ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!

ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!

Published : Jun 12, 2026, 10:26 PM IST

ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ, ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರನ್ನು ಭೇಟಿ ಮಾಡುವ ಮೂಲಕ ಹೊಸ ರಾಜಕೀಯ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಹಿರಿಯರ ಅನುಭವ ಪಡೆದು ಉತ್ತಮ ಆಡಳಿತ ನೀಡುವ ಚಾಣಾಕ್ಷ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು: "ನಾನೇ ಬೇರೆ.. ನನ್ನ ಸ್ಟೈಲೇ ಬೇರೆ.." ಎಂಬ ಮಾತು ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಕ್ಷರಶಃ ಅನ್ವಯಿಸುತ್ತಿದೆ. ಅಧಿಕಾರ ಹಿಡಿದ ಮರುಕ್ಷಣವೇ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಾಂಪ್ರದಾಯಿಕ ಗೋಡೆಯನ್ನು ಕೆಡವಿ ಹಾಕಿರುವ ಡಿಕ್ಷಿ, ರಾಜ್ಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆಯುತ್ತಿದ್ದಾರೆ. ವಿದುರ ನೀತಿ ಮತ್ತು ಚಾಣಕ್ಯ ತಂತ್ರದ ಮಿಶ್ರಣದಂತೆ ಕಾಣುತ್ತಿರುವ ಡಿಕೆಶಿ ಅವರ ಈ ಹೊಸ 'ಕಾರ್ಯತಂತ್ರ' ಈಗ ರಾಜಕೀಯ ಪಂಡಿತರ ನಿದ್ದೆಗೆಡಿಸಿದೆ.

ಸರಣಿ ಭೇಟಿ: ಇದು ಕೇವಲ ಸೌಜನ್ಯವೋ ಅಥವಾ ಚಾಣಾಕ್ಷತನವೋ?

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಮತ್ತು ನಂತರವೂ ಡಿ.ಕೆ. ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದರು. ಸಾಮಾನ್ಯವಾಗಿ ಅಧಿಕಾರಕ್ಕೆ ಬಂದವರು ವಿರೋಧ ಪಕ್ಷದ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕಲು ನೋಡುತ್ತಾರೆ. ಆದರೆ ಡಿಕೆಶಿ ಮಾತ್ರ ಹಿರಿಯ ನಾಯಕರ ಮನೆಗೆ ತೆರಳಿ, ಅವರ ಅನುಭವದ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುವ ಮೂಲಕ 'ಅಪೂರ್ವ ಹೆಜ್ಜೆ' ಇಟ್ಟಿದ್ದಾರೆ. ಇದು ವಿರೋಧ ಪಕ್ಷದ ಅಸ್ತ್ರಗಳನ್ನೇ ಮೊಂಡಾಗಿಸುವ ತಂತ್ರ ಎಂಬ ಚರ್ಚೆ ಶುರುವಾಗಿದೆ.

ಕುಮಾರಣ್ಣನ ಮನೆಗೆ ಹೋಗ್ತಿನಿ ಅಂದಿದ್ದೇಕೆ ಡಿಕೆ?

ಎಲ್ಲಕ್ಕಿಂತ ಹೆಚ್ಚಾಗಿ ಹಳೇ ಮೈಸೂರು ಭಾಗದ ರಾಜಕೀಯ ವೈರಿ ಎಂದೇ ಬಿಂಬಿತವಾಗಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೂ ಭೇಟಿ ನೀಡಲು ಡಿಕೆಶಿ ಉತ್ಸುಕತೆ ತೋರಿದ್ದಾರೆ. "ರಾಜ್ಯದ ಹಿತದೃಷ್ಟಿಯಿಂದ ಹಿರಿಯ ನಾಯಕರ ಸಲಹೆ ಮುಖ್ಯ. ಕುಮಾರಸ್ವಾಮಿ ಅವರ ಮನೆಗೂ ಹೋಗಿ ಅವರ ಅನುಭವಗಳನ್ನು ಕೇಳುತ್ತೇನೆ" ಎನ್ನುವ ಮೂಲಕ ಡಿಕೆಶಿ ಶಾಂತಿ ಮಂತ್ರ ಪಠಿಸಿದ್ದಾರೆ. ಈ ನಡೆ ಜೆಡಿಎಸ್ ಪಾಳಯದಲ್ಲಿ ಗೊಂದಲ ಮೂಡಿಸಿದರೆ, ರಾಜಕೀಯ ವಲಯದಲ್ಲಿ 'ಡಿಕೆಶಿ ಮಾಸ್ಟರ್ ಪ್ಲಾನ್' ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಂಡೆಯ ಹೊಸ ನಡೆ ಬಗ್ಗೆ ಹೆಚ್‌ಡಿಕೆ ಹೇಳಿದ್ದೇನು?

ಡಿಕೆಶಿ ಅವರ ಈ ಭೇಟಿಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿರುವ ಹೆಚ್.ಡಿ. ಕುಮಾರಸ್ವಾಮಿ, "ಬರುವುದಾದರೆ ಬರಲಿ, ಸ್ವಾಗತಿಸುತ್ತೇವೆ. ಆದರೆ ರಾಜ್ಯದ ಜನರ ಕೆಲಸಗಳಾಗಬೇಕು" ಎಂಬ ಸಂಯಮದ ಉತ್ತರ ನೀಡಿದ್ದಾರೆ. ಒಳಗೊಳಗೆ ಕುಮಾರಸ್ವಾಮಿ ಕೂಡ ಬಂಡೆಯ ಈ ಹೊಸ 'ಸಾಫ್ಟ್ ಪವರ್' ರಾಜಕಾರಣಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂದು ಆಲೋಚಿಸುವಂತೆ ಮಾಡಿದೆ.

ಹಿರಿಯರ ಅನುಭವ.. ಡಿಕ್ಷಿ ಆಡಳಿತ!

ಆಡಳಿತದಲ್ಲಿ ತಪ್ಪುಗಳಾಗಬಾರದು ಮತ್ತು ವಿರೋಧ ಪಕ್ಷಗಳು ಅನಗತ್ಯ ಟೀಕೆ ಮಾಡುವ ಹಾದಿಯನ್ನು ಮುಚ್ಚಬೇಕು ಎಂಬುದು ಡಿಕೆಶಿ ಅವರ ದೂರದೃಷ್ಟಿ. ಮಾಜಿ ಸಿಎಂಗಳ ಬಳಿ ಹೋಗಿ ಸಲಹೆ ಪಡೆಯುವುದು ಎಂದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡುವ ಒಂದು ಚಾಣಾಕ್ಷ ತಂತ್ರವೂ ಹೌದು. "ವಿಧುರ ನೀತಿಯಲ್ಲಿ ಹೇಳಿರುವಂತೆ ಶತ್ರುವನ್ನು ಸ್ನೇಹದಿಂದ ಗೆಲ್ಲುವ ಕಲೆ ಡಿಕೆಶಿಗೆ ಸಿದ್ಧಿಸಿದೆ" ಎಂದು ಅವರ ಬೆಂಬಲಿಗರು ಬಣ್ಣಿಸುತ್ತಿದ್ದಾರೆ.

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more