ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ (ಡಿ.20): ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆ ಸಂಬಂಧ ಬೆಳಗಾವಿಯಲ್ಲಿಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರತಿಕ್ರಿಯಿಸಿದ್ದು, ಸದನದಲ್ಲಿ ಅಂಬೇಡ್ಕರ್ ಬಗ್ಗೆ ಚರ್ಚೆ ನಡೆಯುವಾಗ ಸಿಟಿ ರವಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಅಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್, ಮೋದಿ ಕೊಲೆಗಡುಕ ಎಂದಿದ್ದಾರೆ. ಬಳಿಕ ಸಿಟಿ ರವಿ ನೀನು ಪ್ರಾಸ್ಟಿಟ್ಯೂಟ್ ಅಂತ ಕರೆದಿದಾರೆ. ಮಹಿಳಾ ಮಂತ್ರಿ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಸಿಟಿ ರವಿ ಅವರನ್ನ ಬಂಧಿಸಲಾಗಿದೆ ಎಂದು ಘಟನೆ ಕುರಿತು ವಿವರಿಸಿದರು.
undefined
ಸಿಟಿ ರವಿ ಮೇಲೆ ಬೇಲ್ ಸಿಗದಂಥ ಕೇಸ್, ರಾತ್ರಿಯಿಡೀ ಸುತ್ತಾಡಿಸಿ ಅಂಕಲಗಿ ಠಾಣೆಗೆ ಕರೆತಂದ ಪೊಲೀಸರು!
ಹೆಣ್ಣು ಮಗಳ ಮೇಲೆ ಪ್ರಾಸ್ಟಿಟ್ಯೂಟ್ ಅಂತ 12 ಬಾರಿ ಹೇಳಿರೋ ದಾಖಲೆ ಇದೆ. ನಿಮ್ಮ ಬಳಿ ದಾಖಲೆ ಇಲ್ಲಂದ್ರೆ ನಾನೇ ಕೊಡ್ತೇನೆ. ಅಂಬೇಡ್ಕರ್ ವಿಚಾರದಲ್ಲಿ ಹೋರಾಟ ಮಾಡ್ತಾ ಇದ್ರು. ಮಹಿಳೆಗೆ ಆ ರೀತಿ ನಿಂದಿಸುವುದು ಚಿಕ್ಕಮಗಳೂರು ಸಂಸ್ಕೃತಿನಾ? ಭಾರತದ ಸಂಸ್ಕೃತಿನಾ? ಬಿಜೆಪಿ ಸಂಸ್ಕೃತಿನಾ? ಎಂದು ಪ್ರಶ್ನಿಸಿದರು. ಇದೇ ವೇಳೆ ಸಭಾಪತಿಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ, ಸಭಾಪತಿಗಳ ವಿಚಾರವೂ ಸರಿ ಇಲ್ಲ. ಅವರು ಚರ್ಚೆಗೆ ಅವಕಾಶ ಕೊಡಬೇಕಿತ್ತು. ಏಕಾಏಕಿ ಅವರ ಹತ್ರ ಹೇಳಿಕೆ ತಗೊಂಡಿದಾರೆ. ಅವರು ಯಾವುದೇ ಪಕ್ಚದವರಲ್ಲ. ಸಭಾಪತಿ ಅಂದರೆ
ನಾನ್ ಪೊಲಿಟಿಕಲ್ ಮೆಂಬರ್ ಆದರೆ ಅವರ ನಡೆ ಸಭಾಪತಿಯಂತೆ ಕಾಣಲಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಸಿಟಿ ರವಿ ಖಾನಪುರ ಠಾಣೆಯಿಂದ ಬೆಂಗಳೂರಿಗೆ ಶಿಫ್ಟ್, ಪೊಲೀಸರ ವಿರುದ್ದ ಬಿಜೆಪಿ ಆಕ್ರೋಶ!
ಸಿಟಿ ರವಿಗೆ ಪೊಲೀಸರು ಏನು ಮಾಡಿದ್ದಾರೋ ನನಗೆ ಗೊತ್ತಿಲ್ಲ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮೀಟಿಂಗ್ ಮಾಡಿದ್ದಾರೆ. ಪೊಲೀಸರ ನಡತೆನೂ ಸರಿಯಿಲ್ಲ. ನಾನು ಯಾವುದರಲ್ಲೂ ಇಂಟರ್ ಫಿಯರ್ ಆಗಿಲ್ಲ. ಯಾರೋ ಒಬ್ರು ಇಬ್ರೋ ಮೀಟ್ ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ಬಿಜೆಪಿ ಮೀಟಿಂಗ್ ಮಾಡಿದ್ದಾರೆ. ಪುಣ್ಯ ಇದು ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಇರೋದು ಸಹಜವಾಗೇ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದಾರೆ. ಸಿಟಿ ರವಿಯ ಕೊಳಕು ಬಾಯಿ ಹೊಸದೇನಲ್ಲ. ಹಿಂದೆ ಸಿದ್ದರಾಮಯ್ಯಗೆ ಸಿದ್ದರಾಮುಲ್ಲ ಖಾನ್ ಅಂತ ಪದ ಬಳಸಿದ್ದಾರೆ. ಇವರೊಬ್ಬರದೇ ಹರಕಲು ಬಾಯಿ. ದಾಖಲೆ ನಿಮ್ಮ ಬಳಿ ಇದೆ ಇಲ್ವ? ನಿಮ್ಮ ಹತ್ರ ಇಲ್ಲಂದ್ರೆ ನಾನು ಬಿಡುಗಡೆ ಮಾಡ್ತೀನಿ ಎಂದರು.