ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲಾಗಿದೆ: ಡಿಕೆ ಶಿವಕುಮಾರ

By Kannadaprabha News  |  First Published Feb 13, 2024, 8:31 PM IST

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಂತಹ ಮಹಾ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದು "ದೊಡ್ಡ ಸಮಸ್ಯೆ ಮತ್ತು ಸವಾಲಾಗಿದ್ದು,  ಇದನ್ನು ಪರಿಹರಿಸಲು ಪ್ರಮುಖ ಪರಿಹಾರದ ಅಗತ್ಯವಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಂಗಳವಾರ ವಿಧಾನಸಭೆಗೆ ತಿಳಿಸಿದರು.


ಬೆಂಗಳೂರು (ಫೆ.13): ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಂತಹ ಮಹಾ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದು "ದೊಡ್ಡ ಸಮಸ್ಯೆ ಮತ್ತು ಸವಾಲಾಗಿದ್ದು,  ಇದನ್ನು ಪರಿಹರಿಸಲು ಪ್ರಮುಖ ಪರಿಹಾರದ ಅಗತ್ಯವಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಂಗಳವಾರ ವಿಧಾನಸಭೆಗೆ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಕ್ಷೇತ್ರದ ಕೊಳೆಗೇರಿ ನಿವಾಸಿಗಳಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿಲ್ಲ ಎಂಬ ಜಯನಗರ ಬಿಜೆಪಿ ಶಾಸಕ ಸಿ ಕೆ ರಾಮಮೂರ್ತಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಅಭಿವೃದ್ಧಿ ಉಸ್ತುವಾರಿ ಸಚಿವರೂ ಕೂಡ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, 'ಬೆಂಗಳೂರಿನ ಸುಮಾರು ಶೇ.20 ಪ್ರತಿಶತದಷ್ಟು ನೀರಿನ ಅಗತ್ಯವನ್ನು ಟ್ಯಾಂಕರ್‌ಗಳ ಮೂಲಕ ಪೂರೈಸಲಾಗುತ್ತಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಪ್ರತಿ ವರ್ಷ ನಗರದ ಜನಸಂಖ್ಯೆ 10 ಲಕ್ಷ ಏರಿಕೆಯಾಗುತ್ತಿದೆ. ನೀರಿನ ಸಮಸ್ಯೆ ದೊಡ್ಡದಾಗಿದೆ. ಆದರೆ ಬೆಂಗಳೂರಿನ ಗೌರವ ಮತ್ತು ಹೆಮ್ಮೆಗಾಗಿ ನಾವು ಕುಡಿಯುವ ನೀರಿಗೆ ಆದ್ಯತೆ ನೀಡುತ್ತೇವೆ, ನಾವು ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.

Tap to resize

Latest Videos

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಚಿವರು, ಶಾಸಕರೊಂದಿಗೆ ಡಿಕೆಶಿ ಸಭೆ: ಕಾರಣವೇನು?

ಬೆಂಗಳೂರು ನಗರದಲ್ಲಿ 2013ರಿಂದ ಸರ್ಕಾರ ನೀರಿನ ದರ ಏರಿಸದಿರುವುದನ್ನು ಗಮನಿಸಿದ ಅವರು, ‘ವಿದ್ಯುತ್ ದರದಂತಹ ಎಲ್ಲ ದರಗಳನ್ನು ಹೆಚ್ಚಿಸಿ ಖರ್ಚು ಹೆಚ್ಚಿಸಿದರೂ ನೀರಿನ ದರ ಏರಿಕೆಯಾಗಿಲ್ಲ, ಹನ್ನೊಂದು ವರ್ಷ ಕಳೆದಿದೆ. ರಾಜಕೀಯ ಮತ್ತು ಇತರ ಕಾರಣಗಳಿಂದಾಗಿ. ದೊಡ್ಡ ಸಮಸ್ಯೆ ಇದೆ. ಬೆಂಗಳೂರಿಗೆ ಹೆಚ್ಚುವರಿಯಾಗಿ ಆರು ಟಿಎಂಸಿ ಅಡಿ ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದರು.

ಅಂತೆಯೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 2017 ರಿಂದ ಪ್ರತಿ ತಿಂಗಳು 10,000 ಲೀಟರ್ ಕಾವೇರಿ ನೀರನ್ನು ಕೊಳೆಗೇರಿಗಳಿಗೆ ಉಚಿತವಾಗಿ ನೀಡುತ್ತಿದೆ. ಎಸ್‌ಸಿ/ಎಸ್‌ಟಿ ಕಾಲೋನಿಗಳಲ್ಲಿ 32,510 ಕುಟುಂಬಗಳಿದ್ದು, ಜಯನಗರ ಕ್ಷೇತ್ರದಲ್ಲಿ 5,515 ಮನೆಗಳಿಗೆ ಪ್ರತಿ ತಿಂಗಳು ಉಚಿತ ಕಾವೇರಿ ನೀರು ಸಿಗುತ್ತಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಬಿಡಬ್ಲ್ಯುಎಸ್‌ಎಸ್‌ಬಿಗೆ ಅನುಪಾತ ಮತ್ತು ಇತರ ಶುಲ್ಕಗಳನ್ನು ಪಾವತಿಸಿದ ನಂತರ ನೀರಿನ ಸಂಪರ್ಕವನ್ನು ಒದಗಿಸಲಾಗುವುದು ಎಂದರು.

ಬಿವೈವಿ, ಬಿಎಸ್‌ವೈ ವಿರುದ್ಧ ತಪ್ಪು ಮಾಹಿತಿ: ಡಿಕೆಶಿ ವಿರುದ್ಧ ಎಫ್‌ಐಆರ್‌

ಬೆಂಗಳೂರಿನಲ್ಲಿ ಟ್ಯಾಂಕರ್ ಲಾಬಿ ಕುರಿತು ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, 'ಬೆಂಗಳೂರಿನ ನೀರಿನ ವಿಚಾರದಲ್ಲಿ ಏನೇಲ್ಲೇ ನಡೆಯುತ್ತದೆ ಎಂದು ಅಕ್ಕಪಕ್ಕ ಕುಳಿತ ಆರ್.ಅಶೋಕ್ ಮತ್ತು ಸುರೇಶ್ ಕುಮಾರ್‍ ರನ್ನು ಕೇಳಿ ತಿಳಿದುಕೊಳ್ಳಲಿ. ಟ್ಯಾಂಕರ್‌ಗಳಿಗೆ ಕಾವೇರಿ ನೀರು ಸಿಗುವುದಿಲ್ಲ, ಬೋರ್‌ವೆಲ್ ನೀರನ್ನೇ ಮಾರಾಟ ಮಾಡುತ್ತಾರೆ. ಬೆಂಗಳೂರಿನ ಶೇ.20ರಷ್ಟು ನೀರಿನ ಅವಶ್ಯಕತೆಯನ್ನು ಟ್ಯಾಂಕರ್ ಗಳ ಮೂಲಕ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಫ್ಯಾಕ್ಟರಿ ಅಥವಾ ಇತರ ವಿಷಯಗಳಿರಲಿ, ನಮಗೆ ಪ್ರಮುಖ ಪರಿಹಾರ ಬೇಕು, ಅದಕ್ಕಾಗಿಯೇ ನಾವು ಮೇಕೆದಾಟು ಯೋಜನೆಗಾಗಿ ಹೋರಾಡುತ್ತಿದ್ದೇವೆ. ಬೆಂಗಳೂರಿನ ನೀರಿನ ಬೇಡಿಕೆ ಈಡೇರಿಸಲು ನಾವು ಮೇಕೆದಾಟು ಯೋಜನೆ ರೂಪಿಸಿದ್ದೇವೆ. ಅದರ ಅಂಗೀಕಾರಕ್ಕೆ ಬಿಜೆಪಿ ಸದಸ್ಯರು ಸಹಕಾರ ನೀಡಲಿ. ನನಗೆ ನಿಮ್ಮ ಬೆಂಬಲ ಬೇಕು ಎಂದು ಡಿಕೆ ಶಿವಕುಮಾರ್ ಅವರು ಪ್ರತಿಪಕ್ಷಗಳ ಬೆಂಬಲ ಕೇಳಿದರು.
 

click me!