ಕಲಘಟಗಿಯಲ್ಲಿ ವಕ್ಫ್ ವಿರುದ್ಡ ಪ್ರತಿಭಟನೆ:'ಆಸ್ತಿ ನಿಮ್ಮಪ್ಪಂದ' ಎಂದ ಅನ್ಯಕೋಮಿನ ವ್ಯಕ್ತಿಗೆ ಬಿತ್ತು ಧರ್ಮದೇಟು!

By Ravi Janekal  |  First Published Nov 16, 2024, 3:38 PM IST

ವಕ್ಫ್ ವಿರುದ್ಡ ಪ್ರತಿಭಟನೆ ವೇಳೆ 'ಆಸ್ತಿ ನಿಮ್ಮಪ್ಪಂದಾ?' ಎಂದ ಅನ್ಯಕೋಮಿನ ವ್ಯಕ್ತಿಗೆ ರೊಚ್ಚಿಗೆದ್ದ ಪ್ರತಿಭಟನಕಾರರು ಹಿಗ್ಗಾಮುಗ್ಗ ಥಳಿಸಿದ ಘಟನೆ ಹುಬ್ಬಳ್ಳಿಯ ಕಲಘಟಗಿಯಲ್ಲಿ ನಡೆದಿದೆ.


ಹುಬ್ಬಳ್ಳಿ (ನ.16): ಧಾರವಾಡ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಂಡಿದೆ.  ಕಲಘಟಗಿ ಪಟ್ಟಣದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಹಮ್ಮಿಕೊಂಡಿದ್ದ ಹೋರಾಟದ ವೇಳೆ ಗಲಾಟೆಯಾಗಿದೆ.. ವಿಶ್ವ ಹಿಂದೂ ಪರಿಷತ್, ಭಜರಂಗದಳ, ಕಿಸಾನ್ ಸಂಘದ ನೇತ್ವತ್ವದಲ್ಲಿ ಎಪಿಎಮ್‌ಸಿಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ರೈತರ ಜಮೀನು ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿ ವಕ್ಫ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ರು. ತಹಶೀಲ್ದಾರ್ ಕಚೇರಿಯ ಎದುರು ಕೆಲಹೊತ್ತು ಹೋರಾಟ ನಡೆಸಿದ್ರು. 

ಆಸ್ತಿ ನಿಮ್ಮಪ್ಪಂದಾ?

Tap to resize

Latest Videos

undefined

ತಹಶೀಲ್ದಾರ್ ಕಚೇರಿ ಎದುರು ಭಾಷಣ ಮಾಡುತ್ತಿದ್ದ ಮುಖಂಡರೊಬ್ಬರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಕೆಲವರು ದೇಶದ ಆಸ್ತಿಯನ್ನು ತಮ್ಮಪ್ಪನ ಮನೆ ಆಸ್ತಿ ಎಂದುಕೊಂಡಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಅಲ್ಲಿಯೇ ನೋಡುತ್ತಾ ನಿಂತಿದ್ದ ಮುಸ್ಲಿ ವ್ಯಕ್ತಿಯೊಬ್ಬ ಆಸ್ತಿ ನಿಮ್ಮಪ್ಪಂದಾ ಅಂತಾ ಪ್ರತಿಭಟನಾಕಾರರನ್ನು  ಪ್ರಶ್ನಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ವ್ಯಕ್ತಿಯನ್ನು ಥಳಿಸಿದ್ದಾರೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದಾರೆ.

 

ವಕ್ಫ್‌ಗೆ ಮುಸ್ಲಿಂ ವಿವಾಹ ನೋಂದಣಿ ಅಧಿಕಾರ ಕೊಟ್ಟಿದ್ದು ಹೇಗೆ?: ಹೈಕೋರ್ಟ್‌

ಪ್ರತಿಭಟನೆ ವೇಳೆ ಉದ್ಧಟತನ ತೋರಿದ ವ್ಯಕ್ತಿಯನ್ನು ಕಲಘಟಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಇದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ‌.

click me!