ಬೆಂಗಳೂರು(ಫೆ.07): ರಾಜ್ಯದ ಹೈಕೋರ್ಟ್(Karnataka High Court) ಸೇರಿದಂತೆ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಹಬ್ಬಗಳಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್(dr br ambedkar) ಅವರ ಭಾವಚಿತ್ರವನ್ನು ಇರಿಸಲು ತೀರ್ಮಾನಿಸಲಾಗಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ(rituraj avasthi) ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ಅಂಬೇಡ್ಕರ್ ಅವರ ಭಾವಚಿತ್ರ ಇಡಲು ನಿರ್ಣಯ ಕೈಗೊಳ್ಳಲಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ.
ಜ.26ರಂದು ಗಣರಾಜ್ಯೋತ್ಸವ(Republic Day), ಆ.15ರಂದು ಸ್ವಾತಂತ್ರ್ಯೋತ್ಸವ(independence day) ಹಾಗೂ ನ.26ರಂದು ಸಂವಿಧಾನ ದಿನದ ಅಂಗವಾಗಿ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳು ಹಾಗೂ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ನ್ಯಾಯಾಧೀಶರನ್ನು ದೇಶದಿಂದ ಹೊರ ಹಾಕಿ
ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ನ್ಯಾಯಾದೀಶ ಡಾ.ಬಿ.ಆರ್ ಅಂಬೇಡ್‌್ಕ ಭಾವಚಿತ್ರÜ್ತಕ್ಕೆ ಮಾಡಿದ ಅವಮಾನ ಖಂಡಿಸಿ ಶುಕ್ರವಾರ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ತಹಶೀಲ್ದಾರ್ ಸುರೇಶ ಚವಲರ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ನ್ಯಾಯಾದೀಶರು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಈ ಘಟನೆ ಖಂಡಿಸಿ ಶುಕ್ರವಾರ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್ ಸುರೇಶ ಚವಲರ ಅವರಿಗೆ ಮನವಿ ಸಲ್ಲಿಸಲಾಯಿತು.
Ambedkar Photo Controversy: ಜಡ್ಜ್ ವಿರುದ್ಧ ಹೈಕೋರ್ಟ್‌ಗೆ ದೂರು
ಮುಖಂಡರಾದ ನ್ಯಾಯವಾದಿ ಮಲ್ಲು ಬನಸೋಡೆ, ಬಸು ಸಾಹುಕಾರ ಬಿರಾದಾರ, ಪ್ರಭು ಕೋಳಿ ಮಾತನಾಡಿದರು.ಇದಕ್ಕೂ ಮುಂಚಿತವಾಗಿ ಪ್ರತಿಭಟನಾಕಾರರು ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡು ಅಲ್ಲಿಂದ ಪಾದಯಾತ್ರೆ ಪ್ರಾರಂಭಿಸಿ ಬಸವೇಶ್ವರ ವೃತ್ತದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ ಅಂಬೇಡ್‌್ಕರ ವೃತ್ತಕ್ಕೆ ತೆರಳಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭನಟನೆಯಲ್ಲಿ ಪಪಂ ಸದಸ್ಯ ಜಟ್ಟೆಪ್ಪ ಬನಸೋಡೆ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆರ್.ಡಿ.ಹಕ್ಕೆ, ರಾಜೂ ಸಿಂಗೆ, ಪ್ರಭು ಕೋಳಿ, ಮಹಾದೇವ ಹಿರೆಕೂರಬರ, ರಾಮ ಝಡ್ಪೇಕರ್, ಬಾಬು ಕೊಂಕಣಿ, ಅಶ್ವಿನಿ ತಳವಾರ, ಸತೀಶ ಉತಗಿ, ಶಬ್ಬರ ನದಾಫ, ದಾವಲ್ ಬನಸೋಡೆ, ಜಾಕಿರ ಮನಿಯಾರ, ಅಜಿತ ಸಿಂN, ಯಲ್ಲಪ್ಪ ಹಾದಿಮನಿ, ಸಾಯಪ್ಪ ಬನಸೋಡೆ, ಅಬ್ದುಲ ನದಾಫ, ಭೀಮ ಗಾಡಿಒಡ್ಡರ, ಅರ್ಜುನ ಖುರಾಡೆ, ಪರಶುರಾಮ ಸಿಂಗೆ, ನಾರಾಯಣ ವಾಘ್ಮೋರೆ, ನಿಶಾಂತ ಬನಸೋಡೆ, ಪರಮೇಶ್ವರ ಶಿಂಗೆ, ರುದ್ರೇಶ್ ಬನಸೋಡೆ, ಕಲ್ಮೇಶ ವಾಘ್ಮೋರೆ, ಚಂದಪ್ಪ ಬಂಗಾರಥಳ. ಚಿದಾನಂದ ಬನಸೋಡೆ, ಶಶಿ ಸಾತಲಗಾಂವ, ಕೇಶವ ಬನಸೋಡೆ ಸೇರಿದಂತೆ ಸಮುದಾಯದ ಹಾಗೂ ವಿವಿಧ ಸಂಘಟನೆಗಳ ಮುಂಖಡರು ಇದ್ದರು.
ಗಾಂಧೀಜಿ, ಬಸವಣ್ಣ, ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಸೂಚನೆ
ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯ ಎಲ್ಲ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮಾ ಗಾಂಧೀಜಿ, ಬಸವಣ್ಣನವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿ ಆದೇಶಿಸಿದ್ದಾರೆ.