
ಬಾಳೆಹೊನ್ನೂರು (ಜು.15) : ಆಂದ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಶುಕ್ರವಾರ ಉಡಾವಣೆ ಮಾಡಿದ ಚಂದ್ರಯಾನ 3ರ ತಂಡದಲ್ಲಿ ಬಾಳೆಹೊನ್ನೂರು ಸಮೀಪದ ತುಪ್ಪೂರು ಗ್ರಾಮದ ಯುವತಿ ಇರುವುದು ಹೆಮ್ಮೆ ಮೂಡಿಸಿದೆ.
ಬಾಳೆಹೊನ್ನೂರು ಪಟ್ಟಣದಲ್ಲಿ ಕಾಫಿ ಉದ್ಯಮ, ವ್ಯವಹಾರ ನಡೆಸುತ್ತಿರುವ ಕೇಶವಮೂರ್ತಿ, ಮಂಗಳ ದಂಪತಿ ಪುತ್ರಿ ಡಾ. ಕೆ.ನಂದಿನಿ(Dr K Nandini) ಚಂದ್ರಯಾನ 3 ತಂಡದಲ್ಲಿ ಇದ್ದು ಶುಕ್ರವಾರ ನಡೆದ ಯಶಸ್ವಿ ಉಡಾವಣೆಯಲ್ಲಿ ಈಕೆಯೂ ಪಾಲ್ಗೊಂಡಿರುವುದು ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಹರ್ಷ ಮೂಡಿದೆ.
News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್ 23!
ಡಾ.ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019ರ ಚಂದ್ರಯಾನ 2ರ ತಂಡದಲ್ಲೂ ಭಾಗವಹಿಸಿದ್ದು, ಸತತ ಎರಡನೇ ಬಾರಿಯೂ ಕಾರ್ಯನಿರ್ವಹಿಸಿ ಬಾಳೆಹೊನ್ನೂರಿಗೆ ಕೀರ್ತಿ ತಂದಿದ್ದಾರೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್ ನವೋದಯ ವಿದ್ಯಾಲಯ ದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್‌ನಲ್ಲಿ ಪೂರೈಸಿದ್ದಾರೆ. ಇದೇ ಸಂಸ್ಥೆಯಲ್ಲಿ 5 ವರ್ಷಗಳ ಪಿಎಚ್‌ಡಿ ಪೂರೈಸಿ, ನಂತರ ಬೆಂಗಳೂರು ಇಸ್ರೋದಲ್ಲಿ ಉದ್ಯೋಗದಲ್ಲಿದ್ದಾರೆ.
ಇಸ್ರೋ ರಾಕೆಟ್ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ
ನನ್ನ ಮಗಳು ಡಾ. ನಂದಿನಿ ಚಂದ್ರಯಾನ 3ರ ತಂಡದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ. ದೇಶಕ್ಕಾಗಿ ಕಾರ್ಯ ನಿರ್ವಹಿಸಿದ ಮಗಳ ಕಾರ್ಯವನ್ನು ಎಷ್ಟುಕೊಂಡಾಡಿದರೂ ಸಾಲದು. ಚಂದ್ರಯಾನ 2, 3ರ ತಂಡದಲ್ಲಿ ಮಗಳು ಇರುವುದು ಇಡೀ ಊರಿಗೆ ಹೆಮ್ಮೆಯ ವಿಷಯವಾಗಿದೆ. ಶುಕ್ರವಾರ ಅವಳ ಹುಟ್ಟುಹಬ್ಬ ಸಹ ಇದ್ದು, ಇದೇ ದಿನ ಚಂದ್ರಯಾನ 3ರ ಉಡಾವಣೆ ಯಶಸ್ವಿಯಾಗಿರುವುದು ಅವಳ ಜೀವಮಾನದಲ್ಲಿ ನೆನಪಿಡುವ ವಿಷಯ. ಇಸ್ರೋದವರು ಕೈಗೊಂಡ ಕಾರ್ಯ ಯಶಸ್ವಿಯಾಗಿ, ಭಾರತಕ್ಕೆ ವಿಶ್ವದಾದ್ಯಂತ ಕೀರ್ತಿ, ಮನ್ನಣೆ ದೊರೆಯಬೇಕು ಎಂಬುದು ನಮ್ಮ ಆಶಯ
- ಕೇಶವಮೂರ್ತಿ, ಡಾ.ನಂದಿನಿ ತಂದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ