ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

By Kannadaprabha NewsFirst Published Jul 9, 2023, 10:29 AM IST
Highlights

ಅಮರನಾಥ ಯಾತ್ರೆಗೆ ತೆರಳುವ ಮಾರ್ಗಮಧ್ಯೆ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕರ್ನಾಟಕದ 80 ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಿಲುಕಿಕೊಂಡು ಸಂಕಷ್ಟದಲ್ಲಿದ್ದಾರೆ.

ಗದಗ (ಜು.09): ಅಮರನಾಥ ಯಾತ್ರೆಗೆ ತೆರಳುವ ಮಾರ್ಗಮಧ್ಯೆ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕರ್ನಾಟಕದ 80 ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಿಲುಕಿಕೊಂಡು ಸಂಕಷ್ಟದಲ್ಲಿದ್ದಾರೆ. ಈ ಪೈಕಿ, 23 ಯಾತ್ರಾರ್ಥಿಗಳು ಗದಗ ಜಿಲ್ಲೆಯವರು. ಯಾತ್ರಾರ್ಥಿಗಳು ಅಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿ​ಯವ​ರಿಗೆ ವಿಡಿಯೋ ಕಳಿಸಿದ್ದು, ‘ನಮ್ಮನ್ನು ರಕ್ಷಣೆ ಮಾಡಿ, ನಮ್ಮ ತವ​ರೂರಿಗೆ ಸುರ​ಕ್ಷಿ​ತ​ವಾಗಿ ತೆರ​ಳಲು ಅನು​ಕೂಲ ಮಾಡಿ​ಕೊಡಿ’ ಎಂದು ಮನವಿ ಮಾಡಿ​​ದ್ದಾ​ರೆ. ಜುಲೈ 4ರಂದು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಂದ ಇವರೆಲ್ಲಾ ಅಮರನಾಥಕ್ಕೆ ತೆರಳಿದ್ದರು. 

ಅಮರನಾಥ ದರ್ಶನ ಪಡೆದು ಶುಕ್ರವಾರ ವಾಪಸ್‌ ಆಗುವ ವೇಳೆ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಮಾರ್ಗ ಮಧ್ಯೆ ಇವರು ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳು ಸದ್ಯ ಬೇಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆದು ಸುರ​ಕ್ಷಿ​ತ​ವಾ​ಗಿ​ದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ, ಗದಗ ಜಿಲ್ಲೆಯ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಜಿಲ್ಲಾ​ಡ​ಳಿತ ಹಾಗೂ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ ಬಿ.ಎಸ್‌.ನೇಮಗೌಡ್ರ ಅವ​ರಿಂದ ನಿರಂತರ ಪ್ರಯತ್ನ ನಡೆ​ದಿ​ದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಬಿ.ಎಸ್‌.ನೇಮಗೌಡ್ರ, ಹವಾ​ಮಾನ ವೈಪ​ರಿತ್ಯದ ಕಾರಣ ಗುಡ್ಡ ಕುಸಿದು ರಸ್ತೆ ಬಂದ್‌ ಆ​ಗಿದೆ. 

Mandya: ಕೆಆರ್‌ಎಸ್‌ ಒಳಹರಿವಿನಲ್ಲಿ ಹೆಚ್ಚಳ: ಒಂದೇ ದಿನದಲ್ಲಿ ಎರಡು ಅಡಿ ನೀರು ಏರಿಕೆ

ಹೀಗಾಗಿ, ಗದಗ ಜಿಲ್ಲೆಯ ಯಾತ್ರಾ​ರ್ಥಿ​ಗಳು ಮಾರ್ಗಮಧ್ಯೆ ಸಿಲು​ಕಿ​ಕೊಂಡಿ​ದ್ದಾರೆ. ಯಾತ್ರಾ​ರ್ಥಿ​ಗಳು ಬೇಸ್‌ಕ್ಯಾಂಪ್‌ನಲ್ಲಿದ್ದು, ಸಾಮಾನ್ಯ ಹೆಲಿ​ಕಾ​ಪ್ಟ​ರ್‌ಗೆ ಇಲ್ಲಿಗೆ ತೆರಳಲು ಆಗು​ವು​ದಿಲ್ಲ. ಸೇನಾ ಹೆಲಿ​ಕಾ​ಪ್ಟರ್‌ ಅವ​ಶ್ಯ​ಕತೆ ಇದ್ದು, ವಾತಾ​ವ​ರ​ಣ ವೈಪ​ರಿ​ತ್ಯ​ದಿಂದ ಸೇನಾ ಹೆಲಿ​ಕಾ​ಪ್ಟರ್‌ ತೆರ​ಳಲು ಸ್ವಲ್ಪ ವಿಳಂಬ​ವಾ​ಗಿದೆ. ಸೇನೆ​ಯೊಂದಿಗೆ ನಿರಂತರ ಸಂಪರ್ಕ ಮಾಡಿ ಜಿಲ್ಲೆಯ 23 ಜನ ಯಾತ್ರಾ​ರ್ಥಿ​ಗ​ಳನ್ನು ಸುರಕ್ಷಿ​ತ​ವಾಗಿ ಕರೆ​ತ​ರಲು ಸಿದ್ಧತೆ ಮಾಡಿ​ಕೊ​ಳ್ಳ​ಲಾ​ಗಿದೆ. ಸದ್ಯ ಅವರು ಸುರ​ಕ್ಷಿತ ಜಾಗದಲ್ಲಿದ್ದಾರೆ. ಕುಟುಂಬ​ಸ್ಥರು ಆತಂಕ ಪಡುವ ಅವ​ಶ್ಯ​ಕತೆ ಇಲ್ಲ. ಸುರ​ಕ್ಷಿ​ತ​ವಾಗಿ ಕರೆ​ತ​ರಲು ಅಗತ್ಯ ಕ್ರಮ ಕೈಗೊ​ಳ್ಳ​ಲಾ​ಗಿದೆ ಎಂದು ತಿಳಿಸಿದ್ದಾರೆ.

ಅಲ್ಲಲ್ಲಿ ಗುಡ್ಡ ಕುಸಿತ: ನಮ್ಮೊಟ್ಟಿಗೆ ಬೇರೆ ಬೇರೆ ಕಡೆಯವರು ಇದ್ದಾರೆ. ಹಲವರು ಬೇಸ್‌ ಕ್ಯಾಂಪಿನಲ್ಲಿ ಆಶ್ರಯ ಪಡೆದಿದ್ದೇವೆ. ಶನಿವಾರ ಅಂತಹ ಸಮಸ್ಯೆ ಆಗಿಲ್ಲ. ಮುಂಜಾನೆ ಉಪಾಹಾರ ಸಿಕ್ಕಿಲ್ಲ, ಮಧ್ಯಾಹ್ನ ಊಟ ನೀಡಿದ್ದಾರೆ. ಆದರೆ ಉಳಿದಂತೆ ಶೌಚಾಲಯ ಮತ್ತಿತರ ಸಮಸ್ಯೆ ಇದೆ. ವಿಪರೀತ ಚಳಿ, ಮಳೆ ಇದೆ. ಅಲ್ಲಲ್ಲಿ ಗುಡ್ಡ ಕುಸಿತ ಆಗುತ್ತಿದೆ ಎಂಬ ಮಾಹಿತಿ ಲಭಿಸುತ್ತಿದೆ. ಏನು ಮಾಡುವುದು ತಿಳಿಯುತ್ತಿಲ್ಲ. ಸಚಿವ ಎಚ್‌.ಕೆ. ಪಾಟೀಲ್‌, ಗದಗ ಎಸ್ಪಿ ಸೇರಿದಂತೆ ಹಲವರು ನಮ್ಮನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದಾರೆ. ನಮಗೂ ಸಾಕಷ್ಟುಧೈರ್ಯ ಇದೆ. ಆದರೆ ಹವಾಮಾನ ವೈಪರಿತ್ಯದಿಂದ ಮುಂದೇನು? ಎಂಬ ಆತಂಕ ಇದೆ. ಪರಿಸ್ಥಿತಿ ಇನ್ನೆರಡು ದಿನ ಮುಂದುವರಿದರೆ ಆಹಾರ ಸೇರಿದಂತೆ ಎಲ್ಲದಕ್ಕೂ ಪರದಾಡಬೇಕಾದ ಪರಿಸ್ಥಿತಿ ಬರಬಹುದು ಎಂದರು.

ರಾಹುಲ್‌ ಕೇಸಲ್ಲಿ ‘ಕೈ’ ಹೋರಾಟ ಕೋರ್ಟ್‌ ವಿರುದ್ಧವೇ: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಇಲ್ಲಿ ಭಾರೀ ಚಳಿ, ಮಳೆ ಇದೆ. ನಾವು ಸಾಕಷ್ಟುಸಿದ್ಧತೆ ಮಾಡಿಕೊಂಡು ಬಂದಿದ್ದರೂ ಮಹಿಳೆಯರು, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇದೊಂದು ಅನಿರೀಕ್ಷಿತ ಬೆಳವಣಿಗೆ ಆಗಿದ್ದರಿಂದ ಹೊಂದಿ ಕೊಳ್ಳಲು ಆಗುತ್ತಿಲ್ಲ. ಸದ್ಯ ಧೈರ್ಯವಾಗಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದೇವೆ, ಗದಗ ಸೇರಿದಂತೆ ಸಂಬಂಧಿಗಳು, ಆತ್ಮೀಯರು ಆತಂಕ ಪಡುವುದು ಬೇಡ ಎಂಬ ಸಮಾಧಾನದ ಮಾತು ಹೇಳಿದರು. ಗದಗ ಜಿಲ್ಲೆಯಿಂದ ಜು.4ರಂದು 23 ಜನರು ಬಂದಿದ್ದೇವೆ, ಅಮರನಾಥ ದರ್ಶನ ಪಡೆದು ಜು. 7ರಂದು ವಾಪಸ್‌ ಬರುವಾಗ ವಿಪರೀತ ಮಳೆಯಿಂದ ಗುಡ್ಡ ಕುಸಿದು, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸ್ವಲ್ಪ ಆತಂಕವಾಗಿದೆ. 23 ಜನರು ಬೇಸ್‌ ಕ್ಯಾಂಪ್‌ನಲ್ಲಿ ರಕ್ಷಣೆ ಪಡೆದಿದ್ದೇವೆ. ನಿನ್ನೆಯವರೆಗೆ ಏನೂ ಸಮಸ್ಯೆ ಇರಲಿಲ್ಲ ಎಂದರು.

click me!