ಮೋದಿಗೆ ಮತ ನೀಡಿದರೆ, ಮದುವೆಗೆ ಉಡುಗೊರೆ ಕೊಟ್ಟಂತೆ!

By Web DeskFirst Published Nov 17, 2018, 2:13 PM IST
Highlights

ಮಂಗಳೂರಿನ ಪದವಿನಂಗಡಿಯ ಭಟ್ರಕುಮೇರು ನಿವಾಸಿಯಾಗಿರುವ ಜಯಂತಿ ಎಂಬವರ ಮಗ ಪ್ರವೀಣ್ ಎಂಬವರೇ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಅಭಿಮಾನ ಮೆರೆದವರು. ಇನ್ವಿಟೇಷನ್‌ನಲ್ಲಿ 'ತಮ್ಮ ಸಂತಸದ ನಗುಮುಖದ ಆಗಮನವೇ ಆಶೀರ್ವಾದ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಬೆಂಬಲಿಸಿ ನೀಡುವ ಮತವೇ ಉಡುಗೊರೆ' ಎನ್ನುವ ಮೂಲಕ ಉಡುಗೊರೆ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ವಧು-ವರನಿಗೆ ಗಿಫ್ಟ್ ಕೊಡುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಇತ್ತೀಚೆಗೆ ಈ ಆಚರಣೆ ಬದಲಾಗಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಆಗಮನವೇ ಉಡುಗೊರೆ, ಆಶೀರ್ವಾದವೇ ಉಡುಗೊರೆ ಎಂದು ಹಾಕುವ ಮೂಲಕ ಗಿಫ್ಟ್ ಬೇಡ ಎಂಬ ಸೂಚನೆ ನೀಡಲಾಗುತ್ತದೆ. ಆದರೀಗ ತುಳುನಾಡಿನ ಭಾವಿ ಪತಿ-ಪತ್ನಿ ಇವೆಲ್ಲವನ್ನು ಮೀರಿ ಒಂದು ಹೆಜ್ಜೆ ಮುಂದೆ ಹೋಗಿದ್ದು, 2019ರಲ್ಲಿ ಮೋದಿಗೆ ಮತ ನೋಡಿ ಅದುವೇ ನೀವು ನಮಗೆ ನೀಡುವ ಉಡುಗೊರೆ ಎನ್ನುವ ಮೂಲಕ ಎಚ್ಚೆರನ್ನೂ ಅಚ್ಚರಿಗೀಡು ಮಾಡಿದ್ದಾರೆ.

ಮಂಗಳೂರಿನ ಪದವಿನಂಗಡಿಯ ಭಟ್ರಕುಮೇರು ನಿವಾಸಿಯಾಗಿರುವ ಜಯಂತಿ ಎಂಬವರ ಮಗ ಪ್ರವೀಣ್ ಎಂಬವರೇ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಅಭಿಮಾನ ಮೆರೆದವರು. ಇನ್ವಿಟೇಷನ್‌ನಲ್ಲಿ 'ತಮ್ಮ ಸಂತಸದ ನಗುಮುಖದ ಆಗಮನವೇ ಆಶೀರ್ವಾದ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಬೆಂಬಲಿಸಿ ನೀಡುವ ಮತವೇ ಉಡುಗೊರೆ' ಎನ್ನುವ ಮೂಲಕ ವಸ್ತು, ಧನ ರೂಪದ ಉಡುಗೊರೆ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಪ್ರವೀಣ್ ಮೋದಿಯ ಬಹುದೊಡ್ಡ ಅಭಿಮಾನಿ. ಯಾವುದೇ ಪಕ್ಷ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳದ ಪ್ರವೀಣ್ ಮೋದಿಇ ಆಡಳಿತಕ್ಕೆ ಮಾರು ಹೋಗಿದ್ದಾರೆ. ಹೀಗಾಗಿ ತಮ್ಮ ಮದುವೆ ಕೊನೆಯ ಪುಟವಿಡೀ ನೆಚ್ಚಿನ ನಾಯಕನ ಆಡಳಿತಾವಧಿಯ ಸಾಧನೆಗಳನ್ನು ತಿಳಿಸಿಕೊಡಲು ಮೀಸಲಿಟ್ಟಿದ್ದಾರೆ. ಇ್ಲಲಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಪ್ರಮುಖ ಯೋಜನೆಗಳ ವಿವರಗಳನ್ನು ನೀಡಿದ್ದಾರೆ. 

ಸದ್ಯ ಈ ಮೋದಿ ಅಭಿಮಾನಿಯ ಮದುವೆ ಆಮಂತ್ರಣ ಪತ್ರಿಕೆ ವಾಟ್ಸಪ್, ಪೇಸ್‌ಬುಕ್, ಟ್ವಿಟರ್‌ಳಲ್ಲಿ ವೈರಲ್ ಆಗುತ್ತಿದ್ದು, ಡಿಸೆಂಬರ್ 31 ರಂದು ಹೇಮಲತಾರೊಂದಿಗೆ ವಿವಾಹವಾಗಲಿದ್ದಾರೆ. 

click me!