ವಿದ್ಯುತ್ ಟ್ರಾನ್ಸ್ ಫಾಮ್೯ ಏರಿ ಕುಳಿತ ಆಸಾಮಿ; ಬೆಸ್ಕಾಂಗೆ ತಲೆನೋವಾದ ಹುಚ್ಚರು!

By Ravi Janekal  |  First Published Jul 5, 2024, 7:59 PM IST

ವಿದ್ಯುತ್ ಟ್ರಾನ್ಸ್‌ಫಾರ್ಮ್ ಏರಿ ವ್ಯಕ್ತಿಯೊಬ್ಬ ಹುಚ್ಚಾಟ ಮಾಡಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಾರ್ತುವಳ್ಳಿ-ನೆಲಗೊಂಡ ಹಳ್ಳಿಯಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಲಕ್ಕುವನಹಳ್ಳಿ ಗ್ರಾಮದ  ಬಸವರಾಜ್  ಎಂಬಾತನಿಂದ ಹುಚ್ಚಾಟ.


ತುಮಕೂರು (ಜು.5): ವಿದ್ಯುತ್ ಟ್ರಾನ್ಸ್‌ಫಾರ್ಮ್ ಏರಿ ವ್ಯಕ್ತಿಯೊಬ್ಬ ಹುಚ್ಚಾಟ ಮಾಡಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಾರ್ತುವಳ್ಳಿ-ನೆಲಗೊಂಡ ಹಳ್ಳಿಯಲ್ಲಿ ನಡೆದಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಲಕ್ಕುವನಹಳ್ಳಿ ಗ್ರಾಮದ  ಬಸವರಾಜ್  ಎಂಬಾತನಿಂದ ಹುಚ್ಚಾಟ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿದ ಬಸವರಾಜನ ಹುಚ್ಚಾಟ ಕಂಡು ಗ್ರಾಮಸ್ಥರು ಗಾಬರಿಯಾದರು. ಕೆಳಗಿಳಿಯುವಂತೆ ಹೇಳಿದರೂ ಇಳಿಯದೇ ಹುಚ್ಚಾಟ ಮುಂದುವರಿಸಿದ ಆಸಾಮಿ. ಬಳಿಕ ಸ್ಥಳೀಯರು ಬೆಸ್ಕಾಂ, ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಆಗ್ರೋ ಅಂಗಡಿ ಮಾಲೀಕನ‌ ಮಾತು ನಂಬಿ ಕೆಟ್ಟ ರೈತ! ನಕಲಿ ಕ್ರಿಮಿನಾಶಕ ಸಿಂಪಡಿಸಿ ಬೆಳೆ ಕಳೆದುಕೊಂಡ ಅನ್ನದಾತ! 

ಅನಂತರ ಸ್ಥಳಕ್ಕೆ ಬಂದ ಪೊಲೀಸರು. ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಕರೆಂಟ್ ಶಾಕ್ ತಗುಲಿಸಿಕೊಂಡಿದ್ದ ಬಸವರಾಜು. ತಕ್ಷಣ ಬೆಸ್ಕಾಂ ಸಿಬ್ಬಂದಿ ಆ ಮಾರ್ಗದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದರಿಂದ ತಪ್ಪಿದ ಅನಾಹುತ. ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆದ ಆಸಾಮಿ. ಟ್ರಾನ್ಸ್‌ಫಾರ್ಮರ್ ನಲ್ಲಿ ಸಿಲುಕಿ ನರಳಾಡುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಬೆಸ್ಕಾಂ ಸಿಬ್ಬಂದಿ. ಬಳಿಕ 108 ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಗಾಯಳುವನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಹೊನ್ನವಳ್ಳಿ ಪೊಲೀಸರು ಹಾಗೂ ಬೆಸ್ಕಾಂ ಇಲಾಖೆ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತವೊಂದು ತಪ್ಪಿದೆ.

click me!