ಬಿಡದಿಯ ನಿತ್ಯಾನಂದ ಸ್ವಾಮಿ ಮಾದಕವಸ್ತು ಸೇವಿಸುವಂತೆ ಪ್ರವಚನ ನೀಡಿರುವ ವಿಡಿಯೋ ಒಂದನ್ನು ಯೂ ಟ್ಯೂಬ್ ಗೆ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸದ್ದು ಮಾಡಿದ್ದರು. ಆದರೀಗ ಸಿಸಿಬಿ ಅಧಿಕಾಗಳ ನೋಟಿಸ್‌ನಿಂದ ಬೆಚ್ಚಿ ಬಿದ್ದಿರುವ ಸ್ವಯಂ ಘೋಷಿತ ದೇವಮಾನವ ಸದ್ದಿಲ್ಲದೆ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಹೌದು ಒಂದೆಡೆ ಯುವಜನರು ಮಾದಕ ವ್ಯಸನಿಗಳಾಗುತ್ತಿದ್ದಾರೆ, ಇದನ್ನು ತಡೆಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಹಾಗೂ ಹಲವಾರು ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಪೊಲೀಸ್ ಅಧಿಕಾರಿಗಳೂ ಇದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಬಿಡದಿಯ ನಿತ್ಯಾನಂದ ಸ್ವಾಮಿ ಮಾದಕ ವಸ್ತು ಸೇವಿಸುವಂತೆ ಪ್ರವಚನ ನೀಡಿರುವ ವಿಡಿಯೋ ಒಂದನ್ನು ಯೂ ಟ್ಯೂಬ್‌ಗೆ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಮಾದಕವಸ್ತು ಸೇವನೆಗೆ ಪ್ರಚೋದನೆ ನೀಡುವ ವಿಡಿಯೋವೊಂದನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ನಿತ್ಯನಂದನ ಈ ವಿಡಿಯೋ ನೋಡಿದ ಕೆಲವರು ಇದನ್ನು ಸಿಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಸಿಬಿ ಅಧಿಕಾರಿಗಳು ಕಳೆದೆರಡು ದಿನಗಳ ಹಿಂದೆ ನಿತ್ಯಾನಂದನಿಗೆ ನೋಟೀಸ್ ನೀಡಲು ಚಿಂತಿಸಿದ್ದರು. ಆದರೀಗ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡುವ ಮೊದಲೇ ತನಿಖೆಗೆ ಹೆದರಿದ ನಿತ್ಯಾನಂದ ಸ್ವಾಮಿ ಮಾದಕ ವಸ್ತುವಿನ ಬಗ್ಗೆ ಉಪನ್ಯಾಸ ಕೊಟ್ಟಿದ್ದ ವಿಡಿಯೋವನ್ನು ಸದ್ದಿಲ್ಲದೆ ಡಿಲೀಟ್ ಮಾಡಿದ್ದಾರೆ.
undefined
ಇದನ್ನೂ ಓದಿ: ಜನಾರ್ದನ ರೆಡ್ಡಿ ಆಯ್ತು, ಇದೀಗ ಸಿಸಿಬಿ ಹಿಟ್ ಲಿಸ್ಟ್‌ನಲ್ಲಿ ಸ್ವಾಮಿ..?
ಒಟ್ಟಾರೆಯಾಗಿ ಮಾದಕ ವ್ಯಸನಿಗಳಾಗಿ ಎಂದು ಸಂದೇಶ ನೀಡಿದ್ದ ನಿತ್ಯಾನಂದ ಸ್ವಾಮಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡುವ ಸುದ್ದಿಯೇ ಬಿಸಿ ಮುಟ್ಟಿಸಿದೆ ಎಂದರೆ ತಪ್ಪಾಗಲಾರದು.