ಜಿ-20 ರಾಷ್ಟ್ರಗಳ ಹಾಗೂ ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಮಳೆಯಲ್ಲೇ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು.
ಹೊಸಪೇಟೆ (ವಿಜಯನಗರ) (ಜು.15) ಜಿ-20 ರಾಷ್ಟ್ರಗಳ ಹಾಗೂ ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಮಳೆಯಲ್ಲೇ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು. ಹಂಪಿಯಲ್ಲಿ ಜಿ-20 ರಾಷ್ಟ್ರಗಳ ಶೆರ್ಪಾ ಸಭೆಯ ಎರಡನೇ ದಿನವಾದ ಶುಕ್ರವಾರ ಸಂಜೆ ದೇಶ-ವಿದೇಶಿ ಪ್ರತಿನಿಧಿಗಳು ಸ್ಮಾರಕಗಳ ವೀಕ್ಷಣೆಗೆ ಸಂಜೆ ತೆರಳುತ್ತಿದ್ದಾಗ ಮಳೆ ಆರಂಭವಾಯಿತು. ಮಳೆಯಲ್ಲೇ ಸ್ಮಾರಕಗಳನ್ನು ವೀಕ್ಷಿಸಿದ ಪ್ರತಿನಿಧಿಗಳು, ಹಂಪಿ ಸ್ಮಾರಕಗಳು ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ವೀಕ್ಷಿಸಬಹುದು ಎಂಬ ಸಂದೇಶ ನೀಡಿದರು.
ಯಾವ್ಯಾವ ಸ್ಮಾರಕಗಳ ವೀಕ್ಷಣೆ?:
undefined
ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ಕಮಲ ಮಹಲ್, ಆನೆಲಾಯ ಸ್ಮಾರಕಗಳನ್ನು ಮಳೆಯಲ್ಲೇ ಪ್ರತಿನಿಧಿಗಳು ವೀಕ್ಷಿಸಿದರು. ಕೆಲವು ಪ್ರತಿನಿಧಿಗಳು ಭಾರತೀಯ ಸಂಪ್ರದಾಯದಂತೆ ಕುರ್ತಾಗಳನ್ನು ಧರಿಸಿದ್ದರು. ಪ್ರತಿನಿಧಿಗಳಿಗೆ ಭಾರತೀಯ ಸಂಪ್ರದಾಯದಂತೆ ಸ್ವಾಗತ ಕೋರಲಾಯಿತು. ಮಹಾನವಮಿ ದಿಬ್ಬದ ಬಳಿ ರಾಜರ ಕಾಲದ ಸೈನಿಕರಂತೆ ಹಂಪಿ ಗೈಡ್‌ಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸ್ವಾಗತ ಕೋರಿದರು. ಮಳೆಯಲ್ಲೇ ದಿಬ್ಬ ಏರಿದ ಪ್ರತಿನಿಧಿಗಳು ಮಳೆಯಲ್ಲೇ ಛತ್ರಿಗಳನ್ನು ಹಿಡಿದು ಸ್ಮಾರಕ ವೀಕ್ಷಿಸಿದರು. ಮಹಾನವಮಿ ದಿಬ್ಬದ ಕಲ್ಲು, ಉಬ್ಬು ಶಿಲ್ಪಗಳನ್ನು ಕಂಡು ಸಂತಸಪಟ್ಟರು.
Hampi G20 summit: ಹಂಪಿ ಸಾಮ್ರಾಜ್ಯದ ಇತಿಹಾಸ ಮೆಲುಕು ಹಾಕಿದ ಜೋಶಿ
ಜಿ-20 ತಂಡದಿಂದ ಮೊರೇರೆ ಬೆಟ್ಟವೀಕ್ಷಣೆ
ಗಂಗಾವತಿ: ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಡಾ.ಎನ್ ಕೆ ಪಾಠಕ, ನಿರ್ದೇಶಕ ಡಾ.ಜುಲ್ಫೇಕರ್ ಅಲಿ, ದೆಹಲಿ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ಪ್ರವೀಣ್ ಸಿಂಗ್, ಧಾರವಾಡ ವೃತ್ತದ ಸಹಾಯಕ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಡಾ.ಎಚ್.ಆರ್. ದೇಸಾಯಿ ಗಂಗಾವತಿ ತಾಲೂಕಿನ ಬೃಹತ್ ಶಿಲಾಯುಗದ ನೆಲೆ ಹಿರೇಬೆಬೆಣಕಲ್ ಮೋರೇರ ಗುಡ್ಡ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಗುಡ್ಲಾನೂರ,ವೀರೇಶ ಅಂಗಡಿ,ಪಂಪಾಪತಿ ಸೇರಿದಂತೆ ಇತರರು ಇದ್ದರು.
ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ ಕಲೆ: ಜಿ.20 ಸಭೆಯಲ್ಲಿ ಪ್ರಮಾಪತ್ರ ಸ್ವೀಕಾರ