ಒರಿಜಿನಲ್ ಗಾಂಧಿ ಫ್ಯಾಮಿಲಿಯವ್ರು ಎಲ್ಲಿದ್ದಾರೋ? ಡೂಪ್ಲಿಕೇಟ್ ಗಾಂಧಿ ಅಡ್ರೆಸ್ನವರು ಮೋದಿ ಜಾತಿ ಬಗ್ಗೆ ಕೇಳ್ತಾರೆ!

By Sathish Kumar KH  |  First Published Feb 13, 2024, 8:25 PM IST

ರಾಹುಲ್ ಗಾಂಧಿ ಅವ್ರೆ ನಿಮ್ಮ ಜಾತಿ ಮೂಲ ತಿಳಿಸಿ. ಪಾಪ ಓರಿನಿಜಿನಲ್ ಗಾಂಧಿ ಪ್ಯಾಮಿಲಿಯವರು ಎಲ್ಲಿದ್ದಾರೋ, ಆದರೆ ಡುಪ್ಲಿಕೇಟ್ ಗಾಂಧಿ ಹೆಸರು ಇಟ್ಕೊಂಡವರದ್ದೆ ಹಾವಳಿ ಹೆಚ್ಚಾಗಿದೆ ಎಂದು ರಾಜುಗೌಡ ಹೇಳಿದರು. 


ಯಾದಗಿರಿ (ಫೆ.13): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದವರಲ್ಲ ಎಂದು ರಾಹುಲ್ ಗಾಂಧಿ ಯಾವ ರೀತಿ ಹೇಳುತ್ತಾರೆ. ರಾಹುಲ್ ಗಾಂಧಿ ಅವ್ರೆ ನಿಮ್ಮ ಜಾತಿ ಮೂಲ ದಯವಿಟ್ಟು ತಿಳಿಸಿ. ಪಾಪ ಓರಿನಿಜಿನಲ್ ಗಾಂಧಿ ಪ್ಯಾಮಿಲಿಯವರು ಎಲ್ಲಿದ್ದಾರೋ ದೇವರೇ ಹುಡುಕಿ ಕೊಡಬೇಕು. ಆದರೆ, ಡುಪ್ಲಿಕೇಟ್ ಅಡ್ಡ ಹೆಸರು ಇಟ್ಕೊಂಡವರದ್ದೆ ಹಾವಳಿ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಪಿಎಂ ಮೋದಿ ಒಬಿಸಿ ವರ್ಗದವರಲ್ಲವೆಂಬ  ರಾಹುಲ್ ಗಾಂಧಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಮೋದಿ ಅವರು ಹಿಂದುಳಿದವರಲ್ಲ ಎಂದು ರಾಹುಲ್ ಗಾಂಧಿ ಯಾವ ರೀತಿ ಹೇಳುತ್ತಾರೆ. ರಾಹುಲ್ ಗಾಂಧಿಯವರೇ ನಿಮ್ಮ ಜಾತಿ ಮೂಲ ದಯವಿಟ್ಟು ತಿಳಿಸಿ..! ಪಾಪ ಓರಿನಿಜಿನಲ್ ಗಾಂಧಿ ಪ್ಯಾಮಿಲಿಯವರು ಎಲ್ಲಿದ್ದಾರೋ ದೇವರೇ ಹುಡುಕಿ ಕೊಡಬೇಕು. ಡುಪ್ಲಿಕೇಟ್ ಅಡ್ಡ ಹೆಸರು ಇಟ್ಕೊಂಡವರದ್ದೆ ಹಾವಳಿ ಹೆಚ್ಚಾಗಿದೆ. ನೀವು ಡುಪ್ಲಿಕೇಟ್ ಅಡ್ರೆಸ್ ಮೇಲೆ ಇದ್ದು, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒಬಿಸಿ ಅಲ್ಲ ಅಂತ ಕೇಳುವುದು ಯಾವ ನ್ಯಾಯ. ನೀವು ಮೊದಲು, ನಿಮ್ಮದು ಯಾವ ಕಾಸ್ಟ್ ಸರ್ಟಿಫಿಕೇಟ್ ನಲ್ಲಿದೆ ಎಂಬುದನ್ನು ತಿಳಿಸಿ ಎಂದು ಮಾಹಿತಿ ನೀಡಿದರು.

Latest Videos

undefined

ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ಸಭಾಪತಿ ಬಸವರಾಜ ಹೊರಟ್ಟಿ; 8 ಬಾರಿ ಗೆಲುವಿನ ಗುಟ್ಟು ಬಹಿರಂಗ!

ರಾಹುಲ್ ಗಾಂಧಿಯವರೇ ನೀವು ಶಾಲೆಯಲ್ಲಿ ಯಾವ ಕಾಸ್ಟ್ ಬರಿಸಿದ್ರಿ ಅದನ್ನು ಕೊಡಿ. ನಿಮ್ಮನ್ನು ನೀವು ಸ್ಪಷ್ಟಪಡಿಸಿ, ಮೋದಿ ಅವರು ಬ್ಯಾಕ್‌ವರ್ಡ್‌ನವರಾಗಿದ್ದಾರೆ. ಭಾರತ ದೇಶದಲ್ಲಿ ತಂದೆ ಅವರ ಜಾತಿ ಮಕ್ಕಳಿಗೆ ಬರುತ್ತದೆ. ಹಾಗಾಗಿ, ಮೊದಲು ನೀವು ಸ್ಪಷ್ಟಪಡಿಸಿ. ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರು ರಾಹುಲ್ ಗಾಂಧಿಯಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆಂದು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗುತ್ತಿದೆ. ಪಾಪ ಅವರು ಒಳ್ಳೆಯವರು, ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿಗೆ ಅನುಕೂಲ ಮಾಡ್ತಿದ್ದಾರೆ ಎಂದು ಹೇಳಿದರು.

ಕೈ ಅಭ್ಯರ್ಥಿ ಪುಟ್ಟಣ್ಣ ಪರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮತಯಾಚನೆ ವಿಚಾರದ ಬಗ್ಗೆ ಮಾತನಾಡಿ, ಎಸ್.ಟಿ.ಸೋಮಶೇಖರ್ ಅವರಿಂದ ಈ ಹಿಂದೆ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಯಿತು. ಬಿಜೆಪಿ ಸರಕಾರ ಬರಲು ಸೋಮಶೇಖರ್ ಅವರು ಮುಖ್ಯ ಕಾರಣಿಭೂತರಾಗಿದ್ದಾರೆ. ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ ಅವರು ಬಿಜೆಪಿಗೆ ಬಂದಾಗ ಸರ್ಕಾರ ರಚನೆವಾಯಿತು. ಇಲ್ಲದಿದ್ರೆ ನಮ್ಮ ಸರ್ಕಾರ ಆಗುತ್ತಿರಲಿಲ್ಲ. ಆಕಸ್ಮಿಕವಾಗಿ ಪುಟ್ಟಣ್ಣ ಅವರು ಸೋಮಶೇಖರ್ ಹತ್ರ ಹೋಗಿರಬಹುದು. ಇದು ಏನಾಗಿದೆ ನಮಗೆ ಗೊತ್ತಿಲ್ಲ. ಸಭೆ-ಸಮಾರಂಭ ನಡೆದಾಗ ಪುಟ್ಟಣ್ಣ ಅಚ್ಯಾನಕ್ಕಾಗಿ ಹೋಗಿರಬಹುದು. ಸೋಮಶೇಖರ್ ಅವರು ಪುಟ್ಟಣ್ಣ ಪರ ಪ್ರಚಾರ ಮಾಡಿರಲಕ್ಕಿಲ್ಲ. ಸೋಮಶೇಖರ್ ಅವರು ನನಗೆ ಬಹಳ ಆತ್ಮಿಯರಾಗಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಪ್ರಧಾನಿ ಮೋದಿಯವರೇ ಉದ್ಯೋಗ ಮೇಳದ ನಾಟಕ ಸಾಕು, 20 ಕೋಟಿ ಉದ್ಯೋಗವೆಲ್ಲಿ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ಬರೆದ ಪತ್ರ ವಿಚಾರದ ಬಗ್ಗೆ ಮಾತನಾಡಿ, ವೀರಶೈವ ಮಹಾಸಭಾದಿಂದ ಪತ್ರ ಬರೆದಿರಬಹುದು. ಬಿಜೆಪಿ ಪಕ್ಷವು ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಅದೇ ತರಹ ಬೆಲ್ಲದ ಅವರಿಗೆ ವಿರೋಧ ಪಕ್ಷದ ಉಪನಾಯಕ ಸ್ಥಾನ ನೀಡಿದೆ. ಬಿಜೆಪಿ ಪಕ್ಷವು ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ. ಈ ಸಲ ಒಳ್ಳೆಯ ಬಿಜೆಪಿ ಕಾರ್ಯಕರ್ತರಿಗೆ ರಾಜ್ಯಸಭೆ ಸೀಟ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮನವಿ ಪರಿಗಣಿಸುತ್ತೇವೆ ಎಂದು ಹೇಳಿದರು.

click me!