
ಬೆಂಗಳೂರು(ಜು.22) ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದೇಶ ವಿದೇಶಗಳ ಜನರು ಉದ್ಯೋಗ ಮಾಡುತ್ತಿದ್ದಾರೆ. ಇತರ ರಾಜ್ಯದ ಹಲವರು ಇಲ್ಲೇ ನೆಲೆಸಿದ್ದಾರೆ. ಬಂದವರಿಗೆ ಉದ್ಯೋಗ ನೀಡಿ, ಕೈತುಂಬ ವೇತನ ನೀಡುವ ನಗರ ನಮ್ಮ ಬೆಂಗಳೂರು. ಆದರೆ ಇಲ್ಲಿನ ಸಂಸ್ಕೃತಿ, ಭಾಷೆ, ಪರಂಪರೆ ಗೌರವಿಸಲು ಮರೆತವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಿದ ಉದಾಹರಣೆಗಳು ಇವೆ. ಇದೀಗ ದೆಹಲಿ ಮಹಿಳೆಯೊಬ್ಬರು ಬೆಂಗಳೂರಿನಲ್ಲಿದ್ದೇನೆ ಎಂದರೆ ನನಗೆ ಕನ್ನಡ ಅರ್ಥವಾಗಬೇಕು ಎಂದಿಲ್ಲ ಎಂದು ಟ್ವೀಟ್ ಮಾಡಿದ್ದರು. ಗೂಗಲ್‌ಗೆ ಪಾಠ ಮಾಡಲು ಹೋದ ದೆಹಲಿ ಮಹಿಳೆಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿ ಮೂಲದ ವಿದ್ಯಾರ್ಥಿ ಅಮಿಷಾ ಅಗರ್ವಾಲ್ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಐಐಟಿ ವಿದ್ಯಾರ್ಥಿನಿಯಾಗಿರುವ ಅಮಿಷಾ ಸಾಮಾಜಿಕ ಮಾಧ್ಯಮ, ಯೂಟ್ಯೋಬ್ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಬರುತ್ತಿರುವ ಜಾಹೀರಾತುಗಳಿಂದ ಬೇಸರಗೊಂಡಿದ್ದಾಳೆ. ಕರ್ನಾಟಕದೊಳಗೆ ಗೂಗಲ್, ಫೇಸ್‌ಬುಕ್, ಟ್ವಿಟರ್ ಯಾವುದೇ ಮಾಧ್ಯಮಗಳನ್ನು ಬಳಸಿದರೆ, ಈ ವೇಳೆ ಬರವು ಜಾಹೀರಾತು ಕನ್ನಡದಲ್ಲೇ ಇರುತ್ತದೆ. ಹೀಗೆ ಅಮಿಷಾ ಅಗರ್ವಾಲ್‌ಗೆ ಕನ್ನಡ ಜಾಹೀರಾತುಗಳ ಕಿರಿ ಕಿರಿ ತಂದಿದೆ.
ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಇನ್ನು ಸಿಬಿಎಸ್‌ಇ ಶಿಕ್ಷಣ
ಈ ಕರಿತು ಅಮಿಷಾ ಪಟೇಲ್ ಟ್ವೀಟ್ ಮೂಲಕ ಗೂಗಲ್ ಗಮನಸೆಳೆಯಲು ಪ್ರಯತ್ನಿಸಿದ್ದಳು. ಪ್ರೀತಿಯ ಗೂಗಲ್, ನಾನು ಬೆಂಗಳೂರಿನಲ್ಲಿದ್ದೇನೆ ಎಂದ ಮಾತ್ರಕ್ಕೆ ನನಗೆ ಕನ್ನಡ ಜಾಹೀರಾತುಗಳು ಅರ್ಥವಾಗಬೇಕು ಎಂದಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ. ಗೂಗಲ್ ಗಮನಸೆಳೆಯಲು ಹೋದ ಅಮಿಷಾ ಅಗರ್ವಾಲ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಬೆಂಗಳೂರಿನಲ್ಲಿದ್ದು ಕನ್ನಡ ಕಲಿಯಲಿಲ್ಲ, ಇದರ ಜೊತೆಗೆ ಅಹಂಕಾರದ ಮಾತುಗಳು ಬೇರೆ. ಹಾಗಿದ್ದರೆ ನಿಮ್ಮ ರಾಜ್ಯಕ್ಕೆ ಮರಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡಿಗರು ಎಲ್ಲಾ ರಾಜ್ಯದ ಜನರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮಾಡಲು, ನೆಲಸಲ ಅವಕಾಶ ಮಾಡಿದ್ದಾರೆ. ಪ್ರೀತಿ ತೋರಿದ್ದಾರೆ. ಆದರೆ ಬೇರೆ ರಾಜ್ಯದಿಂದ ಬಂದು ಇಲ್ಲಿ ಕನ್ನಡ ಕಲಿಯದೇ ಇದೀಗ ಕನ್ನಡ ಯಾಕೆ ಎಂದು ಪ್ರಶ್ನಿಸುವುದು ಉತ್ತಮ ಬೆಳವಣಿಗೆ ಅಲ್ಲ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡುವು ಪ್ರಯತ್ನಗಳು ಬೇಡ. ಕರ್ನಾಟದಲ್ಲಿ ಕನ್ನಡ ಜಾಹೀರಾತು ಅಲ್ಲದೆ ಇನ್ಯಾವ ಭಾಷೆಯ ಜಾಹೀರಾತು ಬರಬೇಕು? ಹಾಗಾದರೆ ಕನ್ನಡ ಜಾಹೀರಾತುಗಳನ್ನು ಯಾವ ರಾಜ್ಯದಲ್ಲಿ ಹಾಕಬೇಕು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ