ಮೋದಿ ಏಕೆ ರೈತರ ಸಾಲ ಮನ್ನಾ ಮಾಡಿಲ್ಲ ..?

By Web DeskFirst Published Feb 11, 2019, 10:26 AM IST
Highlights

ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ. ಹುಬ್ಬಳ್ಳಿಗೆ ಆಗಮಿಸಿದ್ದ ಮೋದಿ ರಫೇಲ್ ಡೀಲ್ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಮೋದಿ ಏಕೆ ರೈತರ ಸಾಲ ಮನ್ನಾ ಮಾಡಿಲ್ಲ..? ರೈತರ ಸಾಲಮನ್ನಾ ಮಾಡುವಂತೆ ಎರಡು ಬಾರಿ ನಿಯೋಗ ಹೋಗಿದ್ದೆ. ಆದರೂ ಅವರು ಇದುವರೆಗೆ ರೈತರ ಸಾಲಮನ್ನಾ ಮಾಡಿಲ್ಲ. ನಾವು ಈ ವರ್ಷದ ಬಜೆಟ್‌ನಲ್ಲಿ ಸಾಲಮನ್ನಾಗಾಗಿ ಹಣ ಮೀಸಲಿಟ್ಟಿದ್ದೇವೆ. ಆದರೆ ಮೋದಿಗೆ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನು ತಿಳಿದಿಲ್ಲ ಎಂದರು. 

ಅತೃಪ್ತರ ಬಗ್ಗೆ  ಪ್ರಸ್ತಾಪ : ರಾಜ್ಯ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದ ನಾಲ್ವರು ಅತೃಪ್ತ ಶಾಸಕರ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅಧಿವೇಶನಕ್ಕೆ ಬರದ ನಾಲ್ವರನ್ನು ಡಿಸ್ ಕ್ವಾಲಿಫೈ ಮಾಡಲು ಸ್ಪೀಕರ್ ಗೆ ಮನವಿ ಮಾಡುತ್ತೇವೆ ಎಂದರು. 

ಬಿಎಸ್ ವೈ ವಿರುದ್ಧ ವಾಗ್ದಾಳಿ : ಇತ್ತ ಆಪರೇಷನ್ ಕಮಲ ಮಾಡಲು ಬಿಎಸ್ ವೈ ಯತ್ನಿಸಿದ್ದಾರೆ ಎನ್ನಲಾದ ಆಡಿಯೋ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಅವರಿಗೆ ಸಾರ್ವಜನಿಕ ಜೀವನದಲ್ಲಿ ಇರಲು ನೈತಿಕತೆ ಇಲ್ಲ ಎಂದರು. 

ತಮ್ಮ ಧ್ವನಿಯನ್ನು ಮಿಮಿಕ್ರಿ ಮಾಡಲಾಗಿದೆ, ನನ್ನ ಧ್ವನಿ ಸಾಬೀತುಪಡಿಸಿದರೆ ರಾಜಿನಾಮೆ ನೀಡುತ್ತೇನೆ ಎಂದಿದ್ದರು. ಆದರೆ ಬಳಿಕ ಈ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಶರಣಗೌಡಗೆ 10 ಕೋಟಿ ಕೊಡುತ್ತೇನೆ ಮಂತ್ರಿ ಮಾಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ, ಇದು ಕದುರೆ ವ್ಯಾಪಾರವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ಓರ್ವ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು  ಶಾಸಕರುಗಳನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಇಂತವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಎಂದು ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

click me!