ಬಡತನ ಮೆಟ್ಟಿನಿಂತು ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿ ಸಾಧನೆ; ಹೆಚ್ಚಿನ ತರಬೇತಿಗೆ ಶಾಸಕ ಭರತ್ ರೆಡ್ಡಿ ಧನ ಸಹಾಯ

By Ravi JanekalFirst Published Oct 14, 2023, 7:15 PM IST
Highlights

ಬಡತನದಲ್ಲಿ ಹುಟ್ಟಿ ಬೆಳೆದು ಬಳ್ಳಾರಿ ಜಿಲ್ಲೆಯ ಕುಗ್ರಾಮದ ಯುವತಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚನ್ನು ಪಡೆದಿರುವ ನಂದಿನಿಯವರ ಸಾಧನೆ ಬಳ್ಳಾರಿ ಜಿಲ್ಲಾಡಳಿತದಿಂದ ಗೌರವಿಸಲಾಯಿತು. ಈ ವೇಳೆ ಶಾಸಕ ಭರತ್ ರೆಡ್ಡಿ ಫೌಂಡೇಶನ್ನಿಂದ ಹೆಚ್ಚಿನ ತರಬೇತಿ ಪಡೆಯಲು ಮೂರು ಲಕ್ಷ ರೂ. ಸಹಾಯಧನ ನೀಡಿದರು.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಅ.14): ಬಟ್ಟೆ ಒಗೆದು ಇಸ್ತ್ರಿ ಮಾಡೋ ಕಾಯಕದ ಜೊತೆ ಟೀ ಅಂಗಡಿಯೊಂದನ್ನು ಇಟ್ಟುಕೊಂಡು, ಅದರಿಂದ ಬಂದ ಆದಾಯದಿಂದಲೇ ಜೀವನ ಮಾಡೋದು ಆಕೆಯ ಕುಟುಂಬದ ನಿತ್ಯದ ಕಾಯಕ.. ತಂದೆ ತಾಯಿ ಇವರ್ಯಾರು ಓದಿಲ್ಲ ಬರೆದಿಲ್ಲ. ಆದ್ರೂ, ಆಕೆಗೆ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆನ್ನುವ ಹಠ. ಬಡತನದಲ್ಲಿ ಹುಟ್ಟಿ ಬೆಳೆದು ಬಳ್ಳಾರಿ ಜಿಲ್ಲೆಯ ಕುಗ್ರಾಮದ ಯುವತಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚನ್ನು ಪಡೆದಿದ್ಧಾಳೆ. ಹಠ ಬಿಡದ ಗಟ್ಟಿಗಿತ್ತಿಯ ಸಾಧನೆಯ ಕತೆ ಇಲ್ಲಿದೆ ನೋಡಿ.

ಏಷ್ಯನ್ ಕ್ರೀಡಾಕೂಟದಲ್ಲಿ ಸಿರಗುಪ್ಪ ಮೂಲದ ಯುವತಿ ಭರ್ಜರಿ ಸಾಧನೆ ಮಾಡಿದ್ದಾರೆ. ಬಟ್ಟೆ ಒಗೆಯುವ ಕಾಯಕದ ಅಗಸರ ನಂದಿನಿ ಸಾಧನೆಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಸಾಧನೆಗೆ ಬಡತನ ಅಡ್ಡಿ ಬರೋದಿಲ್ಲ ಅನ್ನೋದಕ್ಕೆ ಈ ಯುವತಿಯ ಸಾಧನೆಯೇ ಒಂದು ಮಾದರಿ ಅಂದ್ರೂ ತಪ್ಪಾಗಲಿಕ್ಕಿಲ್ಲ. ಹೌದು, ಏಷ್ಯಾನ್  ಗೇಮ್ಸ್ ನಲ್ಲಿ  ಹೆಪ್ದಥ್ಲಾನ್ ನಲ್ಲಿ ಕಂಚು ಪಡೆಯೋ ಮೂಲಕ ನಂದಿನಿ ವಿಶೇಷ ಸಾಧನೆ ಮಾಡಿದ್ದಾರೆ.

ಸಿನಿಮೀಯ ರೀತಿಯಲ್ಲಿ ಬಳ್ಳಾರಿಯಲ್ಲಿ ಅಪಹರಣ ಕೊಪ್ಪಳದಲ್ಲಿ ಅತ್ಯಚಾರ!

ಜೀವನ ನಿರ್ವಹಣೆ ಮಾಡಲು ಹುಟ್ಟೂರಾದ ರಾರಾವಿ ಗ್ರಾಮದಲ್ಲಿ ಕಷ್ಟವಾದ ಹಿನ್ನೆಲೆ ನಂದಿನಿಯವರ ತಂದೆ ಯಲ್ಲಪ್ಪ ಮತ್ತು ತಾಯಿ ಆಯಮ್ಮ ಅವರು ನಂದಿನಿ ಚಿಕ್ಕ ಮಗುವಾಗಿದ್ದಲೇ ಆಕೆಯನ್ನು ಕರೆದುಕೊಂಡು ಹೈದ್ರಾಬಾದ್ ನಲ್ಲಿ ಇರೋ ಸಿಕಂದ್ರಬಾದ್‌ಗೆ ಹೋಗಿದ್ರು, ಸಹೋದರನ ಮನೆಯಲ್ಲಿದ್ದ ಯಲ್ಲಪ್ಪ ಚಿಕ್ಕ ಟೀ ಅಂಗಡಿಯೊಂದನ್ನು ಮಾಡಿಕೊಂಡಿದ್ರು. ತಾಯಿ ಅಯ್ಯಮ್ಮ ಮನೆ ಮನೆಗೆ ತೆರಳಿ ಬಟ್ಟೆ ಒಗರೆಯೋದು ಇಸ್ತ್ರಿ ಮಾಡೋ ಕಾಯಕ ಮಾಡುತ್ತಿದ್ರು. ಇದೆಲ್ಲವನ್ನು ಮೆಟ್ಟಿ ನಿಲ್ಲೋ ಮೂಲಕ ನಂದಿನಿ ಏಷ್ಯಾನ್ ಕ್ರೀಡಾಕೂಟದಲ್ಲಿ ಹೆಪ್ದಥ್ಲಾನ್ ನಲ್ಲಿ ಕಂಚು ಪಡೆದಿದ್ದಾರೆ. 

ನಂದಿನಿಗೆ ತವರು ಜಿಲ್ಲೆಯ  ಸನ್ಮಾನ

 ಇನ್ನೂ ನಂದಿನಿ ಅವರ ಸಾಧನೆ ಹಿನ್ನೆಲೆ ಬಳ್ಳಾರಿಯಲ್ಲಿಂದು  ಸನ್ಮಾನ ಮಾಡಲಾಯಿತು. ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ  ನಂದಿನಿ ಅವರ ಸಾಧನೆ ಕೊಂಡಾಡೋ ಮೂಲಕ ಪ್ರತಿಯೊಬ್ಬರಿಗೂ ಅವರ ಜೀವನ ಮಾದರಿಯಂದ್ರು. ಅಲ್ಲದೇ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ತಮ್ಮ ಫೌಂಡೇಷನ್ ಮೂಲಕ ನಂದಿನಿ ಅವರ ಮುಂದಿನ ತರಬೇತಿಯ ಸಹಾಯಕ್ಕಾಗಿ ಮೂರು ಲಕ್ಷ ನಗದು ಹಣವನ್ನು ನೀಡಿದ್ರು. 

ಬಳ್ಳಾರಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಬ್ರೋಕರ್ ಗಳದ್ದೇ ಕಾರುಬಾರು; ಶಾಸಕ ಭರತ್ ರೆಡ್ಡಿ ಭೇಟಿ ನೀಡಿದಾಗ ಏನಾಯ್ತು ನೋಡಿ!

ಒಲಂಪಿಕ್ ನಲ್ಲಿ ಪದಕ ಗೆಲ್ಲುವ ಆಸೆ

ಹುಟ್ಟು ಬಡತನವಾಗಿರಬಹುದು ಆದ್ರೇ, ಸಾವು ಮಾತ್ರ ಸಿರಿತನ ಮತ್ತು ಸಾಧನೆಯ ಮೂಲಕ ಜಗತ್ತಿಗೆ ಗೊತ್ತಾಗಬೇಕು ಎನ್ನುವದು ನಂದಿನಿಯವರ ಮಾತು. ಅದರಂತೆ ಬಡತನ ಮೆಟ್ಟಿನಿಂತು  ಜೀವನದಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ಮುಂದೆ ಓಲಂಪಿಕ್ ಕ್ರೀಡಾಕೂಡದಲ್ಲಿಯೂ ಸಾಧನೆ ಮಾಡಬೇಕೆನ್ನುವ ಹಂಬಲ ಈಡೇರಲಿ ಎನ್ನುವುದು ಇಡೀ ಭಾರತೀಯರ ಆಶಯವಾಗಿದೆ.

click me!