
ಕಾಂಗ್ರೆಸ್ ನಾಯಕ ಶಶಿ ತರೂರ್ ಇಂಗ್ಲೀಷ್‌ನ ಕಠಿಣ ಪದ ಬಳಕೆಯಿಂದಗಿ ಬಹಳ ಫೇಮಸ್. ಅವರು ತಮ್ಮ ಮಾತಿನಲ್ಲಿ ಬಳಸುವ ಕೆಲ ಇಂಗ್ಲೀಷ್ ಪದಗಳು ಡಿಕ್ಷನರಿಯಲ್ಲೇ ಇರುವುದಿಲ್ಲ ಎಂದು ಹಲವಾರು ಮಂದಿ ಹಾಸ್ಯ ಮಾಡುತ್ತಿರುತ್ತಾರೆ. ಹೀಗಿರುವಾಗ ಪರಪ್ಪನ ಅಗ್ರಹಾರ ಜೈಲಿನಲ್ಲಾಗುತ್ತಿರುವ ಅಕ್ರಮಗಳನ್ನು ಬಯಲಿಗೆಳೆದ ಡಿಐಜಿ ರೂಪಾ ತರೂರ್‌ಗಿಂತಲೂ ಕಠಿಣ ಇಂಗ್ಲೀಷ್ ಪದ ಬಳಕೆ ಮಾಡುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: Floccinaucinihilipilification ಪದದ ಅರ್ಥ ಗೊತ್ತಾ?: ತರೂರ್ ಗೆ ಮಾತ್ರ ಗೊತ್ತು!
ಖಡಕ್ ಪೊಲೀಸ್ ಅಧಿಕಾರಿ ಡಿಐಜಿ ರೂಪಾ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ಆ ವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಕ್ಯಾಮರೂನ್ ನಿವಾಸಿಯಾಗಿರಬಹುದೆಂದು ಅಂದಾಜಿಸಲಾಗಿದ್ದು, ಆತ 2018ರ ಕ್ಯಾಮರೂನ್ ಚುನಾವಣೆ ಕುರಿತಾಗಿ ಮಾತನಾಡುತ್ತಿರುವುದು ಸ್ಪಷ್ಟವಾಗಿದೆ. ತನ್ನ ಮಾತಿನ ನಡುವೆ ಈತ 40ಕ್ಕೂ ಹೆಚ್ಚು ಅಕ್ಷರಗಳಿರುವ ಪದ ಬಳಸಿದ್ದು, ನೀವೂ ಇದನ್ನು ಗಮನಿಸಬಹುದಾಗಿದೆ.
ಈ ವಿಡಿಯೋಗೆ ಬಹಳಷ್ಟು ಮಂದಿ ಪ್ರತಿಕ್ರಿಯಿಸಿದ್ದು, 4700ಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ. ವಿಡಿಯೋ ಟ್ವೀಟ್ ಮಾಡಿರುವ ಡಿ. ರೂಪಾ 'ಶಶಿ ತರೂರ್‌ರವರಿಗೆ ಸ್ಪರ್ಧೆ ನೀಡುವ ವ್ಯಕ್ತಿ ಇರಬಹುದೆಂದು ಯಾವತ್ತೂ ಅಂದುಕೊಂಡಿರಲಿಲ್ಲ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ