ದೀಪಾವಳಿ ಪಟಾಕಿ ಸಿಡಿಸಲು ಮುಂಜಾಗ್ರತಾ ಕ್ರಮಗಳು: ಅವಘಡಕ್ಕೆ ಸಹಾಯವಾಣಿ ಆರಂಭಿಸಿದ ಸರ್ಕಾರ

By Sathish Kumar KH  |  First Published Nov 12, 2023, 12:49 PM IST

ಪಟಾಕಿ ಅವಘಡಗಳಿಗೆ ಬೆಂಗಳೂರು ನಗರ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಸರ್ಕಾರದಿಂದ ಸಹಾಯವಾಣಿ 9481740137 ಹಾಗೂ 080-26707176  ಆರಂಭಿಸಿದೆ.


ಬೆಂಗಳೂರು (ನ.12): ದೀಪಾವಳಿ ಅಂಗವಾಗಿ ಪಟಾಕಿ ಸಿಡಿಸುವ ವೇಳೆ ಸಂಭವಿಸುವ ಅವಘಡಗಳಿಗೆ ಚಿಕಿತ್ಸೆ ನೀಡಲು ಬೆಂಗಳೂರು ನಗರ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಸಹಾಯವಾಣಿ 9481740137 ಹಾಗೂ 080-26707176  ಆರಂಭಿಸಿದೆ. ಜೊತೆಗೆ, ಪಟಾಕಿ ಸಿಡಿಸುವಾಗ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ನಾಡಿನೆಲ್ಲೆಡೆ ಕಳೆಗಟ್ಟಿದ ದೀಪಾವಳಿ ಹಬ್ಬ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ವೇಳೆ ಪಟಾಕಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಬೆಂಗಳೂರಿನ ಕಣ್ಞಿನ ಆಸ್ಪತ್ರೆಗಳು ಪಟಾಕಿ ಅವಘಡ ಚಿಕಿತ್ಸೆಗೆಂದು ವಿಶೇಷ ಹಾಸಿಗೆ ಮೀಸಲಿಟ್ಟಿವೆ. ಬೆಂಗಳೂರಿನ ಮಿಂಟೋ, ನಾರಾಯಣ ನೇತ್ರಾಲಯ ಸೇರಿದಂತೆ ಇತರೆ ಆಸ್ಪತ್ರೆ ಗಳು ಸಜ್ಜುಗೊಂಡವೆ. ಪಟಾಕಿ ಅವಘಡಗಳಿಂದ ಸಂಭವಿಸುವ ಕಣ್ಣಿನ ಹಾನಿ ತಪ್ಪಿಸಲು ಗಾಯಾಳುಗಳಿಗೆ ಚಿಕಿತ್ಸೆಗೆ ಅಗತ್ಯ ಸಿದ್ದತೆ ಮಾಡಿಕೊಂಡಿವೆ.

Tap to resize

Latest Videos

ದೀಪಾವಳಿಗೆ 24x7 ಕಣ್ಣಿನ ಚಿಕಿತ್ಸೆ, ಸಹಾಯವಾಣಿ ಆರಂಭಿಸಿದ ಮಿಂಟೋ ಆಸ್ಪತ್ರೆ: ಈಗ್ಲೇ ನೋಟ್‌ ಮಾಡ್ಕೊಳಿ!

ಹಬ್ಬದ ಹಿನ್ನೆಲೆ ಮಿಂಟೋ ಸೇರಿ ಇತರೆ ಆಸ್ಪತ್ರೆ ಗಳು ದಿನ 24 ಗಂಟೆಯೂ ಸೇವೆ ‌ನೀಡಲು ಸಜ್ಜುಗೊಳಿಸಲಾಗಿದೆ. ಪಟಾಕಿ ಅವಘಡ ಚಿಕಿತ್ಸೆಗೆಂದು ಮಿಂಟೋ ಆಸ್ಪತ್ರೆಯು 35 ಹಾಸಿಗೆ ಮೀಸಲಿಟ್ಟಿದೆ. ಇತರೆ ಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ 54 ವಿಶೇಷ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಸಿಬ್ಬಂದಿಗಳು ದಿನಪೂರ್ತಿ ಸೇವೆ ನೀಡಲು ಸಜ್ಜುಗೊಂಡಿವೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಣ್ಣಿನ ಆಸ್ಪತ್ರೆಗಳು ಸಹಾಯವಾಣಿಯನ್ನು ಆರಂಭಿಸಿವೆ. 

ಪಟಾಕಿ ಸಿಡಿಸುವ ವೇಳೆ ವೈದ್ಯರ ಸಲಹೆ:
- ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಬೇಕು.
- ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಬೇಕು.
- ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್‌ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಬೇಕು.
- ಮೈದಾನ, ಖಾಲಿ ಜಾಗಗಳಲ್ಲಷ್ಟೆ ಪಟಾಕಿ ಹಚ್ಚಬೇಕು.
- ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ.
- ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ.
- ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಮುಟ್ಟುವ, ಗಾಳಿಯಲ್ಲಿ ಎಸೆಯುವ ಪ್ರಯತ್ನ ಬೇಡ.
- ಗಾಜು, ಡಬ್ಬ ಇತರೆ ಪಾತ್ರೆಗಳನ್ನು ಇರಿಸಿ ಪಟಾಕಿ, ರಾಕೆಟ್‌ ಹಚ್ಚುವ ಸಾಹಸ ಮಾಡಬೇಡಿ.

click me!