ಭಾರ ಹೊತ್ತ ಅಭಿಮನ್ಯು ಜೊತೆಗೆ ಧನಂಜಯ, ಗೋಪಿ, ಭೀಮ, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಸಾಗಿದವು. ಕಂಜನ್ ಆನೆ ಕಾಲಿಗೆ ಉಳುಕಾಗಿರುವ ಕಾರಣ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.
ಮೈಸೂರು (ಸೆ.02): ಭಾರ ಹೊತ್ತ ಅಭಿಮನ್ಯು ಜೊತೆಗೆ ಧನಂಜಯ, ಗೋಪಿ, ಭೀಮ, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಸಾಗಿದವು. ಕಂಜನ್ ಆನೆ ಕಾಲಿಗೆ ಉಳುಕಾಗಿರುವ ಕಾರಣ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ. ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆ ಸಾಗಲಿದೆ. ಇದಕ್ಕಾಗಿ ದಸರಾ ಗಜಪಡೆಯನ್ನು ಅಣಿಗೊಳಿಸಲಾಗುತ್ತಿದೆ. ಅಂಬಾರಿ ಹೊರಲಿರುವ ಅಭಿಮನ್ಯು ಮಾತ್ರವಲ್ಲದೆ ಬೇರೆ ಆನೆಗಳ ಮೈಮೇಲೂ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತದೆ.
ಗಜಪಡೆಗೆ ಪೂಜೆ: ಭಾರ ಹೊರಿಸುವ ತಾಲೀಮಿಗೂ ಮುನ್ನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅರ್ಚಕ ಎಸ್.ವಿ.ಪ್ರಹ್ಲಾದ್ ರಾವ್ ಅವರು, ಅಭಿಮನ್ಯು ಮತ್ತು ಕುಮ್ಕಿ ಆನೆಗಳಾದ ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗೆ ಕಾಲು ತೊಳೆದು ಅರಿಶಿನಿ, ಕುಂಕುಮ, ಗಂಧ ಇರಿಸಿ ಪೂಜಿಸಿದರು. ಬಳಿಕ ಎಲ್ಲಾ ಆನೆಗಳಿಗೂ ಪಂಚಫಲ ನೀಡಿ, ದೃಷ್ಟಿ ತೆಗೆದು ಆರತಿ ಬೆಳಗಿದರು.
undefined
ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್
ಪೂಜಾ ಕಾರ್ಯ ನಡೆದ ಬಳಿಕ ಅಭಿಮನ್ಯು ಮರಳು ಮೂಟೆ ಇರಿಸಿ ಕುಮ್ಕಿ ಆನೆಯೊಂದಿಗೆ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಚಯಿಸಲಾಯಿತು. ನಂತರ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕರೆ ತರಲಾಯಿತು. ಅರಮನೆ ಮುಂಭಾಗದಿಂದ ಹೊರಟ ಅಭಿಮನ್ಯು ನೇತೃತ್ವದ ಗಜಪಡೆ ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ತಲುಪಿತು. ಕೆಲಕಾಲ ವಿಶ್ರಾಂತಿ ಬಳಿಕ ಗಜಪಡೆಯು ಬನ್ನಿಮಂಟಪದಿಂದ ಅರಮನೆಗೆ ವಾಪಸ್ ಬಂದು ಸೇರಿದವು.