
ಬೆಂಗಳೂರು (ಜು.9) ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಗೆ ಮತ್ತೊಂದು ಬಲಿಯಾಗಿದೆ. ಪಾನಮತ್ತ ಯುವಕನೋರ್ವ ಮಧ್ಯೆ ರಾತ್ರಿ ವೇಳೆ ಜಾಲಿ ರೈಡ್ ಮಾಡುವಾಗ ತಡೆಗೋಡೆಗೆ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಪದ್ಮನಾಭ ನಗರದ ದೇವೆಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ರಾಮ್ ಕುಮಾರ್( 29)ಮೃತ ದುರ್ದೈವಿ. ಹಿಂಬದಿ ಕುಳಿತಿದ್ದ ಮತ್ತೋರ್ವ ಯುವಕ ಯಶವಂತ (22) ಗಂಭೀರ ಗಾಯಗೊಂಡಿದ್ದಾನೆ. ಯುವಕರಿಬ್ಬರು ಬ್ಯಾಟರಾಯನಪುರ ಬಳಿಯ ಪ್ರಮೋದ್ ಲೇಔಟ್ ನಿವಾಸಿಗಳು. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ರಾಮ್ ಕುಮಾರ್. ನಿನ್ನೆ ಮಧ್ಯೆರಾತ್ರಿ ಎರಡು ಗಂಟೆ ಸುಮಾರಿಗೆ ಜಾಲಿ ರೈಡ್ ಹೋಗಿದ್ದಾರೆ. ಈ ವೇಳೆ ಪಾನಮತ್ತರಾಗಿರುವ ಯುವಕರು ನಿಯಂತ್ರಣ ಕಳೆದುಕೊಂಡು ಫ್ಲೈಓವರ್ ತಡೆಗೋಡೆಗೆ ಡಿಕ್ಕಿಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ರಾಮ್‌ಕುಮಾರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ಇನ್ನೋರ್ವ ತಡೆಗೋಡೆಗೆ ಡಿಕ್ಕಿಯಾಗಿ ಹಿಂಬದಿಯಿಂದ ಹಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಸದ್ಯ ಗಾಯಾಳು ಯಶವಂತ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮ್ ಕುಮಾರ್ ಮೃತ ದೇಹ ಕಿಮ್ಸ್ ಅಸ್ಪತ್ರೆಗೆ ರವಾನೆ
ಆರತಕ್ಷತೆ ನಡೆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತದಲ್ಲಿ ಬಲಿಯಾದ ವಧು; ವರನಿಗೆ ಗಂಭೀರ ಗಾಯ!
ಡ್ರಿಂಗ್ ಅಂಡ್ ಡ್ರೈವ್ ಮಾಡಿರುವ ಬಗ್ಗೆ ಮಾಹಿತಿ. ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ತಪ್ಪಿಸಲು ಹೋಗಿ ದೇವರ ಚಪ್ಪರಕ್ಕೆ ವಾಹನ ಡಿಕ್ಕಿ
ಸೋಮವಾರಪೇಟೆ: ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಯಡವನಾಡು ಗ್ರಾಮದ ಉದ್ಭವ ಎಮ್ಮೆ ಬಸವಣ್ಣನ ಮೂರ್ತಿಗೆ ಅಳವಡಿಸಿದ್ದ ಚಪ್ಪರಕ್ಕೆ ಪಿಕ್‌ಅಪ್ ಡಿಕ್ಕಿ ಹೊಡೆದ ಪರಿಣಾಮ ಬಸವಣ್ಣನ ಮೂರ್ತಿಗೆ ಹಾನಿಯಾಗಿರುವ ಘಟನೆ ಶನಿವಾರ ಸಂಭವಿಸಿದೆ.
ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಪಿಕ್‌ಅಪ್ ವಾಹನ ಎದುರಿಗೆ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ದಿಢೀರ್ ಆಗಿ ಉದ್ಭವ ಎಮ್ಮೆ ಬಸವಣ್ಣನ ಮೂರ್ತಿಗೆ ಅಳವಡಿಸಿದ್ದ ಚಪ್ಪರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಚಪ್ಪರದ ಕಂಬಗಳು ಬಸವಣ್ಣನ ಮೂರ್ತಿಯ ಮೇಲೆ ಬಿದ್ದ ಪರಿಣಾಮ ಬಸವಪ್ಪನ ಮೂರ್ತಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.
ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿ ಮೇಲೆ ಹರಿದ ಶಾಲಾ ಬಸ್, ಸ್ಥಳದಲ್ಲೇ ವಿದ್ಯಾರ್ಥಿ ಸಾವು
ದೇವರ ಮೂರ್ತಿಯ ಕಡೆ ಪಿಕ್‌ಅಪ್ ವಾಹನ ತಿರುಗದೆ ನೇರವಾಗಿ ಕಾರಿಗೆ ಹೊಡೆದಿದ್ದರೆ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಬೇಕಿತ್ತು, ಅದನ್ನು ತಪ್ಪಿಸಲು ಹೋಗಿ ಎಮ್ಮೆ ಬಸವಣ್ಣನ ಮೂರ್ತಿಗೆ ಹಾನಿಯುಂಟಾಯಿತು. ಆದರೆ ವೇಗವಾಗಿ ಬಂದ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಹೋಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ