ಕಾಂಗ್ರೆಸ್ ನಾಯಕರು ಪಾಪಿಷ್ಟರು ಇದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬಾರದೇ ಬರಗಾಲ ಬರುತ್ತದೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರ (ನ.04): ಕಾಂಗ್ರೆಸ್ ನಾಯಕರು ಪಾಪಿಷ್ಟರು ಇದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬಾರದೇ ಬರಗಾಲ ಬರುತ್ತದೆ. ಇದಕ್ಕಾಗಿಯೇ ಕಾಂಗ್ರೆಸ್ಸಿಗರು ಪಾಪಿಷ್ಟರು ಇದ್ದಾರೆಂದು ಜನರು ನಿರ್ಣಯ ಮಾಡುತ್ತಿದ್ದಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ಬಿಜೆಪಿ ತಂಡದಿಂದ ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂತಂದರ ಜನರು ಏನು ಹೇಳುತ್ತಾರೆಂದರೆ, ಕಾಂಗ್ರೆಸ್‌ನವರು ಪಾಪಿಷ್ಟರು ಇದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಒಂದು ಸಲಾನೂ ಮಳೆಯಾಗೊದಿಲ್ಲ. ಬರಗಾಲ ಬೀಳುತ್ತದೆ ಎಂದು ಜನರು ನಿರ್ಣಯ ಮಾಡಿ ಹೇಳುತ್ತಾರೆಂದು ತಿಳಿಸಿದರು.
ಕಾಂಗ್ರೆಸ್‌ನ ಒಳಜಗಳದಿಂದಲೇ ರಾಜ್ಯ ಸರ್ಕಾರ ಪತನ: ನಳಿನ್ ಕಟೀಲ್
ಇದೇ ವೇಳೆ ಮಾಧ್ಯಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಮುರುಘೇಶ ನಿರಾಣಿ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆಯಾ ಎನ್ನೋದೆ ಗೊತ್ತಾಗ್ತಿಲ್ಲ. ಗ್ಯಾರಂಟಿ ಮೋಸದಿಂದ ಅಧಿಕಾರಕ್ಕೆ ಬಂದಿದ್ದಾರೆ. ಫ್ರೀ ಕರೆಂಟ್ ನೀಡ್ತೀವಿ ಎಂದು ಪವರ್ ಕಟ್ ಮಾಡ್ತಿದ್ದಾರೆ. ಮಹಿಳೆಯರಿಗೆ ಬಸ್ ಪ್ರೀ ಎಂದರು, ಬಸ್ ಕಡಿಮೆ ಮಾಡಿದ್ದಾರೆ. ಸರ್ಕಾರ ಅಸ್ತವ್ಯಸ್ತವಾಗಿ ನಡೆಯುತ್ತಿದೆ. ರಾಜ್ಯದ 7 ಕೋಟಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಹಿಂದಿನ ಸರ್ಕಾರದ ಕಾಮಗಾರಿ ನಡೆಯುತ್ತಿಲ್ಲ. ಮಂಜೂರಾದ ಕಾಮಗಾರಿ ಪೂರ್ತಿ ಮಾಡಲಿ. ಹಣ ಕೊಟ್ಟರೆ ಮಾತ್ರ ಕೆಲಸ ಮಾಡ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರವಾಗಿ ನನಗೆ ರಾಜ್ಯಾಧ್ಯಕ್ಷನಾಗುವ ಆಸೆ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಅರ್ಹತೆಗೆ ಅನುಗುಣವಾಗಿ ಕೊಟ್ಟ ಕೆಲಸ ಮಾಡ್ತೇನೆ. ಟಿಕೆಟ್ ಕೊಡದೆ ಕಾರ್ಯಕರ್ತನಾಗಿ ಕೆಲಸ ಮಾಡು ಅಂದ್ರೆ ಮಾಡ್ತೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಗದ್ದಲವೆದ್ದಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಮಾತಾಡೋದು ಒಂದು ಮಾಡೋದು ಇನ್ನೊಂದು. 'ಕಾಂಗ್ರೆಸ್‌ನ 50 ಶಾಸಕರು ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಎರಡಲ್ಲ, ನಾಲ್ಕು ಬಣಗಳಿವೆ. ಮೇಲ್ನೋಟಕ್ಕೆ ಎರಡು ಬಣ ಇವೆ. ಈಗ ನಾಲ್ಕು ಡಿಸಿಎಂ ಸ್ಥಾನ ಕೇಳ್ತಿದ್ದಾರೆ, ಸಿಎಂ ವಿಚಾರದಲ್ಲು ಗೊಂದಲ ಇದೆ. ಒಟ್ಟಾರೆ ರಾಜ್ಯ ಸರ್ಕಾರವೇ ಗೊಂದಲದಲ್ಲಿದ್ದು, ಸರ್ಕಾರ 5 ವರ್ಷ ಮುಂದುವರೆಯೋದಿಲ್ಲ. ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದರು.
ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್, ಬಹಿರಂಗ ಹೇಳಿಕೆ ನೀಡಿದ ಸಚಿವರಿಗೆ ಖಡಕ್ ವಾರ್ನಿಂಗ್
ಬಿಜೆಪಿ ಹೈಕಮಾಂಡ್ ಜೊತೆಗೆ ಕಾಂಗ್ರೆಸ್ 50 ಶಾಸಕರು ಸಂಪರ್ಕ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾದ 50 ಶಾಸಕರು ಬಿಜೆಪಿಯ ಹೈಕಮಾಂಡ್ ಜೊತೆಗೆ ಟಚ್‌ನಲ್ಲಿದ್ದಾರೆ. ಇದರಲ್ಲಿ ಉಪ ಮುಖ್ಯಮಂತ್ರಿ ಆಕಾಂಕ್ಷಿಗಳು, ಸಚಿವರು ಹಾಗೂ ಸಚಿವ ಸ್ಥಾನ ವಂಚಿತ ಶಾಸಕರು, ಅಸಮಧಾನಿತ ಶಾಸಕರು, ಹೊಸ ಶಾಸಕರು ಟಚ್‌ನಲ್ಲಿದ್ದಾರೆ. ಅವರೆ ಬಂದು ಬಾಗಿಲು ತಟ್ಟುತ್ತಿದ್ದಾರೆ. ನಾವು ಸರ್ಕಾರ ಕೆಡವಲ್ಲ, ತಾನಾಗಿಯೇ ಪತನವಾಗುತ್ತದೆ. ಸರ್ಕಾರ ಯಾವಾಗ ಪತನಾಗುತ್ತೆ ಕಾದು ನೋಡಿ ಎಂದ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.