ಹದಗೆಟ್ಟ ವಾತಾವರಣ: ಶ್ವಾಸಕೋಶ, ಹೃದಯಕ್ಕೆ ಎಫೆಕ್ಟ್‌!

Published : Apr 12, 2025, 07:10 AM ISTUpdated : Apr 12, 2025, 07:22 AM IST
ಹದಗೆಟ್ಟ ವಾತಾವರಣ: ಶ್ವಾಸಕೋಶ, ಹೃದಯಕ್ಕೆ ಎಫೆಕ್ಟ್‌!

ಸಾರಾಂಶ

ಜಿಲ್ಲೆಯ ಕಡೇಚೂರು - ಬಾಡಿಯಾಳ ಕೈಗಾರಿಕಾ ಪ್ರದೇಶದ ವಾಯುಸೂಚ್ಯಂಕದ ಅಂಕಿ-ಅಂಶಗಳನ್ನು ಗಮನಿಸಿದಾಗ, ಅನಾರೋಗ್ಯಕರ ವಾತಾವರಣದಿಂದಾಗಿ ಮುಂಬರುವ ದಿನಗಳಲ್ಲ್ಲಿಈ ಭಾಗದ ಸುತ್ತಮುತ್ತಲ ಹತ್ತಾರು ಹಳ್ಳಿಗರಿಗೆ ಎದುರಾಗಬಹುದಾದ ತೀವ್ರ ತರಹದ ಕಾಯಿಲೆಗಳ ಬಗ್ಗೆ ಭಾರಿ ಆತಂಕ ಮೂಡಿಸುತ್ತದೆ.

ಆನಂದ್‌ ಎಂ. ಸೌದಿ

ಯಾದಗಿರಿ (ಏ.12): ಜಿಲ್ಲೆಯ ಕಡೇಚೂರು - ಬಾಡಿಯಾಳ ಕೈಗಾರಿಕಾ ಪ್ರದೇಶದ ವಾಯುಸೂಚ್ಯಂಕದ ಅಂಕಿ-ಅಂಶಗಳನ್ನು ಗಮನಿಸಿದಾಗ, ಅನಾರೋಗ್ಯಕರ ವಾತಾವರಣದಿಂದಾಗಿ ಮುಂಬರುವ ದಿನಗಳಲ್ಲ್ಲಿಈ ಭಾಗದ ಸುತ್ತಮುತ್ತಲ ಹತ್ತಾರು ಹಳ್ಳಿಗರಿಗೆ ಎದುರಾಗಬಹುದಾದ ತೀವ್ರ ತರಹದ ಕಾಯಿಲೆಗಳ ಬಗ್ಗೆ ಭಾರಿ ಆತಂಕ ಮೂಡಿಸುತ್ತದೆ. ಇದೇ ಜನವರಿ 1ರಿಂದ ಸತತ ಈವರೆಗೆ ದಿನಂಪ್ರತಿ 2-3 ಬಾರಿ ವಿವಿಧ ಸಮಯಗಳಲ್ಲಿ "ಕನ್ನಡಪ್ರಭ" ಈ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕ (ಏರ್‌ ಕ್ವಾಲಿಟಿ ಇಂಡೆಕ್ಸ್‌) ದ ವರದಿ ಸಂಗ್ರಹಿಸುತ್ತಿದ್ದು, ಅದರ ಸೂಚ್ಯಂಕಗಳನ್ನು ಗಮನಿಸಿದಾಗ ಆಘಾತಕಾರಿ ಅಂಶಗಳ ಹೊರಹೊಮ್ಮುತ್ತಿವೆ. ರಾತ್ರಿ 9 ರ ನಂತರದಿಂದ ಬೆಳಿಗ್ಗೆ 8 ಗಂಟೆವರೆಗಿನ ಅವಧಿಯಲ್ಲಿ "ಅನಾರೋಗ್ಯಕರ" ವಾತಾವರಣದ ಸೂಚ್ಯಂಕ (100 ಮಿತಿಗಿಂತ ಹೆಚ್ಚು) ಕಂಡು ಬಂದಿದೆ. 

ಈ ವರ್ಷಾರಂಭದ ಮೊದಲ ದಿನದಿಂದ ಹಿಡಿದು, ಈವರೆಗೆ (ಏ.1ರವರೆಗೆ) ವಾಯು ಗುಣಮಟ್ಟ ಬಹುತೇಕ ಸಂದರ್ಭಗಳಲ್ಲಿ ಜನ-ಜೀವನಕ್ಕೆ ಮಾರಕ ಎಂಬಂತಿವೆ. ವಾಯು ಗುಣಮಟ್ಟ ಸೂಚ್ಯಂಕದ ಮಾಹಿತಿಯಂತೆ, ದಿನಕ್ಕೆ ಬಹುತೇಕ ಸಂದರ್ಭಗಳಲ್ಲಿ 110-117 ರವರೆಗೂ ಮಿತಿ ತಲುಪಿರುವುದು ಕಂಡು ಬಂದಿದೆ. ಅನೇಕ ಬಾರಿ 77- 90 ರವರೆಗೆ "ಕಳಪೆ" ಮಟ್ಟದ ಹವಾಮಾನಕ್ಕೆ ಸಾಕ್ಷಿಯಾಗುತ್ತಿದೆ. ಅಂದರೆ, 100ಕ್ಕಿಂತೆ ಹೆಚ್ಚು, 150ಕ್ಕಿಂತ ಕಡಮೆ ಪ್ರಮಾಣದಲ್ಲಿ ಸೂಚ್ಯಂಕ ಕಂಡು ಬಂದರೆ, ಆ ವೇಳೆ, ಈ ಪ್ರದೇಶದ ಜನರ ಮೇಲೆ "ಅನಾರೋಗ್ಯಕರ" ಅಂಶಗಳನ್ನು ಬೀರುವ ಗಾಳಿಯ ವಾತಾವರಣ ಇದ್ದಂತೆ.

ಇದನ್ನೂ ಓದಿ: ಕೆಮಿಕಲ್‌ ದುರ್ನಾತದ ಎಫೆಕ್ಟ್‌: ಮೂಗಿಗೆ ಬಟ್ಟೆ ಕಟ್ಕೊಂಡೇ ಪಾಠ ಹೇಳ್ಬೇಕು, ಮಕ್ಳು ಕೇಳ್ಬೇಕು..!

100-150 ಸೂಚ್ಯಂಕದ ಮಿತಿ ತಲುಪಿದಾಗ: ಈ ಸಂದರ್ಭಗಳಲ್ಲಿ 2.5 ಮೈಕ್ರೋಮೀಟರ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ, ಉಸಿರಾಡಬಹುದಾದ ಪೊಲ್ಯಾಕ್ಟಿಕ್ ಕಣಗಳು ಶ್ವಾಸಕೋಶ ಮತ್ತು ರಕ್ತನಾಳಗಳನ್ನು ಪ್ರವೇಶಿಸಬಹುದು. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತ್ಯಂತ ತೀವ್ರವಾದ ಪರಿಣಾಮಗಳು ಶ್ವಾಸಕೋಶ ಮತ್ತು ಹೃದಯದ ಮೇಲೆ ಬೀರುತ್ತವೆ. ವಾತಾವರಣಕ್ಕೆ ಈ ವೇಳೆ ಒಡ್ಡಿಕೊಳ್ಳುವುದರಿಂದ ಕೆಮ್ಮು ಅಥವಾ ಉಸಿರಾಟದ ತೊಂದರೆ ಆಸ್ತಮಾ ಉಲ್ಬಣಗೊಳ್ಳುವುದು ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಯ ಬೆಳವಣಿಗೆಗೆ ಕಾರಣವಾಗಬಹುದು. ಸೂಕ್ಷ್ಮ ಗುಂಪುಗಳು ಆರೋಗ್ಯದ ಪರಿಣಾಮಗಳನ್ನು ತಕ್ಷಣವೇ ಅನುಭವಿಸಬಹುದು. ಆರೋಗ್ಯವಂತ ವ್ಯಕ್ತಿಗಳು ದೀರ್ಘಕಾಲದವರೆಗೆ ಇಂತಹ ವಾತಾವರಣದಲ್ಲಿ ಒಡ್ಡಿಕೊಂಡಾಗ, ಉಸಿರಾಟದ ತೊಂದರೆ, ಗಂಟಲು ಕಿರಿಕಿರಿಯನ್ನು ಅನುಭವಿಸಬಹುದು. ಹೀಗಾಗಿ, ಈ ವೇಳೆ, ಹೊರಾಂಗಣ ಚಟುವಟಿಕೆಯನ್ನು ಮಿತಿಗೊಳಿಸಬೇಕು ಎಂಬುದಾಗಿ ಮುಂಜಾಗ್ರತಾ ಎಚ್ಚರಿಕೆಯ ಮಾಹಿತಿ ಇದಾಗಿರುತ್ತದೆ.

70-90 ರ ಮಿತಿಯೊಳಗೆ ಇದ್ದಾಗ: ಇನ್ನು, ವಾಯು ಗುಣಮಟ್ಟದ ಸೂಚ್ಯಂಕ 70 ರಿಂದ 99ರ ಸೂಚ್ಯಂಕ ತಲುಪಿದ್ದರೆ, ವಾಯುಮಾಲಿನ್ಯದ ಮಟ್ಟವು ಅತ್ಯಧಿಕ ಮಟ್ಟವನ್ನು ತಲುಪಿದೆ ಮತ್ತು ಸೂಕ್ಷ್ಮ ಗುಂಪುಗಳಿಗೆ ಅನಾರೋಗ್ಯಕರವಾಗಿದೆ. ಉಸಿರಾಟದ ತೊಂದರೆ ಅಥವಾ ಗಂಟಲು ಕಿರಿಕಿರಿಯಂತಹ ಲಕ್ಷಣಗಳು ಕಂಡು ಬಂದರೆ, ಹೊರಗೆ ಕಳೆಯುವ ಸಮಯವನ್ನು ಕಡಿಮೆ ಮಾಡಿ ಎಂಬ ಎಚ್ಚರಿಕೆ ಸಂದೇಶ ಆಗಿತ್ತದೆ.

ಇದನ್ನೂ ಓದಿ: ಕೂಸು ಬೆಳೆದಿಲ್ಲ, ಅಬಾರ್ಷನ್‌ ಮಾಡಿಸಿ ಬಿಡಿ: ಕೆಮಿಕಲ್‌ ಫ್ಯಾಕ್ಟರಿ ಎಫೆಕ್ಟ್‌ ಆರೋಪ

ಗಾಳಿಯ ಗುಣಮಟ್ಟ: ಮಾಲಿನ್ಯಕಾರಕ ಸಾಂದ್ರತೆಯ ಅಳತೆಗಳಿಂದ ಲೆಕ್ಕ ಹಾಕಲಾದ ವಾಯು ಗುಣಮಟ್ಟ ಸೂಚ್ಯಂಕ (ಆರ್‌ ಕ್ವಾಲಿಟಿ ಇಂಡೆಕ್ಸ್‌) ಬಳಸಿ ಗಾಳಿಯ ಗುಣಮಟ್ಟವನ್ನು ಅಳೆಯಲಾಗುತ್ತದೆ. ಸೊನ್ನೆಯಿಂದ 500 ರವರೆಗಿನ ಮಾಪಕವನ್ನು ಆಧರಿಸಿದ್ದು, ಹೆಚ್ಚಿನ ಮೌಲ್ಯಗಳು ಕೆಟ್ಟ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌