ಕಲಬುರ್ಗಿ- ಮಂಗಳೂರು ವಿಮಾನ ಸಂಚಾರ ನಿತ್ಯ ಪ್ರಾರಂಭಿಸಲು ಒತ್ತಾಯ

By Suvarna News  |  First Published Jul 23, 2023, 7:46 PM IST

ನಿತ್ಯ ವಿಮಾನ ಹಾರಾಟಕ್ಕೆ ದಕ್ಷಿಣ ಕನ್ನಡ ಸಂಘ ಹರ್ಷ  ವ್ಯಕ್ತಪಡಿಸಿದೆ. ಇದರ ಜೊತೆಗೆ ಮಂಗಳೂರಿಗೆ ವಿಮಾನ ಸಂಚಾರ ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದೆ.


ಕಲಬುರಗಿ (ಜು.23): ಉಡಾನ್‌ ಯೋಜನೆ ಅಡಿಯಲ್ಲಿ ಪ್ರಾರಂಭವಾದ ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಇದೀಗ ಬೆಂಗಳೂರಿಗೆ ನಿತ್ಯ ವಿಮಾನ ಸಂಚಾರ ಪ್ರಾರಂಭವಾಗಿರುವುದು ದಕ್ಷಿಣ ಕನ್ನಡ ಸಂಘ ಹರ್ಷ ವ್ಯಕ್ತಪಡಿಸಿದೆ ಹಾಗೂ ಮಂಗಳೂರಿಗೆ ವಿಮಾನ ಸಂಚಾರ ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದೆ.

ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ನಿತ್ಯ ವಿಮಾನ ಹಾರಾಟವನ್ನು ಕಡಿತಗೊಳಿಸಿ ಪರಿಣಾಮವಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಇದೀಗ ನಿತ್ಯ ವಿಮಾನ ಹಾರಾಟ ಆರಂಭದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಅಭಿವೃದ್ಧಿಗೆ ನೆರವಾಗಲಿದೆ. ಕೂಡಲೇ ಕಲಬುರ್ಗಿ- ಮಂಗಳೂರು ಮಧ್ಯೆ ಬೆಂಗಳೂರು ಮಾರ್ಗವಾಗಿ ವಿಮಾನ ಸಂಚಾರ ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಕ್ರಮ ವಹಿಸಲಿ ಎಂದು ಸಂಘದ ಅಧ್ಯಕ್ಷ ಡಾ. ಸದಾನಂದ ಪೆರ್ಲ ಒತ್ತಾಯಿಸಿದ್ದಾರೆ.

Tap to resize

Latest Videos

undefined

ಐಟಿ ಉದ್ಯೋಗ ತೊರೆದು ಸ್ಟಾಂಡ್‌ ಅಪ್ ಕಾಮಿಡಿಯನ್ ಆದ ಈತನ ವಾರ್ಷಿಕ ದುಡಿಮೆ 1 ಕೋಟಿ!

ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ಮಾಡಲು ಭಾರತೀಯ ಪ್ರಾಧಿಕಾರವು ಗ್ರೀನ್‌ ಸಿಗ್ನಲ್‌ ನೀಡಿ ಈಗಾಗಲೇ ತಿಂಗಳು ಕಳೆದಿದೆ. ಮಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ ಹಗಲು ಹೊತ್ತಿನಲ್ಲಿ ವಿಮಾನ ಇಳಿಯಲು ಅನುಕೂಲಕರ ವೇಳೆ ಇಲ್ಲದಿರುವುದರಿಂದ ರಾತ್ರಿ ವೇಳೆ ವಿಮಾನ ಸಂಚಾರ ಸುಗಮವಾಗಿ ಪ್ರಾರಂಭಿಸಲು ಅವಕಾಶವಿದ್ದು, ಇದಕ್ಕೆ ತಕ್ಷಣ ಕೇಂದ್ರ ನಾಗರಿಕ ವಿಮಾನ ಇಲಾಖೆ ಕ್ರಮವಹಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ. ಈಗಾಗಲೇ ಕೇಂದ್ರವು ಖಾಸಗಿ ವಿಮಾನ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದೆ ಮತ್ತು ಮೂರು ತಿಂಗಳ ಒಳಗೆ ರಾತ್ರಿ ವಿಮಾನ ಸಂಚಾರ ಪ್ರಾರಂಭಿಸುವುದಾಗಿ ಮಾಹಿತಿ ಇದ್ದು ತಕ್ಷಣದಲ್ಲಿ ಪ್ರಾರಂಭಿಸಿದರೆ ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ವಿದೇಶಿ ಕಂಪೆನಿಗಳಿಂದ 1 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಪಡೆದ ಐಐಐಟಿ ಐವರು ವಿದ್ಯಾರ್ಥಿಗಳು!

ಕಲ್ಬುರ್ಗಿಯಿಂದ ನಿತ್ಯ ಆರು ಖಾಸಗಿ ಬಸ್‌ಗಳು ಮಂಗಳೂರಿಗೆ ಸಂಚರಿಸುತ್ತಿದೆ. ಈ ಭಾಗದಿಂದ ಶಿಕ್ಷಣ, ವ್ಯಾಪಾರ, ಪ್ರವಾಸ ಕ್ಕಾಗಿ ಕರಾವಳಿ ಜಿಲ್ಲೆಗಳಿಗೆ ಮತ್ತು ಪಕ್ಕದ ಕೇರಳದ ಕಣ್ಣೂರು, ಕಲ್ಲಿಕೋಟೆ, ಮುಂತಾದಡೆಗಳಿಗೆ ಕಲ್ಯಾಣ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಂದ ಪ್ರಯಾಣಿಸುತ್ತಿದ್ದು ಅವರ ಅನುಕೂಲಕ್ಕಾಗಿ ವಿಮಾನ ಸಂಚಾರ ಅತ್ಯಗತ್ಯವಾಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಲಬುರ್ಗಿ ಲೋಕಸಭಾ ಸದಸ್ಯರಾದ ಉಮೇಶ್‌ ಜಾಧವ್‌ ಮತ್ತು ಮಂಗಳೂರು ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಸಂಘವು ಈಗಾಗಲೇ ಒತ್ತಾಯಿಸಿದ್ದು ತಕ್ಷಣದ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಟ್ಟಿದೆ ಎಂದು ಡಾ. ಪೆರ್ಲ ತಿಳಿಸಿದ್ದಾರೆ.

click me!