ಹಿರಿಯ ನಟಿ ಲೀಲಾವತಿ-ವಿನೋದ್ ರಾಜ್ ಮನವಿಗೆ ಸ್ಪಂದಿಸಿದ ಡಿಕೆಶಿ: ಏನಿದು ಅಹವಾಲು?

Published : Oct 15, 2023, 03:20 AM IST
ಹಿರಿಯ ನಟಿ ಲೀಲಾವತಿ-ವಿನೋದ್ ರಾಜ್ ಮನವಿಗೆ ಸ್ಪಂದಿಸಿದ ಡಿಕೆಶಿ: ಏನಿದು ಅಹವಾಲು?

ಸಾರಾಂಶ

ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್‌ ಅವರು ನಿರ್ಮಿಸಿರುವ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ನೆರವೇರಿಸುವುದಾಗಿ ಹಾಗೂ ಬಿಡಿಎ ನಿವೇಶನ ನೋಂದಣಿಗೆ ಉಂಟಾಗಿರುವ ಸಮಸ್ಯೆ ಬಗೆಹರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಿರಿಯ ನಟಿ ಲೀಲಾವತಿ ಅವರಿಗೆ ಭರವಸೆ ನೀಡಿದ್ದಾರೆ. 

ಬೆಂಗಳೂರು (ಅ.15): ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್‌ ಅವರು ನಿರ್ಮಿಸಿರುವ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ನೆರವೇರಿಸುವುದಾಗಿ ಹಾಗೂ ಬಿಡಿಎ ನಿವೇಶನ ನೋಂದಣಿಗೆ ಉಂಟಾಗಿರುವ ಸಮಸ್ಯೆ ಬಗೆಹರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹಿರಿಯ ನಟಿ ಲೀಲಾವತಿ ಅವರಿಗೆ ಭರವಸೆ ನೀಡಿದ್ದಾರೆ.  ಶನಿವಾರ ಸದಾಶಿವನಗರದ ತಮ್ಮ ನಿವಾಸಕ್ಕೆ ಆಗಮಿಸಿದ್ದ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಲೀಲಾವತಿ ಅವರ ಅನಾರೋಗ್ಯ ಸಮಸ್ಯೆಯಿಂದಾಗಿ ಖುದ್ದು ಡಿ.ಕೆ. ಶಿವಕುಮಾರ್‌ ಅವರೇ ಲೀಲಾವತಿ ಅವರು ಇದ್ದ ಕಾರಿನ ಬಳಿಗೆ ಬಂದು ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ‘ಪ್ರಾಣಿಗಳ ರಕ್ಷಣೆ ಈ ತಾಯಿ, ಮಗನ ನೆಚ್ಚಿನ ಹವ್ಯಾಸ. ಅವರು ವಾಸವಿರುವ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಉದ್ಘಾಟನೆಗೆ ದಿನಾಂಕ ನೀಡಿ ಎಂದು ಕೇಳಿದ್ದಾರೆ. ನಾನು ಸಮಯ ನೋಡಿ ದಿನಾಂಕ ನೀಡುತ್ತೇನೆ’ ಎಂದು ಭರವಸೆ ನೀಡಿದ್ದೇನೆ. ಇನ್ನು ಅವರಿಗೆ ನಿಗದಿಯಾಗಿರುವ ನಿವೇಶನ ನೋಂದಣಿ ವಿಚಾರವಾಗಿಯೂ ಏನೋ ಸಮಸ್ಯೆಯಾಗಿದೆ ಎಂದು ಮನವಿ ಸಲ್ಲಿಸಿದ್ದರು. ಈ ವಿಚಾರಗಳ ಬಗ್ಗೆ ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ ಎಂದರು.

ನಾಯಕನಿಲ್ಲದ ಬಿಜೆಪಿ ಶಿಥಿಲವಾಗುತ್ತಿದೆ: ಆಯನೂರು ಮಂಜುನಾಥ್‌ ವ್ಯಂಗ್ಯ

‘ಹಿರಿಯರಾದ ಲೀಲಾವತಿ ಅವರನ್ನು ಕರೆದುಕೊಂಡು ಬರುವುದು ಬೇಡ, ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದೆ. ಆದರೂ ಅವರು ನನ್ನ ಮೇಲೆ ಅಭಿಮಾನವಿಟ್ಟು ಬಂದಿದ್ದಾರೆ. ಅವರಿಗೆ ಉತ್ತಮವಾದ ಆರೋಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು. ಇದಕ್ಕೂ ಮೊದಲು ಲೀಲಾವತಿ ಅವರೊಂದಿಗೆ ಮಾತನಾಡಿದ ಅವರು, ನಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಇಷ್ಟು ದೂರ ಬರುವುದು ಬೇಡ ಎಂದು ಹೇಳಿದ್ದೆ, ಆದರೂ ನೀವು ಬಂದಿದ್ದು ಸಂತಸವಾಯಿತು. ನೀವು ಹೇಳಿದ ದಿನಾಂಕದಂದು ಬಂದು ಪಶುವೈದ್ಯಕೀಯ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ

ಸಿಬ್ಬಂದಿ ನಿಯೋಜನೆಗೆ ಕೇಳಿದ್ದೇವೆ: ನಟ ವಿನೋದ್ ರಾಜ್ ಮಾತನಾಡಿ, ನಾವು ಸುಸಜ್ಜಿತವಾದ ಪಶು ಚಿಕಿತ್ಸೆ ಆಸ್ಪತ್ರೆ ನಿರ್ಮಾಣ‌ ಮಾಡಿದ್ದು, ಸಿಬ್ಬಂದಿಗಳನ್ನು ಸರ್ಕಾರದ ಕಡೆಯಿಂದ ನಿಯೊಜಿಸಬೇಕಾಗಿ ಮನವಿ ಸಲ್ಲಿಸಿದ್ದೇವೆ. ಜತೆಗೆ ಸೊಂಡೆಕೊಪ್ಪ ಬಳಿ ವಿದ್ಯುತ್ ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡು ಅಂತಿಮ ಹಂತದಲ್ಲಿ ನಿಂತು ಹೋಗಿದೆ. ಅದನ್ನು ಕಾರ್ಯಗತಗೊಳಿಸಿದರೆ ಆ ಭಾಗದ ರೈತರಿಗೆ ಉಪಯೋಗವಾಗುತ್ತದೆ ಎಂದು ಮನವಿ ಸಲ್ಲಿಸಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!