ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಸಿಟಿ ರವಿ ಬಂಧನವಾಗಿದ್ದು, ರಾತ್ರಿಯಿಡೀ ಪೊಲೀಸ್ ಜೀಪ್‌ನಲ್ಲಿ ಸುತ್ತಾಡಿಸಲಾಗಿದೆ. ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ಕೇಸ್‌ಗಳನ್ನು ಹಾಕಲಾಗಿದ್ದು, ಬೆಳಗಾವಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಬೆಳಗಾವಿ (ಡಿ.20): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪದಲ್ಲಿ ಬಂಧನದಲ್ಲಿರುವ ಸಿಟಿ ರವಿ ಮೇಲೆ ರಾಜ್ಯ ಸರ್ಕಾರ ಬೇಲ್ ಸಿಗದಂಥ ಕೆಲವು ಕೇಸ್‌ಗಳನ್ನು ಹಾಕಿದೆ. ಗುರುವಾರ ರಾತ್ರಿ ಅವರನ್ನು ಖಾನಾಪುರದಿಂದ ಬೆಂಗಳೂರು ಪೊಲೀಸ್ ಠಾಣೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿತ್ತಾದರೂ, ಅವರನ್ನು ಪೊಲೀಸ್ ಜೀಪ್‌ನಲ್ಲಿ ರಾತ್ರಿಯೀಡಿ ಸುತ್ತಾಡಿಸಿ ಈಗ ಅಂಕಲಗಿ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಶುಕ್ರವಾರ ಗೋಕಾಕ್ ತಾಲೂಕಿನ ಅಂಕಲಗಿ ಪೋಲಿಸ್ ಠಾಣೆಯಲ್ಲಿ ಸಿಟಿ ರವಿ ಅವರನ್ನು ಇರಿಸಲಾಗಿದೆ. ಸಿಟಿ ರವಿ ಅವರನ್ನು ರಾತ್ರಿಯಿಡೀ ತಮ್ಮ ಜೊತೆಗೆ ಕರೆದುಕೊಂಡು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಓಡಾಡುತ್ತಿದ್ದರು. 10 ಗಂಟೆ ನಂತರ ಬೆಳಗಾವಿಗೆ ಕರೆತಂದು ಕೋರ್ಟ್‌ಗೆ ಪೋಲಿಸರು ಹಾಜರುಪಡಿಸಲಿದ್ದಾರೆ. ಸಿಟಿ ರವಿ ಅವರನ್ನು ಬೆಳಗಾವಿ 5ನೇ ಹೆಚ್ಚುವರಿ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ. ಈ ನಡುವೆ ಕೋರ್ಟ್ ಮುಂದೆ ಸಿಟಿ ರವಿ ಪರ ವಕೀಲರು ಜಮಾಯಿಸಿದ್ದಾರೆ.
ಸಿಟಿ ರವಿ ಮೇಲೆ ಯಾವೆಲ್ಲಾ ಕೇಸ್: ಸಿ.ಟಿ ರವಿ ವಿರುದ್ಧ ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ಕೇಸ್ ಹಾಕಲಾಗಿದೆ. ಅವರನ್ನು ಮೊದಲ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇಲೆ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸಿ.ಟಿ ರವಿ ವಿರುದ್ಧ ನಾನ್ ಬೇಲಬಲ್ ಕೇಸ್ ಅನ್ನು ಪೊಲಸರು ಹಾಕಿದ್ದಾರೆ. ಬಿಎನ್ಎಸ್ ಸೆಕ್ಷನ್ 75, 79ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂಜೆ 4 ಗಂಟೆಗೆ FIR, 7 ಗಂಟೆಗೆ ಸಿ.ಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ನಡೆಯುವ ವೇಳೆ ಸುವರ್ಣ ಸೌಧದ ಮೆಟ್ಟಿಲುಗಳ ಮೇಲೆ ಸಿಟಿ ರವಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳದಿಂದಲೇ ಸಿ.ಟಿ ರವಿ ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ. ಬಿಜೆಪಿ ನಾಯಕರ ವಿರೋಧದ ಮಧ್ಯೆಯೇ ಸಿ.ಟಿ ರವಿ ಬಂಧನವಾಗಿತ್ತು.
undefined
ಸಿಟಿ ರವಿ ಖಾನಪುರ ಠಾಣೆಯಿಂದ ಬೆಂಗಳೂರಿಗೆ ಶಿಫ್ಟ್, ಪೊಲೀಸರ ವಿರುದ್ದ ಬಿಜೆಪಿ ಆಕ್ರೋಶ!
ಬಿ.ಎನ್.ಎಸ್ ಸೆಕ್ಷನ್ 75 ಲೈಂಗಿಕ ಕಿರುಕುಳದ ಕೇಸ್ ಆಗಿದ್ದು, ಮಹಿಳೆಯ ವಿರುದ್ಧ ಅಶ್ಲೀಲ ಪದ ಬಳಕೆಗೆ 3 ವರ್ಷದವರೆಗೆ ಶಿಕ್ಷೆ, ದಂಡ ವಿಧಿಸಬಹುದಾಗಿದೆ. ಬಿ.ಎನ್.ಎಸ್ ಸೆಕ್ಷನ್ 79 ಮಹಿಳೆಯ ಘನತೆಗೆ ಧಕ್ಕೆಯ ಕೇಸ್ ಆಗಿದ್ದು, ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ನಿಂದನೆ ಮಾಡಿದ್ದರೆ, 3 ವರ್ಷದವರೆಗೆ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.
ಸಿಟಿ ರವಿ ಬಂಧನದಿಂದ ಭುಗಿಲೆದ್ದ ಆಕ್ರೋಶ, ನಾಳೆ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ!