲ ಮತ್ತೆಗೆ ವಿಜ್ಞಾನಿಗಳು ಆಗಮಿಸಿದ್ದರು.. ರಾತ್ರಿಯೇ ಆಗಮಿಸಿದ ವಿಜ್ಞಾನಿಗಳು ಭೂಕಂಪನ ಅನುಭವವಾಗಿದೆ. ವಿಜ್ಞಾನಿಗಳಿಗೆ ಭೂಕಂಪನ ಕೇಂದ್ರಗಳ ಪರಿಶೀಲನೆಗೆ ತೆರಳಿದಾಗಲು ಸರಣಿ ರೀತಿಯಲ್ಲಿ ಭೂಕಂಪನ ಆಗಿದೆ. ಅಧ್ಯಯನ ನಡೆದ ಸಮಯದಲ್ಲೆ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ.

ಒಂದೇ ದಿನ ನಾಲ್ಕು ಬಾರಿ ನಡುಗಿದ ಭೂಮಿ: ವಿಜಯಪುರ ಜಿಲ್ಲೆ ಆಗಸ್ಟ್ 26ರಂದು ನಾಲ್ಕು ಬಾರಿ ಭೂಮಿ ಕಂಪಿಸಿದೆ‌. ತಡರಾತ್ರಿ, ನಸುಕಿನ ಜಾವ, ಮುಂಜಾನೆ ಪುನಃ ಮಧ್ಯಾಹ್ನ ಭೂಕಂಪನ ಸಂಭವಿಸಿದೆ. ಒಂದೆ ದಿನ ನಾಲ್ಕು-ನಾಲ್ಕು ಬಾರಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ.. ಮುಂದೆ ಏನಾಗುತ್ತೋ ಭಯದಲ್ಲಿ ಜನರಿದ್ದಾರೆ.

ಭೂಕಂಪನ‌ ಕೇಂದ್ರಗಳಿಗೆ ವಿಜ್ಞಾನಿಗಳ ಭೇಟಿ: ವೈಜ್ಞಾನಿಕ ಅಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಅಧಿಕಾರಿ ರಮೇಶ ತಿಪ್ಪಾಲ ಆಗಮಿಸಿ.ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಉಕ್ಕಲಿ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ರು. ಉಕ್ಕಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಸಿಸ್ಮೋ ಮೀಟರ್  ಅಳವಡಿಸಿ, ನಿಗಾವಹಿಸಲು ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರಿಗೆ  ಮುಂಜಾಗೃತಾ ಜಾಗೃತಿ ಮೂಢಿಸಿದ್ರು.ಜೊತೆಗೆ ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ರು.

Chikkamagaluru: ಡಿ.ಎನ್.ಜೀವರಾಜ್‌ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಜನರು ಭಯಗೊಳ್ಳಬಾರದು, ಅಧಿಕಾರಿಗಳಿಂದ ಜಾಗೃತಿ: ವಿಜಯಪುರ ಜಿಲ್ಲೆಯಲ್ಲಿ  ಲಘು ಭೂಕಂಪನ ಆಗುತ್ತಿದೆ, ಯಾರೂ ಭಯಗೊಳ್ಳಬಾರದು.ವಾಡಿಕೆಗಿಂತ ಮಳೆ ಹೆಚ್ಚಾಗಿರೋದ್ರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯೋ ಭೂಕಂಪಿಸೋದು ಪ್ರಕ್ರಿಯೆಯಾಗಿದೆ.ಯಾರೂ ಆತಂಕಗೊಳ್ಳದೇ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ರು.

click me!