ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮೌಲ್ವಿ ತನ್ವೀರ್ ಪೀರಾ ಅವರ ಸೋದರ ಮಾವನೊಂದಿಗೆ ವ್ಯವಹಾರಿಕವಾಗಿ ಸಂಬಂಧ ಇಟ್ಟಿಕೊಂಡಿರುವುದನ್ನು ಧಾರವಾಡ ಅಂಜುಮನ್ ಇಸ್ಲಾಂನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ.
ಧಾರವಾಡ (ಡಿ.12) : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮೌಲ್ವಿ ತನ್ವೀರ್ ಪೀರಾ ಅವರ ಸೋದರ ಮಾವನೊಂದಿಗೆ ವ್ಯವಹಾರಿಕವಾಗಿ ಸಂಬಂಧ ಇಟ್ಟಿಕೊಂಡಿರುವುದನ್ನು ಧಾರವಾಡ ಅಂಜುಮನ್ ಇಸ್ಲಾಂನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೌಲ್ವಿ ಪೀರಾ ಅವರೊಂದಿಗೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ. ಈ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯತ್ನಾಳ ಟ್ವೀಟ್ ಮಾಡಿದ್ದಾರೆ. ಆದರೆ, ವಿಜಯಪುರ ಪಟ್ಟಣದ ವಾರ್ಡ್ ನಂಬರ್ 3ರ ಸಿಟಿಎಸ್ ನಂ. 1644/3ರಲ್ಲಿ 594 ಚದರ ಸ್ಕ್ವೇರ್ ಯಾರ್ಡ್ ಜಾಗದಲ್ಲಿ ಹೋಟೆಲ್ ಇದೆ. ಎಂ.ಎಂ.ಪೀರಜಾದೆ ಹಾಗೂ ಶಾಸಕ ಯತ್ನಾಳ ಇವರಿಬ್ಬರ ಹೆಸರಿನಲ್ಲಿ ಈ ಆಸ್ತಿ ಇದೆ. ಪೀರಜಾದೆ ಅವರು ಮೌಲ್ವಿ ಪೀರಾ ಅವರ ತಾಯಿಯ ಸಹೋದರ. ಇಬ್ಬರೂ ಒಪ್ಪಂದ ಮಾಡಿಕೊಂಡು ಹೋಟೆಲ್ ವ್ಯವಹಾರ ಮಾಡುತ್ತಿದ್ದಾರೆ ಎಂದರು.
ಮೌಲ್ವಿ ಹಾಶ್ಮಿ ಜತೆ ನನಗೆ ಬಿಸಿನೆಸ್ ಇಲ್ಲ: ಶಾಸಕ ಬಸನಗೌಡ ಯತ್ನಾಳ್
ಯತ್ನಾಳ ಅವರು ಮೌಲ್ವಿ ತನ್ವೀರ ಪೀರಾ ಅವರ ಕುಟುಂಬದ ಜೊತೆಗೆ ವ್ಯವಹಾರಿಕ ಸಂಬಂಧ ಇಟ್ಟುಕೊಂಡು, ಭಯೋತ್ಪಾದಕ ಸಂಘಟನೆಗಳ ಜೊತೆಗೆ ಮೌಲ್ವಿ ಗುರುತಿಸಿಕೊಂಡಿದ್ದಾರೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಸುಖಾಸುಮ್ಮನೆ ಅಧಿವೇಶನ ಹಾಳು ಮಾಡಲು ಯತ್ನಾಳ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಯತ್ನಾಳ ಅಸಹಾಯಕರಾಗಿದ್ದು, ಅಸ್ತಿತ್ವ ತೋರಿಸಲು ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
'ನಾವು ಲಿಂಗಾಯತರು ಮಾಂಸ ತಿನ್ನಲ್ಲ' : ಸದನದಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆ