8 ತಿಂಗಳಿಂದ ಪೇಮೆಂಟ್ ಬಾಕಿ; ವಿಷ ಕುಡಿಯಲು ಮುಂದಾದ ಗುತ್ತಿಗೆದಾರ ಸೈಯದ್

By Ravi Janekal  |  First Published Nov 4, 2023, 1:12 PM IST

 ಕಳೆದ ಎಂಟು ತಿಂಗಳಿನಿಂದ ಪೇಮೆಂಟ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಕಿಯೋನಿಕ್ಸ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದ ಗುತ್ತಿಗೆದಾರರು.


ಬೆಂಗಳೂರು (ನ.4) :  ಕಳೆದ ಎಂಟು ತಿಂಗಳಿನಿಂದ ಪೇಮೆಂಟ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಕಿಯೋನಿಕ್ಸ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದ ಗುತ್ತಿಗೆದಾರರು.

ಶಾಂತಿನಗರದಲ್ಲಿರುವ ಕಿಯೋನಿಕ್ಸ್ ಕಚೇರಿ. 150 ಕೋಟಿ ಬಾಕಿ ಉಳಿಸಿಕೊಂಡಿರುವ ಕಿಯೋನಿಕ್ಸ್ ಸಂಸ್ಥೆ. ಹೀಗಾಗಿ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಗಪ್ಪ ವಿರುದ್ಧ ಸಿಡಿದೆದ್ದಿರುವ ಗುತ್ತಿಗೆದಾರರು. ರಾಜ್ಯದ ಬೇರೆ ಬೇರೆ ಭಾಗದಿಂದ ಆಗಮಿಸಿರುವ ಗುತ್ತಿಗೆದಾರರು ಬಾಕಿ ಹಣ ರಿಲೀಸ್ ಮಾಡುವಂತೆ ಹಾಗೂ ಟೆಂಡರ್‌ಗಳನ್ನು ಮತ್ತೆ ಮುಂದುವರಿಸುವಂತೆ ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಕನಸಿನ ಯೋಜನೆಯಲ್ಲೂ ಅಕ್ರಮ: ಗುತ್ತಿಗೆದಾರ,ಅಧಿಕಾರಿಗಳ ನಡುವೆ ಕಮಿಷನ್ ಫೈಟ್

 

ವಿಷ ಕುಡಿಯಲು ಮುಂದಾದ ಗುತ್ತಿಗೆದಾರ:

ಕಿಯೋನಿಕ್ಸ್ ಸಂಸ್ಥೆಯಿಂದ ಬಾಕಿ ಪಾವತಿ ವಿಳಂಬ ಹಿನ್ನೆಲೆ ಬೇಸತ್ತು ಗುತ್ತಿಗೆದಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ವಿಷದ ಬಾಟಲಿಯೊಂದಿಗೆ ಪ್ರತಿಭಟನೆಗೆ ಬಂದಿದ್ದ ಗುತ್ತಿಗೆದಾರ ಸೈಯದ್. 60 ಲಕ್ಷ ಬಾಕಿ ಹಣ ಉಳಿಸಿಕೊಂಡಿರುವ ಕಿಯೋನಿಕ್ಸ್ ಇದರಿಂದ ಬೇಸತ್ತು ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಸೈಯದ್. ವಿಷದ ಬಾಟಲಿ ಕಸಿದುಕೊಂಡ ಗುತ್ತಿಗೆದಾರರು. ಬಳಿಕ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದರೆ ನಮಗೆ ವಿಷ ಕುಡಿಯುವುದೊಂದೇ ಬಾಕಿ ಇರೋದು ಎಂಡಿ ಸಂಗಪ್ಪಗೆ ಎಚ್ಚರಿಸಿ ಗುತ್ತಿದಾರರು. ಸದ್ಯ ಎಂಡಿ ಸಂಗಪ್ಪ ಸಚಿವ ಪ್ರಿಯಾಂಕ್ ಖರ್ಗೆ ಕರೆದಿರುವ ಸಭೆಯಲ್ಲಿ ಭಾಗಿಯಾಗಿರುವ ಹಿನ್ನೆಲೆ. ಎಂಡಿ ಸಂಗಪ್ಪ ಬರೋತನಕ ಯಾವುದೇ ನಿರ್ಣಯ ಕೈಗೊಳ್ಳೋದು ಬೇಡ ಎಂದು ನಿರ್ಧಿರಿಸಿ ಬರುವಿಕೆ ದಾರಿ ಕಾಯುತ್ತಿರುವ ಗುತ್ತಿಗೆದಾರರು. 

ಎಂಡಿ ಸಂಗಪ್ಪ ವಿರುದ್ಧ ಕಮಿಷನ್ ಆರೋಪ:

 ಎಂಡಿ ಸಂಗಪ್ಪ ವಿರುದ್ಧ ಕಮೀಷನ್ ಆರೋಪವೂ ಕೇಳಿಬಂದಿದೆ. ಸುಮಾರು 150 ಕೋಟಿ ಬಾಕಿ ಬಿಲ್ ಹಣ ಬಾಕಿ ಉಳಿಸಿಕೊಂಡಿರುವುದರಿಂದ 450ಕ್ಕೂ ಹೆಚ್ಚು ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಬಾಕಿ ಹಣ ಬಿಡುಗಡೆ ಮಾಡಲು ಎಂಡಿ ಸಂಗಪ್ಪ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 21 ರೊಳಗೆ ಬಾಕಿ ಬಿಲ್ ಬಿಡುಗಡೆ ‌ಮಾಡುವುದಾಗಿ ಹೇಳಿದ್ದ ಎಂಡಿ ಸಂಗಪ್ಪ. ಆದರೆ  ನವೆಂಬರ್ ತಿಂಗಳು ಬಂದ್ರು ಬಾಕಿ ಬಿಲ್ ಬಿಡುಗಡೆ ಮಾಡಿಲ್ಲ. ಸೆಪ್ಟಂಬರ್ 15 ರಂದು ಹಣ ಬಿಡುಗಡೆ ಮಾಡಲಾಗಿದೆ. ಬಿಲ್ ರೆಡಿ ಮಾಡಿ ಚೆಕ್ ಗೆ ಸಹಿ ಹಾಕಿರುವ ಅಧಿಕಾರಿಗಳು. ದಾಖಲೆಗಳಲ್ಲಿ ಹಣ ಪಾವತಿ ಅಂತ ತೋರಿಸಿ. ನಂತರ ಚೆಕ್ ಕ್ಯಾನ್ಸಲ್ ಮಾಡಿರುವ ಎಂಡಿ ಸಂಗಪ್ಪ. ಕಮಿಷನ್ ಹಣಕ್ಕೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿರುವ ಗುತ್ತಿಗೆದಾರರು.

 

ಐಟಿ ದಾಳಿಯಲ್ಲಿ ಸಿಕ್ಕಿದ್ದು ಬಿಜೆಪಿ ಹಣ: ಡಿಕೆಶಿ ಗಂಭೀರ ಆರೋಪ


ನಮ್ಮ ಬೇಡಿಕೆ ಈಡೇರೊ ವರೆಗೂ ನಾವು ಇಲ್ಲಿಂದ ಹೋಗಲ್ಲ. ಕೆಲ ಗುತ್ತಿಗೆದಾರರಿಗೆ ವಿಷ ಕುಡಿಯುವ ಪರಸ್ಥಿತಿ ಇದೆ. ಈ ಹಿಂದಿನಂತೆ ಪಾರದರ್ಶಕವಾಗಿ ಕೆಲಸ ಆಗಬೇಕು. ಅಧಿಕಾರಿಗಳು ಹಾಗೂ ಸಚಿವರು ಬರೋ ವರೆಗೂ ಪ್ರತಿಭಟನೆ ನಿಲ್ಲೋದಿಲ್ಲ

ಗುತ್ತಿಗೆದಾರರ ಸಂಘದ ಅಧ್ಯಕ್ಷ ವಸಂತ ಕೆ ಬಂಗೇರಾ
 

click me!