Gold smuggling case: ವಕೀಲರ ಮುಂದೆ ರನ್ಯಾ ಕಣ್ಣೀರು, 5 ದಿನ ಒಂದೇ ಜೊತೆ ಬಟ್ಟೆ!

Published : Mar 08, 2025, 06:24 AM ISTUpdated : Mar 08, 2025, 06:31 AM IST
Gold smuggling case: ವಕೀಲರ ಮುಂದೆ ರನ್ಯಾ ಕಣ್ಣೀರು, 5 ದಿನ ಒಂದೇ ಜೊತೆ ಬಟ್ಟೆ!

ಸಾರಾಂಶ

ನಟಿ ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದು, ಇದರಿಂದ ₹4.83 ಕೋಟಿ ಸುಂಕ ನಷ್ಟವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ರನ್ಯಾ ದೇಹದ ವಿವಿಧ ಭಾಗಗಳಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು.

ಬೆಂಗಳೂರು (ಮಾ.8) : ದುಬೈನಿಂದ ನಟಿ ರನ್ಯಾ ರಾವ್‌ ಅವರ ಚಿನ್ನ ಕಳ್ಳ ಸಾಗಣೆಯಿಂದ ₹4.83 ಕೋಟಿ ಸುಂಕ ನಷ್ಟವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ.

ವಿದೇಶದಿಂದ ಚಿನ್ನ ಸಾಗಿಸುವಾಗ ಸುಂಕ ಪಾವತಿಸಬೇಕಿದೆ. ಆದರೆ ಈ ಸುಂಕ ತಪ್ಪಿಸುವ ದುರುದ್ದೇಶದಿಂದಲೇ ಕಳ್ಳ ಮಾರ್ಗದಲ್ಲಿ ರನ್ಯಾ ಚಿನ್ನ ಸಾಗಿಸಿದ್ದಾರೆ. ತನ್ನ ಹೊಟ್ಟೆ, ಕಾಲು ಹಾಗೂ ಸೊಂಟ ಸೇರಿ ದೇಹದ ವಿವಿಧ ಭಾಗಗಳಲ್ಲಿ ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿಕೊಂಡು ಅವರು ಚಿನ್ನ ಸಾಗಿಸಿದ್ದಾರೆ. ಅಲ್ಲದೆ ಆಕೆ ಧರಿಸಿದ್ದ ಜಾಕೆಟ್‌ನಲ್ಲೂ ಚಿನ್ನ ಪತ್ತೆಯಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿರುವುದಾಗಿ ತಿಳಿದು ಬಂದಿದೆ.

ಚಿನ್ನ ಸಾಗಣೆ ಹಿಂದೆ ಸಿಂಡಿಕೇಟ್ :

ದುಬೈನಿಂದ ಚಿನ್ನ ಸಾಗಣೆ ಕೃತ್ಯದ ಹಿಂದೆ ವ್ಯವಸ್ಥಿತವಾದ ಸಿಂಡಿಕೇಟ್‌ ಕೆಲಸ ಮಾಡುತ್ತಿದ್ದು, ಈ ಕೃತ್ಯದಲ್ಲಿ ರನ್ಯಾ ಪ್ರಮುಖ ಪಾತ್ರವಹಿಸಿದ್ದಾಳೆ. ಈ ಜಾಲದ ಹಿಂದಿರುವ ಸಿಂಡಿಕೇಟ್ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ. ಅಲ್ಲದೆ, ಅವರ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ಪರಿಶೀಲನೆಗೆ ರನ್ಯಾರವರ ವಿಚಾರಣೆ ಅಗತ್ಯವಾಗಿದೆ ಎಂದು ಮೂಲಗಳು ಹೇಳಿವೆ.

ವಕೀಲರ ಮುಂದೆ ರನ್ಯಾ ಕಣ್ಣೀರು:

‘ತಾನು ತಪ್ಪು ಮಾಡಿದ್ದೇನೆ. ನನಗೆ ಇಂಥ ಸಂಕಷ್ಟದ ಪರಿಸ್ಥಿತಿ ಎದುರಿಸಲಾಗುತ್ತಿಲ್ಲ. ಕಣ್ಮುಚ್ಚಿದರೆ ವಿಮಾನ ನಿಲ್ದಾಣದ ಘಟನೆಯೇ ನೆನಪಾಗುತ್ತಿದೆ. ನನಗೆ ಅರೆ ಕ್ಷಣವೂ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಯಾತನೆಯಿಂದ ನನ್ನನ್ನು ಪಾರು ಮಾಡಿ’ ಎಂದು ತಮ್ಮ ವಕೀಲರ ಬಳಿ ರನ್ಯಾ ಕಣ್ಣೀರಿಟ್ಟಿದ್ದಾರೆ.

ನ್ಯಾಯಾಲಯ ಮುಂದೆ ಹಾಜರುಪಡಿಸಿ ಕರೆದೊಯ್ಯುವ ವೇಳೆ ತಮ್ಮ ವಕೀಲರ ಭೇಟಿಗೆ ರನ್ಯಾಗೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಆ ವೇಳೆ ವಕೀಲರ ಮುಂದೆ ಕಂಬನಿಗರೆಯುತ್ತ ವಿನಂತಿಸಿಕೊಂಡ ಘಟನೆ ನಡೆದಿದೆ.

ತಾನು ಹೇಗೆ ಈ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಾನು ತಪ್ಪು ಮಾಡಿಬಿಟ್ಟಿದ್ದೇನೆ. ನನ್ನನ್ನು ಕಾಪಾಡಿ ಎಂದು ಅವರು ವಿನಂತಿಸಿದ್ದಾರೆ.

ಇದನ್ನೂ ಓದಿ: ಬಟ್ಟೆ ಬದಲಿಸದೇ ಸಿಕ್ಕಿಬಿದ್ದ 'ಚಿನ್ನದ ಕಳ್ಳಿ' ಕೊಟ್ಟೇ ಬಿಟ್ಟಳಾ ಕ್ಲೂ? ಸ್ಮಗ್ಲಿಂಗ್​ ಹಿಂದಿರೋ ಕುಳಗಳಿಗೆ ಢವಢವ

ಒಂದೇ ಜೊತೆ ಬಟ್ಟೆಯಲ್ಲಿ 5 ದಿನಗಳು:

ಕಳ್ಳ ದಾರಿಯಲ್ಲಿ ಚಿನ್ನ ಸಾಗಿಸುವಾಗ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದ ದಿನದಿಂದಲೂ ರನ್ಯಾ ಒಂದೇ ಜೊತೆ ಬಟ್ಟೆಯಲ್ಲೇ ಐದು ದಿನಗಳು ಕಳೆದಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದ ವಿಚಾರಣೆ ಮುಗಿಸಿ ಮರಳುವಾಗ ಅ‍ವರಿಗೆ ಸೋದರ ರಿಷಬ್ ಸ್ನೇಹಿತರು ಬಟ್ಟೆಯ ಬ್ಯಾಗ್ ಕೊಟ್ಟು ಮರಳಿದ್ದಾರೆ. ಹಾಗಾಗಿ ಕೋರ್ಟ್‌ಗೆ ಬಂದಾಗ ತಾವು ದುಬೈ ಪ್ರಯಾಣದಿಂದ ಮರಳುವಾಗ ಧರಿಸಿದ್ದ ಬಟ್ಟೆಯಲ್ಲೇ ರನ್ಯಾ ಕಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಡುಪಿ ಕೃಷ್ಣನಿಗೆ 'ಪಾರ್ಥಸಾರಥಿ' ಸುವರ್ಣ ರಥ ಸಮರ್ಪಣೆ; ಮಳೆಗಾಲದಲ್ಲೂ ನಡೆಯಲಿದೆ ರಥೋತ್ಸವ!
ಹಂಪಿ: ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದ ಫ್ರಾನ್ಸ್ ಪ್ರಜೆ; ಎರಡು ದಿನಗಳ ಕಾಲ ನರಳಾಡಿದ್ದ ಪ್ರವಾಸಿಗನ ರಕ್ಷಣೆ!