ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಂಡ್ಯದ ಹಿರಿಮೆ ಹೆಚ್ಚಿಸಿದ ಸಾಹಿತ್ಯ ರತ್ನಗಳು!

By Kannadaprabha News  |  First Published Dec 20, 2024, 9:08 AM IST

ಕನ್ನಡ ನೆಲದಲ್ಲಿ ಹುಟ್ಟಿ ಸಾಹಿತ್ಯ ಲೋಕವನ್ನು ಬೆಳಗಿದ ಆ‌ರ್.ನರಸಿಂಹಾಚಾರ್, ಬಿ.ಎಂ.ಶ್ರೀ, ಪು.ತಿ.ನರಸಿಂಹಾಚಾರ್, ಎ.ಎನ್.ಮೂರ್ತಿರಾವ್, ಕೆ.ಎಸ್‌.ನರಸಿಂಹಸ್ವಾಮಿ, ಡಾ.ಹೆಚ್.ಎಲ್.ನಾಗೇಗೌಡ, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆಗೆ ಗರಿ ಮೂಡಿಸಿದ್ದಾರೆ.
 


ಮಂಡ್ಯ(ಡಿ.20): ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಂಡ್ಯದ 7 ಸಾಹಿತಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾದಾಗಿನಿಂದ ಇಂದಿನವರೆಗೆ ಜಿಲ್ಲೆಯ ಏಳು ಮಂದಿ ಸಾಹಿತ್ಯ ರತ್ನಗಳು ಸರ್ವಾಧ್ಯಕ್ಷರ ಪೀಠವನ್ನು ಅಲಂಕರಿಸಿ ಮಂಡ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಈ ನೆಲದಲ್ಲಿ ಹುಟ್ಟಿ ಸಾಹಿತ್ಯ ಲೋಕವನ್ನು ಬೆಳಗಿದ ಆ‌ರ್.ನರಸಿಂಹಾಚಾರ್, ಬಿ.ಎಂ.ಶ್ರೀ, ಪು.ತಿ.ನರಸಿಂಹಾಚಾರ್, ಎ.ಎನ್.ಮೂರ್ತಿರಾವ್, ಕೆ.ಎಸ್‌.ನರಸಿಂಹಸ್ವಾಮಿ, ಡಾ.ಹೆಚ್.ಎಲ್.ನಾಗೇಗೌಡ, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆಗೆ ಗರಿ ಮೂಡಿಸಿದ್ದಾರೆ.

ಆರ್.ನರಸಿಂಹಾಚಾರ್ 

Tap to resize

Latest Videos

undefined

1915ರಲ್ಲಿ ಆರಂಭವಾದ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಮೂರು ವರ್ಷ ಎಚ್.ವಿ ನಂಜುಂಡಯ್ಯ ಅವರೇ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿದ್ದರು. ನಾಲ್ಕನೇ ವರ್ಷ 1918ರಲ್ಲಿ ಧಾರವಾಡದಲ್ಲಿ ನಡೆದ ನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ನಾನಕ್ಕೆ ಆರ್.ನರಸಿಂಹಾಚಾರ್ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀರಂಗಪಟ್ಟಣ ಸಮೀಪದ ಮಂಡ್ಯ ಕೊಪ್ಪಲು ಗ್ರಾಮದವರಾದ ರಾವ್ ಬಹದ್ದೂರ್ ಆರ್ ನರಸಿಂಹಾಚಾರ್ ಕನ್ನಡ ಸಾಹಿತ್ಯ ಲೋಕ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಆಪ್ರತಿಮ ಕೊಡುಗೆ ನೀಡಿದ್ದಾರೆ. ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು, ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದ ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಆಪೂರ್ವವಾದುದು.

ಮಂಡ್ಯದಲ್ಲಿ ನಡೆದ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು!

ಬಿ.ಎಂ.ಶ್ರೀಕಂಠಯ್ಯ 

1928ರಲ್ಲಿ ಗುಲ್ಬರ್ಗದಲ್ಲಿ ನಡೆದ ಹದಿನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿ.ಎಂ.ಶ್ರೀಕಂಠಯ್ಯ ಆಯ್ಕೆಯಾದರು. ನಾಗಮಂಗಲ ತಾಲೂಕಿನ ಬೆಳ್ಳೂರಿನವರಾದ ಬಿ.ಎಂ.ಶ್ರೀಕಂಠಯ್ಯನವರು 20ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದವರು. ನವೋದಯದ ಪ್ರವರ್ತಕ, ಕವಿ ಮತ್ತು ಸಾಹಿತಿ, ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗಿಷ್ ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡಕ್ಕೆ ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿದಾಗಿಟ್ಟ ಮಹನೀಯ ಸಾಹಿತಿ ಬಿ.ಎಂ.ಶ್ರೀ.

ಪು.ತಿ.ನರಸಿಂಹಾಚಾರ್ 

1981ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಐವತ್ತಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪು.ತಿ.ನರಸಿಂಹಾಚಾರ್ ಅಧ್ಯಕ್ಷರಾಗಿದ್ದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯವರಾದ ಪು.ತಿ.ನ ಅವರು ಕನ್ನಡ ಸಾಹಿತ್ಯದ ನವೋದಯ ಶೈಲಿಯ ವೇಗವರ್ಧಕಗಳಲ್ಲಿ ಒಬ್ಬರು. ಅವರ ಮೊದಲ ಕವನ ಸಂಕಲನ 'ಹಣತೆ'ಯಲ್ಲಿ ಅವರು ಸರಳವಾದ ಭಾಷೆ ಮತ್ತು ಶೈಲಿಯನ್ನು ಬಳಸಿಕೊಂಡು ಜೀವನದ ಮಹತ್ವದ ಕ್ಷಣಗಳ ಆಳವಾದ ಒಳನೋಟಗಳನ್ನು ತಿಳಿಸಿದರೆ, ಅವರ ಅನೇಕ ಬರಹಗಳು ಆಧ್ಯಾತ್ಮಿಕತೆಯ ಗಡಿಯಲ್ಲಿರುವ ಪ್ರಕೃತಿಯ ಸೌಂದರ್ಯ ಮತ್ತು ಗಾಂಭೀರ್ಯವನ್ನು ವಿವರಿಸುತ್ತವೆ. ಅವರ ಎರಡು ಪ್ರಸಿದ್ಧ ಕೃತಿಗಳೆಂದರೆ 'ಅಹಲೈ' ಕವನಸಂಕಲನ, 'ಗೋಕುಲ ನಿರ್ಗಮನ' ಗೀತನಾಟಕ.

ಎ.ಎನ್.ಮೂರ್ತಿರಾವ್ 

ಇನ್ನು 1984ರಲ್ಲಿ ಕೈವಾರದಲ್ಲಿ ನಡೆದ ಐವತ್ತನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠವನ್ನು ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳಿನ ಎ.ಎನ್.ಮೂರ್ತಿರಾವ್ ಅಲಂಕರಿಸಿದ್ದರು. 'ದೇವರು' ಕೃತಿಯಲ್ಲಿ ತಮ್ಮ ವಿಭಿನ್ನ ವಿಚಾರಧಾರಗಳ ಮೂರ್ತಿರಾವ್ ಪ್ರಸಿದ್ದರಾಗಿದ್ದರು. ಈ ಕೃತಿಗೆ ಕನ್ನಡ ರಾಜ್ಯೋತ್ಸವ, ನಾಡೋಣಜ, ಪಂಪ ಪ್ರಶಸ್ತಿಗಳು ಲಭಿಸಿದೆ. ಚಿತ್ರಗಳು ಮತ್ತು ಪತ್ರಗಳು ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. - ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಸಂಸ್ಥೆಯನ್ನು ಸಂಯೋಜಿಸಲು ಸಹಾಯ ಮಾಡಿದರು. ಪರಿಷತ್ತಿನ ಹಲವಾರು ಹೊಸ ಪುಸ್ತಕಗಳ ಪ್ರಕಟಣೆಯನ್ನೂ ಅವರು ನೋಡಿಕೊಂಡರು. ಅವರು ಸಮೃದ್ಧ ಬರಹಗಾರ ಮತ್ತು ವಿಮರ್ಶಕರಾಗಿದ್ದರು ಮತ್ತು ಅವರ ಸಾಹಿತ್ಯ ಕೃಷಿ ಕನ್ನಡ ಸಾಹಿತ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಿತು.

ಈ ಬಾರಿಯ ಸಮ್ಮೇಳನಕ್ಕೆ ಐತಿಹಾಸಿಕ ಮಹತ್ವವಿದೆ: ಡಾ ಮಹೇಶ್‌ ಜೋಶಿ

ಕೆ.ಎಸ್‌.ನರಸಿಂಹಸ್ವಾಮಿ 

1990ರಲ್ಲಿ ಮೈಸೂರಿನಲ್ಲಿ ನಡೆದ ಅರವತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮಂಡ್ಯ ಜಿಲ್ಲೆ ಕಿಕ್ಕೇರಿ ಗ್ರಾಮದವರಾದ ಕೆ.ಎಸ್.ನರಸಿಂಹಸ್ವಾಮಿ ಅವರ ಮೊದಲ ಕವನಸಂಕಲನ 'ಮೈಸೂರು ಮಲ್ಲಿಗೆ'. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂತಹ ಮರು ಮುದ್ರಣದ ಭಾಗ್ಯ, ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಕನ್ನಡ ಕಾವ್ಯಜಗತ್ತಿನಲ್ಲಿ ಸಾಕಷ್ಟು ವಿಭಿನ್ನ ವಸ್ತು ವಿಷಯಗಳನ್ನಿಟ್ಟು ಕಾವ್ಯ ರಚನೆ ಮಾಡಿದರೂ ಕೆಎಸ್‌ ಅವರನ್ನು ಜನರು ಇಂದಿಗೂ ಗುರುತಿಸುವುದು 'ಪ್ರೇಮಕವಿ'ಯಾಗಿ,

ಡಾ.ಹೆಚ್.ಎಲ್.ನಾಗೇಗೌಡ 

1995ರಲ್ಲಿ ಮುಧೋಳದಲ್ಲಿ ನಡೆದ ಅರವತ್ತನಾಲ್ಕನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಜಾನಪದ ತಜ್ಞ ಡಾ.ಹೆಚ್.ಎಲ್.ನಾಗೇಗೌಡ ಅಲಂಕರಿಸಿದರು. ಇವರು ನಾಗಮಂಗಲ ತಾಲೂಕಿನ ಹೆರಗನಹಳ್ಳಿ ಗ್ರಾಮದವರು. ಇವರು ಹಲವು ಸಾಹಿತ್ಯ ಕೃತಿ ಪ್ರಕಟಿಸಿದ್ದಾರೆ. 'ದೊಡ್ಡಮನೆ' ಕಾದಂಬರಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. 1979ರಲ್ಲಿ, ನಾಗೇಗೌಡರು ಕರ್ನಾಟಕ ಜಾನಪದ ಪರಿಷತ್ತನ್ನು ಸ್ಥಾಪಿಸಿದರು. ಇದು ಸಾಂಪ್ರದಾಯಿಕ ಜಾನಪದ ಕಲೆಗಳ ಅಧ್ಯಯನ ಮತ್ತು ಪ್ರಚಾರಕ್ಕಾಗಿ ಮೀಸಲಾದ ಅಕಾಡೆಮಿಯಾಗಿದೆ. 1986ರಲ್ಲಿ ಅವರು ಜಾನಪದ ಲೋಕವನ್ನು ಪ್ರಾರಂಭಿಸಿದರು. ರಾಮನಗರದಲ್ಲಿ ನೆಲೆಗೊಂಡಿರುವ ಈ ಸ್ಥಳ ಜಾನಪದ ಕಲೆಗಳ ವಸ್ತುಸಂಗ್ರಹಾಲಯವಾಗಿದೆ.

click me!