ಧರ್ಮಸ್ಥಳ ಭಕ್ತರ ಪ್ರತಿಭಟನೆ ವೇಳೆ ಸೌಜನ್ಯ ಪೋಷಕರ ಮೇಲೆ ಹಲ್ಲೆ ಯತ್ನ; ದೂರು

By Ravi Janekal  |  First Published Aug 5, 2023, 10:13 AM IST

 ಉಜಿರೆಯಲ್ಲಿ ಧರ್ಮಸ್ಥಳ ಭಕ್ತರು ನಡೆಸಿದ ಪ್ರತಿಭಟನೆ ವೇಳೆ ಸೌಜನ್ಯ ಪೋಷಕರಿಗೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ದೂರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.


ಮಂಗಳೂರು (ಆ.5) :  ಉಜಿರೆಯಲ್ಲಿ ಧರ್ಮಸ್ಥಳ ಭಕ್ತರು ನಡೆಸಿದ ಪ್ರತಿಭಟನೆ ವೇಳೆ ಸೌಜನ್ಯ ಪೋಷಕರಿಗೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ದೂರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೌಜನ್ಯ ಹತ್ಯೆ ಪ್ರಕರಣ ಸಂಬಂಧ ಧರ್ಮಸ್ಥಳ ಭಕ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸೌಜನ್ಯಳ ತಮ್ಮ ಜಯರಾಮನ ಕಾಲರ್ ಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದ ಮಹಾವೀರ್ ಜೈನ್. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಹೋದರ ಸುರೇಂದ್ರ ಕುಮಾರ ಹೆಗ್ಗಡೆಯವರ ಆಪ್ತನಾಗಿರುವ ಮಹಾವೀರ್ ಜೈನ್. ಸೌಜನ್ಯಳ ತಾಯಿ ಕುಸುಮಾವತಿಯವನ್ನು ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದು ಮಾನಕ್ಕೆ ಕುಂದುಂಟು ಮಾಡಿದ್ದಾನೆ. ಅಲ್ಲದೇ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿರುವ ಸೌಜನ್ಯಳ ತಾಯಿ ಕುಸುಮಾವತಿ. 

Tap to resize

Latest Videos

ಕುಸುಮಾವತಿ ದೂರಿನ ಹಿನ್ನೆಲೆ  ಐಪಿಸಿ 1860, 341, 354, 323, 34 ಸೆಕ್ಷನ್ ಗಳಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜಾ ಮನವಿ, ಸಿಎಂ ಸಿದ್ದರಾಮಯ್ಯಗೆ ಪತ್ರ!

ಸೌಜನ್ಯ ಕೊಲೆ ಕೇಸ್‌: ತನಿಖಾಧಿಕಾರಿ ವಿರುದ್ಧವೇ ತನಿಖೆಗೆ ಒಕ್ಕಲಿಗರ ಸಂಘ ಒತ್ತಾಯ

ಮಂಗಳೂರು ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಹಾದಿತಪ್ಪಿಸಿದ ತನಿಖೆ ನಡೆಸಿದ ತನಿಖಾಧಿಕಾರಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ ನಿವೃತ್ತ ಪಂಚ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾಧಿಕಾರಿಯನ್ನೇ ತನಿಖೆಗೆ ಒಳಪಡಿಸಿ ಘಟನೆಯ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ದ.ಕ.ಜಿಲ್ಲಾ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಪ್ರೊ.ಗುರುದೇವ್‌, ಈ ಸಂಬಂಧ ಶೀಘ್ರವೇ ರಾಜ್ಯ ಸರ್ಕಾರಕ್ಕೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು. ಈಗಾಗಲೇ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು ಸಿಬಿಐ ಕೋರ್ಚ್‌ನಿಂದ ಖುಲಾಸೆಗೊಂಡಿರುವ ಸಂತೋಷ್‌ ರಾವ್‌ ಅವರನ್ನು ಮರು ತನಿಖೆಗೆ ಒಳಪಡಿಸುವ ಅಗತ್ಯವಿಲ್ಲ. ಸೌಜನ್ಯ ಹತ್ಯೆ ಹಿಂದಿನ ಕಾಣದ ಕೈಗಳ ಕೈವಾಡ ಕೂಡ ಬೆಳಕಿಗೆ ಬರಬೇಕು ಎಂದು ಹೇಳಿದರು.

ಸಿನಿಮಾ ಆಗುತ್ತಿದೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣ, ಹೆಸರು ನೋಂದಣಿ!

ಆ.5ರಂದು ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯದ ಜಿಲ್ಲಾ ಮಟ್ಟದ ವಿಶೇಷ ಸಭೆ ನಡೆಯಲಿದ್ದು, ಇದರಲ್ಲಿ ಮುಂದಿನ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು. ಈ ಹೋರಾಟವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು ಎಂದರು. ಸಂಘದ ಪದಾಧಿಕಾರಿಗಳಾದ ಬಾಲಕೃಷ್ಣ, ಕಿರಣ್‌, ನವೀನ್‌, ಪೂರ್ಣಿಮಾ, ಪದ್ಮನಾಭ, ರಕ್ಷಿತ್‌, ರಾಮಚಂದ್ರ, ಸಾರಿಕಾ ಸುರೇಶ್‌ ಮತ್ತಿತರರಿದ್ದರು.

click me!