
ಬೆಂಗಳೂರು (ಏ.11): ರಾಜ್ಯದ ಜಾತಿ ಗಣತಿ ವರದಿಗೆ ಯಾರದ್ದೂ ವಿರೋಧ ಬಂದಿಲ್ಲ. ಈ ವರದಿಯಲ್ಲಿನ ಅಂಶಗಳ ಬಗ್ಗೆ ಸದ್ಯಕ್ಕೆ ಯಾರಿಗೂ ತಿಳಿದಿಲ್ಲ, ಅಧ್ಯಯನದ ಬಳಿಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯದಲ್ಲಿ ಮಾಡಲಾಗಿರುವ ಸಾಮಾಜಿಕ ,ಶೈಕ್ಷಣಿಕ,ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗಿದೆ. ಅದನ್ನ ಎಲ್ಲರೂ ಅಧ್ಯಯನ ಮಾಡಿ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬರುತ್ತದೆ. ಈ ಜಾತಿಗಣತಿ ವರದಿಗೆ ಯಾರೂಬ್ಬರೂ ವಿರೋಧ ಮಾಡಿಲ್ಲ. ಅದರಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ಜಾತಿ ಗಣತಿ ವರದಿಯಲಲ್ಲಿ 7-8 ಸಂಪುಟ ಇದೆ. ಅರ್ಧಗಂಟೆಯಲ್ಲಿ ಹೇಗೆ ನೋಡೊಕಾಗುತ್ತದೆ. ಒಂದು ವಾರ ಟೈಮ್ ಕೊಟ್ಟು ಎಲ್ಲಾ ಮಂತ್ರಿಗಳಿಗೂ ನೋಡ್ಕೊಂಡು ಬನ್ನಿ ಎಂದಿದ್ದಾರೆ. ಅಧ್ಯಯನಕ್ಕಾಗಿ ಸಂಪೂರ್ಣ ವರದಿಯನ್ನ ಮಂತ್ರಿಗಳಿಗೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವರಾಜ್ ತಂಗಡಿಗಿ ಅವರಿಗೆ ಹೇಳಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತಿರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಆರೋಪ ವಿಚಾರದ ಬಗ್ಗೆ ಮಾತನಾಡಿ, ಏನಾದರೂ ಇದ್ದರೆ ಕೊಡಲಿ. ದಾಖಲೆ ಕೊಟ್ಟರೆ ರಾಜೀನಾಮೆಗೂ ಸಿದ್ದ ಎಂದು ಬೋಸ್ ರಾಜು ಹೇಳಿದ್ದಾರೆ. ಬೇರೆ ಮಂತ್ರಿಗಳು ಕೂಡ ಇದನ್ನೇ ಹೇಳಿದ್ದಾರೆ. ಗುತ್ತಿಗೆದಾರರು ಮಾಡ್ತಿರೊದು ಸರಿಯಿಲ್ಲ ಎನ್ನೋದು ನನ್ನ ಅಭಿಪ್ರಾಯ. ಗುತ್ತಿಗೆದಾರರಿಗೆ ಗೊತ್ತಿದೆ ಹಿಂದಿನ ಸರ್ಕಾರದಲ್ಲಿ ಏನಾಗಿದೆ ಎನ್ನೊದು, ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ಅವರೇ ಕೊಟ್ಟಿರೋ ದಾಖಲೆ. ಅವರು ಕೊಟ್ಟಿರೊದನ್ನ ನಾನು ಒಪ್ಪಿದ್ದೇವಲ್ಲ. ಜಸ್ಟೀಸ್ ನಾಗಮೋಹನ್ ದಾಸ್ ವರದಿ ಬಂದಿದೆ. ನಿಯಮಗಳನ್ನು ಗಾಳಿಗೆ ದೂರಿ ಗುತ್ತಿಗೆ ಕೊಟ್ಟಿದ್ದಾರೆ ಎಂದಿದೆ. ಶೇ.100 ಪರ್ಸೆಂಟ್ ಸರ್ಕಾರ ಎನ್ನೊದು ಗೊತ್ತಾಗಿದೆ. ಇದಕ್ಕೆ ಬಿಜೆಪಿ ಏನ್ ಹೇಳುತ್ತೆ? ಆಡಳಿತ ಸರಿಯಾಗಿ ಕೊಟ್ಟಿಲ್ಲದಿದ್ದಕ್ಕೆ ಅವರು ವಿರೋದ ಪಕ್ಷದಲ್ಲಿರೊದು ಎಂದು ಟೀಕೆ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಕಳ್ಳರೇ ದಲಿತರನ್ನು ತುಳಿದವರು; ಆರ್. ಅಶೋಕ ಆರೋಪ
ನಾವೇನಾದರೂ ಹಾಗೆ ಈಗ ಭ್ರಷ್ಟಾಚಾರ ಮಾಡಿದ್ದರೆ ನಾವು ಅನುಭವಿಸುತ್ತೇವೆ. ಉಪ್ಪು ತಿಂದ ಮೇಲೆ ಎಲ್ಲರೂ ನೀರು ಕೂಡಿಯಲೇಬೇಕು. ಇವರ ಭ್ರಷ್ಟಾಚಾರ ಕೊವಿಡ್ ವೇಳೆ ಗೊತ್ತಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಕೇಸ್ ಹಾಕಬೇಕು. ಶ್ರೀರಾಮುಲು ಮೇಲೆ ಎಫ್ಐಆರ್ ಹಾಕಬೇಕು ಎಂದು ವರದಿ ಬಂದಿದೆ ಅಲ್ವಾ. ನಿಯಮ ಉಲ್ಲಂಘನೆ ಆಗಿದೆ ಎಂದೇ ವರದಿ ಬಂದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಜಾತಿ ಗಣತಿ ವರದಿ ಬಗ್ಗೆ ಸಚಿವ ಲಾಡ್ ಅಭಿಪ್ರಾಯ:
ಜಾತಿ ಗಣತಿ ವಸರಿ ಬಗ್ಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಮಂಡನೆಯಾಗಿದೆ. ಸಿಎಂ ವಿಶೇಷ ಕ್ಯಾಬಿನೆಟ್ಅನ್ನು ಇದರ ಬಗ್ಗೆ ಚರ್ಚೆಗಾಗಿ ಕರೆದಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ. ತಮಿಳುನಾಡಿನ ರೀತಿ ರಿಸರ್ವೇಶನ್ ಹೆಚ್ಚಿಸಬೇಕು. ಶೇ.10 ರಿಸರ್ವೇಶನ್ ಕ್ರಿಮಿಲೇಯರ್‌ನಲ್ಲಿ ಕೊಟ್ಟಿದ್ದಾರಲ್ಲ. ಅದು ಯಾರಿತೆ ಉಪಯೋಗ. ಯಾರು ಶೇ.10 ವ್ಯಾಪ್ತಿಗೆ ಬರ್ತಾರೆ? ಹೀಗಾಗಿ ರಿಸರ್ವೇಶನ್ ಹೆಚ್ಚಾದರೆ ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.
ಬೆಲೆ ಏರಿಕೆ ವಿಷ್ಯಕ್ಕೆ ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಮಾತಾಡಿದ್ದು ನೋಡಿದ್ದೇನೆ. ಯುಪಿಎ ಅವದಿಯಲ್ಲಿ ನಾವು ಆಯಿಲ್ 105 ಡಾಲರ್‌ಗೆ ಕ್ರೂಡ್ ಆಯಿಲ್ ಖರೀದಿ ಮಾಡಿ 65 ರೂ. ಲೀಟರ್ ಕೊಟ್ಟಿದ್ದೇವೆ. ಆದರೆ, ಈಗ ಕ್ರೂಡ್ ಆಯಿಲ್ ಕಡಿಮೆಯಾಗಿದೆ. ಆದರೂ, ತೈಲ ಬೆಲೆ ಕಡಿಮೆಯಾಗಿಲ್ಲ. ಕೇಂದ್ರ ಸರ್ಕಾರ ಯಾಕೆ ಸಬ್ಸಿಡಿ ಕೊಡ್ತಿಲ್ಲ? ಗ್ಯಾಸ್ ದರ ಏರಿಕೆ ಯಾಗಿದೆ. ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟರೆ ರಿಲಾಯನ್ಸ್‌ನವರು ನಷ್ಟ ಅನುಭವಿಸುತ್ತಾರೆ. ಹೀಗಾಗಿ ದರ ಕಡಿಮೆ ಮಾಡುತ್ತಿಲ್ಲ ಎಂದರು.
ಇದನ್ನೂ ಓದಿ: ಜಾತಿ ಗಣತಿ ವರದಿಗೆ ಇಂದು ಸಂಪುಟ ಅಸ್ತು?: ಸಿಎಂ ಸಿದ್ದು ತಯಾರಿ
ಇನ್ನು ರಾಷ್ಟ್ರದಲ್ಲೊ ಒಂದು ರೂಪಾಯಿ ಆಯಿಲ್ ಬೆಲೆ ಕಡಿಮೆ ಮಾಡುತ್ತಾರೆ. ವಿಜಯೇಂದ್ರ ಅವರು ರಾಗುಲ್ ಗಾಂಧಿ ಕಾಲದ್ದು ಹೇಳುತ್ತಾರೆ. ಈಗ ಗ್ಯಾಸ್‌ಗೆ 50 ರೂಪಾಯಿ ಯಾಕೆ ಹೆಚ್ಚಿಗೆ ಮಾಡಿದ್ದಾರೆ. ನೀವು ಚೆಕ್ ಮಾಡಿ ನೋಡಿ. ಜನಾಕ್ರೋಶ ಯಾತ್ರೆ ಕೇಂದ್ರ ಸರ್ಕಾರದ ವಿರುದ್ದ ಮಾಡಬೇಕು. ನಮ್ಮ ವಿರುದ್ಧವಲ್ಲ. ಅದರ ಕುರಿತು ಚರ್ಚೆ ಮಾಡಬೇಕು. ಇನ್ನು ಉತ್ತರ ಪ್ರದೇಶದಲ್ಲಿ ದೇಶವೇ ಬೆಚ್ಚಿ ಬೀಳುವಂತ ಘಟನೆಯೊಂದು ನಡೆದಿದೆ. ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಇವರು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ